ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ 'SSMB 29' ಸಿನಿಮಾ..! ಗುಟ್ಟು ಬಿಟ್ಟು ಕೊಡದೇ ಚಿತ್ರೀಕರಣ ನಡೆಸುತ್ತಿರುವ ರಾಜಮೌಳಿ... !

ಸೌತ್‌ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಖ್ಯಾತ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಅವರ ಕಾಂಬಿನೇಷನ್‌ನಲ್ಲಿ 'SSMB 29'  ಎಂಬ ಹೊಸ ಸಿನಿಮಾ ಬರಲಿದೆ ಎನ್ನುವ ಸುದ್ದಿ ಈಗ ಭಾರತೀಯ ಚಿತ್ರರಂಗದಲ್ಲಿ ಎಲ್ಲರನ್ನು ಕುತೂಹಲ ಕೆರಳಿಸುವಂತೆ ಮಾಡಿದೆ.

Written by - Manjunath Naragund | Last Updated : Mar 6, 2025, 01:22 PM IST
  • ಕೆಲವು ದಿನಗಳ ಹಿಂದೆ ಚಿತ್ರದ ಶೂಟಿಂಗ್‌ನ ಫೋಟೋ ಮತ್ತು ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು
  • ಆ ವಿಡೀಯೊಗಳು ಹೈದ್ರಾಬಾದ್‌ ಮತ್ತು ವಾರಾಣಾಸಿಯ ದೇವಾಲಯಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದ ದೃಶ್ಯತುಣಕುಗಳಾಗಿವೆ
  • ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಶೂಟ್​ನಲ್ಲಿ ಭಾಗಿಯಾಗಲಿದ್ದಾರೆ.
ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ 'SSMB 29' ಸಿನಿಮಾ..! ಗುಟ್ಟು ಬಿಟ್ಟು ಕೊಡದೇ ಚಿತ್ರೀಕರಣ ನಡೆಸುತ್ತಿರುವ ರಾಜಮೌಳಿ... !

ಹೈದಾರಾಬಾದ್: ಸೌತ್‌ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಖ್ಯಾತ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಅವರ ಕಾಂಬಿನೇಷನ್‌ನಲ್ಲಿ 'SSMB 29'  ಎಂಬ ಹೊಸ ಸಿನಿಮಾ ಬರಲಿದೆ ಎನ್ನುವ ಸುದ್ದಿ ಈಗ ಭಾರತೀಯ ಚಿತ್ರರಂಗದಲ್ಲಿ ಎಲ್ಲರನ್ನು ಕುತೂಹಲ ಕೆರಳಿಸುವಂತೆ ಮಾಡಿದೆ.

Add Zee News as a Preferred Source

ಹೌದು, ರಾಜ್ ಮೌಳಿ ಚಿತ್ರಗಳೆಂದರೆ ಹಾಗೇ, ಚಿತ್ರಕಥೆಯಿಂದ ಹಿಡಿದು ಶೂಟಿಂಗ್ ವರೆಗೆ ಎಲ್ಲವೂ ಕೂಡ ವೈಭವಯುತವಾಗಿರುತ್ತವೆ. ಜೊತೆಗೆ ಪ್ರತಿ ಚಿತ್ರವನ್ನು ಅವರು ವಿಭಿನ್ನವಾಗಿ ನಿರ್ದೇಶಿಸಿರುತ್ತಾರೆ ಎನ್ನುವುದು ಸಿನಿ ಪ್ರೇಕ್ಷಕರರ ನಂಬಿಕೆಯಾಗಿದೆ. ಇದನ್ನು ಅವರು ತಮ್ಮ ಚಿತ್ರಗಳ ಮೂಲಕ ಆಗಾಗ ಸಾಬೀತು ಮಾಡುತ್ತಲೇ ಬಂದಿದ್ದಾರೆ, ಮಗದೀರ್, ಈಗ, ಬಾಹುಬಲಿ, ಆರ್,ಆರ್,ಆರ್ ರಂತಹ ಸಿನಿಮಾಗಳು ವಿಭಿನ್ನ ಶೈಲಿಯ ಚಿತ್ರಕಥೆ ಹಾಗೂ ನಿರ್ಮಾಣದಲ್ಲಿ ಹೆಸರು ಮಾಡಿವೆ. ಹಾಗಾಗಿಯೇ.ಈಗ ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಜೊತೆಗೆ ಮಾಡುತ್ತಿರುವ SSMB 29' ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಆದರೆ ಇದುವರೆಗೂ ರಾಜ್ ಮೌಳಿ ಮಾತ್ರ, ಈ ಸಿನಿಮಾದ ಬಗ್ಗೆ ಯಾವುದೇ ಅಪ್ಡೇಟ್ ಗಳನ್ನು ನೀಡಿಲ್ಲ, ಶೂಟಿಂಗ್ ಕೆಲಸ ಮಾತ್ರ ಭರದಿಂದ ಸಾಗುತ್ತಿದೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಈ ವರ್ಷ ಏಪ್ರಿಲ್ ನಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡುವ ಪ್ಲಾನ್ ನ್ನು ಚಿತ್ರ ತಂಡ ಹಾಕಿಕೊಂಡಿದೆ ಎನ್ನಲಾಗುತ್ತಿದೆ.ಈ ಸಿನಿಮಾದಲ್ಲಿ ಮಹೇಶ್ ಬಾಬು ಹಿಂದೆಂದಿಗಿಂತಲೂ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಾಗಾಗಿ ಅಭಿಮಾನಿಗಳಿಗೆ ಈ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.Image

