ರಜನಿಕಾಂತ್‌-ಕಮಲ್‌ ಹಾಸನ್‌ ಸಿನಿಮಾಗೆ ಪ್ರಾರಂಭದಲ್ಲೇ ವಿಘ್ನ! ಚಿತ್ರತಂಡದಿಂದ ಏಕಾಏಕಿ ಹೊರ ನಡೆದ ನಿರ್ದೇಶಕ

Sundar C on Thalaivar 173 : ರಜನಿಕಾಂತ್-ಕಮಲ್ ಹಾಸನ್ ಪುನರ್ಮಿಲನದ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದ ಖ್ಯಾತ ನಿರ್ದೇಶಕ ಸುಂದರ್ ಸಿ ಈ ಅವಕಾಶದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಅಸಲಿಗೆ ಏನಾಯ್ತು.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Written by - Krishna N K | Last Updated : Nov 13, 2025, 09:01 PM IST
    • ರಜನಿಕಾಂತ್-ಕಮಲ್ ಹಾಸನ್ ಪುನರ್ಮಿಲನದ ಚಿತ್ರ
    • Thalaivar 173 ಚಿತ್ರದಿಂದ ಹೊರ ಬಂದ ಖ್ಯಾತ ನಿರ್ದೇಶಕ ಸುಂದರ್
    • ರಜನಿಕಾಂತ್‌- ಕಮಲ್‌ ಹಾಸನ ಪುನರ್ಮಿಲನದ ಚಿತ್ರವನ್ನು ಸುಂದರ್ ಸಿ ನಿರ್ದೇಶಸಬೇಕಿತ್ತು
ರಜನಿಕಾಂತ್‌-ಕಮಲ್‌ ಹಾಸನ್‌ ಸಿನಿಮಾಗೆ ಪ್ರಾರಂಭದಲ್ಲೇ ವಿಘ್ನ! ಚಿತ್ರತಂಡದಿಂದ ಏಕಾಏಕಿ ಹೊರ ನಡೆದ ನಿರ್ದೇಶಕ

Thalaivar 173 updates : ರಜನಿಕಾಂತ್-ಕಮಲ್ ಹಾಸನ್ ಪುನರ್ಮಿಲನ ಚಿತ್ರವನ್ನು ನಿರ್ದೇಶಿಸುವ ಅವಕಾಶದಿಂದ ಹಿಂದೆ ಸರಿಯುತ್ತಿರುವುದಾಗಿ ನಿರ್ದೇಶಕ ಸುಂದರ್ ಸಿ ಘೋಷಿಸಿದ್ದಾರೆ. ರಜನಿಕಾಂತ್ ಪ್ರಸ್ತುತ 'ಜೈಲರ್ 2' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ಮಿಸಿರುವ ಈ ಚಿತ್ರ ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅನಿರುದ್ಧ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇದನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ.

Add Zee News as a Preferred Source

ಅಂದಹಾಗೆ.. ರಜನಿಕಾಂತ್‌- ಕಮಲ್‌ ಹಾಸನ ಪುನರ್ಮಿಲನದ ಚಿತ್ರವನ್ನು ಸುಂದರ್ ಸಿ ನಿರ್ದೇಶಸಬೇಕಿತ್ತು. ಈ ಚಿತ್ರವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಿಸುತ್ತಿದೆ. ಕಮಲ್ ಇತ್ತೀಚೆಗೆ ಈ ಬಗ್ಗೆ ಘೋಷಣೆ ಸಹ ಮಾಡಿದ್ದರು.. 2027 ರಲ್ಲಿ ಪೊಂಗಲ್ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ರಿಲೀಸ್‌ ಮಾಡುವುದಾಗಿ ಸಹ ತಿಳಿಸಿದ್ದರು.

ಇದನ್ನೂ ಓದಿ:ಕೇವಲ 'SSMB29' ರಿಲೀಸ್‌ ಇವೆಂಟ್‌ಗೆ ಖರ್ಚಾಗುವ ಹಣವೇಷ್ಟು ಗೊತ್ತೆ?

ಕಮಲ್ ಹಾಸನ್ ತಮ್ಮ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಿ, 'ತಲೈವರ್ 173' ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌ನ ನಿರ್ಮಾಣವಾಗಿದ್ದು, ಸುಂದರ್.ಸಿ ನಿರ್ದೇಶಿಸಿದ್ದಾರೆ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ" ಎಂದು ಮಾಹಿತಿ ನೀಡಿದ್ದರು.

ಈ ಪರಿಸ್ಥಿತಿಯಲ್ಲಿ, ನಿರ್ದೇಶಕ ಸುಂದರ್.ಸಿ ಅವರು ಚಿತ್ರದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಡೈರೆಕ್ಟರ್‌.. "ಭಾರವಾದ ಹೃದಯದಿಂದ ನಾನು ನಿಮ್ಮೊಂದಿಗೆ ಕೆಲವು ಪ್ರಮುಖ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅನಿರೀಕ್ಷಿತ ಮತ್ತು ಅನಿವಾರ್ಯ ಕಾರಣದಿಂದಾಗಿ 'ತಲೈವರ್ 173' ಚಿತ್ರದಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News