)
Sudharani Husband : ನಟಿ ಸುಧಾರಾಣಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗದಲ್ಲಿ ಬಹುದೊಡ್ಡ ಯಶಸ್ಸನ್ನು ಕಂಡರೂ, ವೈಯಕ್ತಿಕ ಬದುಕು ಮಾತ್ರ ನರಕಕ್ಕೆ ಸಮನಂತಿತ್ತು.
ನಟಿ ಸುಧಾರಾಣಿ ಸುಮಾರು ಐದು ದಶಕಗಳಿಂದ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. ಶಿವರಾಜಕುಮಾರ್ ಆನಂದ್ ಸಿನಿಮಾ ಮೂಲಕ 13 ನೇ ವಯಸ್ಸಿನಲ್ಲೇ ನಟಿಯಾಗಿ ಬಣ್ಣದ ಲೋಕಕ್ಕೆ ಪ್ರವೇಶಿಸಿದರು.
ಸದ್ಯ ನಟಿ ಸುಧಾರಾಣಿ ಜೀ ಕನ್ನಡ ವಾಹಿನಿಯಲ್ಲಿ ಬರುವ ಶ್ರೀರಸ್ತು ಶುಭಮಸ್ತು ಸಿರೀಯಲ್ನಲ್ಲಿ ತುಳಸಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸುಧಾರಾಣಿ ಮೊದಲು ಸಂಜಯ್ ಎಂಬ ವೈದ್ಯರನ್ನು ಮದುವೆಯಾಗಿ ಅಮೆರಿಕದಲ್ಲಿ ವಾಸವಿದ್ದರು. ಆದರೆ ಈ ವ್ಯಕ್ತಿ ಪ್ರತಿನಿತ್ಯ ಕುಡಿದು ಸುಧಾರಾಣಿಗೆ ಚಿತ್ರಹಿಂಸೆ ನೀಡುತ್ತಿದ್ದರು ಎನ್ನಲಾಗುತ್ತದೆ.
ಮೊದಲ ಪತಿಯ ಹಿಂಸೆ ತಾಳಲಾರದೇ ಸುಧಾರಾಣಿ ವಿಚ್ಛೇದನ ಪಡೆದು ಭಾರತಕ್ಕೆ ಮರಳಿದರಂತೆ. ಆ ನಂತರ ಸುಧಾರಣಿಯವರ ಕೈ ಹಿಡಿದಿದ್ದು ಗೋವರ್ಧನ್.
ಮೊದಲ ಮದುವೆಯ ವಿಚ್ಛೇದನದ ಹಲವಾರು ವರ್ಷಗಳ ಬಳಿಕ ಸುಧಾರಾಣಿ ಗೋವರ್ಧನ್ ಅವರ ಜೊತೆ ಎರಡನೇ ಮದುವೆಯಾದರು. ಈ ದಂಪತಿಗಳ ನಡುವೆ ಆರು ವರ್ಷ ವಯಸ್ಸಿನ ಅಂತರವಿದೆ.