ಕೆಲವು ದಿನಗಳ ಹಿಂದೆ ಚಿತ್ರದ ಶೂಟಿಂಗ್‌ನ ಫೋಟೋ ಮತ್ತು ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಆ ವಿಡೀಯೊಗಳು ಹೈದ್ರಾಬಾದ್‌ ಮತ್ತು ವಾರಾಣಾಸಿಯ ದೇವಾಲಯಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದ ದೃಶ್ಯತುಣಕುಗಳಾಗಿವೆ ಎನ್ನಲಾಗಿದೆ.ರಾಜಮೌಳಿಯವರ ಈ ಬೃಹತ್ ಪ್ರಾಜೆಕ್ಟ್​​​ನಲ್ಲಿ ಮಲಯಾಳಂನ  ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಅರಣ್ಯ ಪ್ರದೇಶದಲ್ಲಿ ನಡೆಯಲಿದೆ ಎನ್ನಲಾಗಿದೆ. ಇತ್ತೀಚಿಗೆ ನಟಿ ಪ್ರಿಯಾಂಕಾ ಚೋಪ್ರಾ ಹೈದರಾಬಾದ್ ನಲ್ಲಿನ ದೇವಸ್ತಾನಕ್ಕೆ ಭೇಟಿಯಾಗಿರುವುದು ಹಾಗೂ ರಾಜಮೌಳಿ ಅವರು ಪೋಸ್ಟ್ ಮಾಡಿದ ಫೋಟೋವೊಂದಕ್ಕೆ ಕಾಮೆಂಟ್ ಮಾಡಿರುವುದು SSMB 29 ಚಿತ್ರದಲ್ಲಿ ಅವರು ನಟಿಸಲಿದ್ದಾರೆ ಎನ್ನುವುದಕ್ಕೆ ಖಾತ್ರಿಯಾಗಿದೆ.

ಸಿನಿಮಾದ ಇನ್ನುಳಿದ ಪ್ರಮುಖ ದೃಶ್ಯಗಳನ್ನು ಒಡಿಸ್ಸಾದ ಕೊರಾಪುಟ್ ಎಂಬಲ್ಲಿ 12 ದಿನ ಚಿತ್ರೀಕರಣ ನಡೆಸಲಿದೆ.ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಶೂಟ್​ನಲ್ಲಿ ಭಾಗಿಯಾಗಲಿದ್ದಾರೆ.ಸದ್ಯ ಸಿನಿಮಾದ ಸಲುವಾಗಿ ಭಾರತದಲ್ಲಿ ಪ್ರಿಯಾಂಕಾ ಇನ್ನಷ್ಟು ದಿನಗಳ ಕಾಲ ಇರಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

About the Author

Trending News