Shah rukh khan daughter Suhana khan: ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸಿನಿರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ಮುಂಬೈನಲ್ಲಿ ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಇಬ್ಬರೂ ಶ್ವೇತಾ ಬಚ್ಚನ್ ಜೊತೆ ಭೋಜನಕೂಟದಲ್ಲಿ ಭಾಗವಹಿಸಿದ್ದಾರೆ. ಜನಪ್ರಿಯ ರೆಸ್ಟೋರೆಂಟ್‌ನಿಂದ ಶ್ವೇತಾ ಬಚ್ಚನ್, ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಮೂವರು ಹೊರಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶ್ವೇತಾ ಬಚ್ಚನ್ ಅವರು ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರ ಮಗಳು. ಸುಹಾನಾ, ಅಗಸ್ತ್ಯ ಮತ್ತು ಶ್ವೇತಾ ಡಿನ್ನರ್ ಪಾರ್ಟಿಗೆ ಸ್ಟೈಲಿಶ್ ಮತ್ತು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡರು.
ಸುಹಾನಾ ಮತ್ತು ಅಗಸ್ತ್ಯ ಒಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಅನೇಕ ಬಾರಿ ಸುಹಾನಾ ಮತ್ತು ಅಗಸ್ತ್ಯ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹಲವು ದಿನಗಳಿಂದ ಇವರಿಬ್ಬರ ಡೇಟಿಂಗ್ ವದಂತಿ ಹಬ್ಬಿದೆ. ಈ ಹಿಂದೆ ಲಂಡನ್‌ನಲ್ಲಿ ಸುಹಾನಾ ಮತ್ತು ಅಗಸ್ತ್ಯ ಒಟ್ಟಿಗೆ ಪಾರ್ಟಿ ಮಾಡುತ್ತಿದ್ದರು. ಕಳೆದ ವರ್ಷ ಅನನ್ಯ ಪಾಂಡೆ ಅವರ ಕಾಲ್ ಮಿ ಬೇ ಪ್ರೀಮಿಯರ್‌ನಲ್ಲಿ ಸುಹಾನಾ ಮತ್ತು ಅಗಸ್ತ್ಯ ಜೋಡಿಯಾಗಿ ಬಂದರು. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ : ಯೋಗರಾಜ್ ಭಟ್ ಜೊತೆ ಮೋಹಕ ತಾರೆ ರಮ್ಯಾ ಸಿನಿಮಾ
ಸುಹಾನಾ ಮತ್ತು ಅಗಸ್ತ್ಯ ಇಬ್ಬರೂ ತಮ್ಮ ಸಿನಿಮಾ ತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದಾರೆ. ಸುಹಾನಾ ತನ್ನ ತಂದೆ ಶಾರುಖ್ ಖಾನ್ ಜೊತೆಗೆ ತನ್ನ ಮೊದಲ ಸಿನಿಮಾ ಕಿಂಗ್‌ನಲ್ಲಿ ನಟಿಸಲಿದ್ದಾರೆ. ಸುಜೋಯ್ ಘೋಷ್ ನಿರ್ದೇಶಿಸಿದ ಈ ಚಿತ್ರವು ಸಿದ್ಧಾರ್ಥ್ ಆನಂದ್ ನೇತೃತ್ವದ ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‌ಗಳನ್ನು ಒಳಗೊಂಡಿದ್ದು, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಾಣವಾಗಿದೆ. ಮೇ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
1971 ರ ಇಂಡೋ-ಪಾಕ್ ಯುದ್ಧವನ್ನು ಆಧರಿಸಿದ ಶ್ರೀರಾಮ್ ರಾಘವನ್ ನಿರ್ದೇಶನದ ಇಕ್ಕಿಸ್‌ಗೆ ಅಗಸ್ತ್ಯ ತಯಾರಿ ನಡೆಸುತ್ತಿದ್ದಾರೆ. ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್ ಪಾತ್ರದಲ್ಲಿ ಅಗಸ್ತ್ಯ ನಂದ ನಟಿಸಲಿದ್ದಾರೆ. ಅರುಣ್ ಖೇತ್ರಪಾಲ್ ತಂದೆ ಬ್ರಿಗೇಡಿಯರ್ ಎಂ.ಎಲ್. ಖೇತ್ರಪಾಲ್ ಪಾತ್ರದಲ್ಲಿ ಹಿರಿಯ ನಟ ಧರ್ಮೇಂದ್ರ ಅಭಿನಯಿಸಲಿದ್ದಾರೆ.
ಇದನ್ನೂ ಓದಿ : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಲ್ಲವೇ ಅಲ್ಲ... ಈಕೆಯೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ...
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









