ಕೇವಲ 'SSMB29' ರಿಲೀಸ್‌ ಇವೆಂಟ್‌ಗೆ ಖರ್ಚಾಗುವ ಹಣವೇಷ್ಟು ಗೊತ್ತೆ? ಆ ಹಣದಲ್ಲೇ 4-5 ಸಿನಿಮಾ ಮಾಡಬಹುದು

SSMB29 Globe Trotter event : ಇನ್ನು ಎರಡು ದಿನಗಳಲ್ಲಿ SSMB29 ಗ್ಲೋಬ್‌ಟ್ರೋಟರ್ ಕಾರ್ಯಕ್ರಮ ನಡೆಯುತ್ತಿದೆ. ಈ ಶೋವನ್ನು ನೋಡಲು ಬರೀ ನಮ್ಮ ದೇಶದ ಸಿನಿರಸಿಕರು ಅಲ್ಲ, ಜಗತ್ತಿನಾದ್ಯಂತ ಜನ ಕಾಯುತ್ತಿದ್ದಾರೆ. ಅಚ್ಚರಿ ವಿಚಾರ ಅಂದ್ರೆ ಈ ಇವೆಂಟ್‌ಗೆ ಖರ್ಚಾಗುವ ಹಣ.. ಅದರ ವಿಶೇಷತೆಗಳು.. 

Written by - Krishna N K | Last Updated : Nov 13, 2025, 07:44 PM IST
    • ಇನ್ನು ಎರಡು ದಿನಗಳಲ್ಲಿ SSMB29 ಗ್ಲೋಬ್‌ಟ್ರೋಟರ್ ಕಾರ್ಯಕ್ರಮ ನಡೆಯುತ್ತಿದೆ
    • ಈ ಶೋವನ್ನು ನೋಡಲು ಬರೀ ನಮ್ಮ ದೇಶದ ಸಿನಿರಸಿಕರು ಅಲ್ಲ, ಜಗತ್ತಿನಾದ್ಯಂತ ಜನ ಕಾಯುತ್ತಿದ್ದಾರೆ
    • ರಾಜಮೌಳಿ - ಮಹೇಶ್ ಬಾಬು ಕಾಂಬಿನೇಷನ್‌ನ ಈ 'SSMB29' ಸಿನಿಮಾದ ಇವೆಂಟ್‌
ಕೇವಲ 'SSMB29' ರಿಲೀಸ್‌ ಇವೆಂಟ್‌ಗೆ ಖರ್ಚಾಗುವ ಹಣವೇಷ್ಟು ಗೊತ್ತೆ? ಆ ಹಣದಲ್ಲೇ 4-5 ಸಿನಿಮಾ ಮಾಡಬಹುದು

Globe Trotter event budget : ರಾಜಮೌಳಿ ಗ್ಲೋಬ್‌ಟ್ರೋಟರ್ ಕಾರ್ಯಕ್ರಮಕ್ಕಾಗಿ ಎಲ್ಲಾ ಭಾರತೀಯ ಸಿನಿರಸಿಕರು ಕಾಯುತ್ತಿದ್ದಾರೆ. ಭಾರತೀಯ ಸಿನಿಮಾ ಇತಿಹಾಸದಲ್ಲಿ ನಾವು ಇಲ್ಲಿಯವರೆಗೆ ಅನೇಕ ದೊಡ್ಡ ಯೋಜನೆಗಳನ್ನು ನೋಡಿದ್ದೇವೆ. ಆದರೆ ಎಸ್.ಎಸ್. ರಾಜಮೌಳಿ - ಮಹೇಶ್ ಬಾಬು ಕಾಂಬಿನೇಷನ್‌ನ ಈ 'SSMB29' ಅವೆಲ್ಲಕ್ಕಿಂತ ಭಿನ್ನವಾಗಿದೆ.

Add Zee News as a Preferred Source

ಒಂದಲ್ಲ, ಎರಡಲ್ಲ.. ಈ ಸಿನಿಮಾ ಒಂದೇ ಬಾರಿಗೆ 120 ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ ಅಂದ್ರೆ ನೀವೇ ಊಹಿಸಿಕೊಳ್ಳಿ ಸಿನಿಮಾದ ರೇಂಜ್‌ ಹೇಗಿರುತ್ತೆ ಅಂತ. ಈ ಸಿನಿಮಾ ಹಾಲಿವುಡ್‌ನಲ್ಲಿ ಅವತಾರ್ ಮತ್ತು ಅವೆಂಜರ್ಸ್ ಲೆವೆಲ್‌ಗೆ ಬಿಡುಗಡೆಯಾಗಲಿದೆಯಂತೆ. ಸ್ಟೀವನ್ ಸ್ಪೀಲ್‌ಬರ್ಗ್ ಮತ್ತು ಜೇಮ್ಸ್ ಕ್ಯಾಮರೂನ್‌ರಂತಹ ನಿರ್ದೇಶಕ ದಿಗ್ಗಜರು ಕೂಡ ಈಗಾಗಲೇ ರಾಜಮೌಳಿ ಅವರ RRR ಸಿನಿಮಾದ ಮೇಕಿಂಗ್ ಅನ್ನು ಹೊಗಳಿದ್ದಾರೆ.. SSMB29 ಹೇಗಿರುತ್ತೆ ಎಂಬುದನ್ನು ನೋಡಲು ಕಾಯುತ್ತಿದ್ದಾರೆ.. 

ಇದನ್ನೂ ಓದಿ:ಇದು ಯಾಕೋ ಅತಿಯಾಯ್ತು..! ಹೊಸ ಡ್ರೇಸ್‌ ತೋರಿಸಲು ಬಂದ ಸ್ಪಂದನಾಗೆ ಗಿಲ್ಲಿ ಮಾಡಿದ್ದೇನು ನೋಡಿ.. ವಿಡಿಯೋ ವೈರಲ್‌

ಇತ್ತೀಚೆಗೆ ಬಿಡುಗಡೆಯಾದ ಪೃಥ್ವಿರಾಜ್ ಸುಕುಮಾರನ್ ಅವರ "ಕುಂಭ" ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಅವರ "ಮಂದಾಕಿನಿ" (Mandakini) ಫಸ್ಟ್ ಲುಕ್ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಸುನಾಮಿ ಎಬ್ಬಿಸಿವೆ. ಹಿಂದೆಂದೂ ನೋಡಿರದ ಶೈಲಿಯಲ್ಲಿ ರಚಿಸಿದ ಈ ಪಾತ್ರಗಳು ಜನರ ಗಮನ ಸೆಳೆಯುತ್ತಿವೆ..

ಅಂದಹಾಗೆ, ನವೆಂಬರ್ 15 ರಂದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿರುವ 'ಗ್ಲೋಬ್ ಟ್ರಾಟರ್ ಈವೆಂಟ್' ಇಡೀ ಚಲನಚಿತ್ರ ಜಗತ್ತಿನ ಗಮನ ಸೆಳೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸುಮಾರು 30 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಅಂತ ಹೇಳಲಾಗುತ್ತಿದೆ. ಟಾಲಿವುಡ್ ಮೂಲಗಳ ಪ್ರಕಾರ, ಇದರ ಸ್ಟ್ರೀಮಿಂಗ್ ಹಕ್ಕುಗಳನ್ನು 'ಜಿಯೋ ಹಾಟ್ ಸ್ಟಾರ್' 50 ಕೋಟಿಗೆ ಖರೀದಿಸಿದೆ ಎಂದು ವರದಿಯಾಗಿದೆ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News