Suniel Shetty father life story : ಸುನೀಲ್ ಶೆಟ್ಟಿ ಈ ಹೆಸರು ಕೇಳಿಲ್ಲ ಎನ್ನುವವರಿಲ್ಲ ಬಿಡಿ.. ಇವರ ಜೀವನ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ. ಈಗ ಯಶಸ್ವಿ ನಟರಾಗಿರುವ ಇವರ ಜೀವನವು ಅನೇಕ ಏರಿಳಿತಗಳಿಂದ ತುಂಬಿದೆ. ಅಂದಹಾಗೆ ಇವರ ತಂದೆ, ಮಂಗಳೂರು ಮೂಲದವರು, ಒಂಬತ್ತನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಿ, ನಂತರ ಉತ್ಸಾಹ ಮತ್ತು ಕಠಿಣ ಪರಿಶ್ರಮದ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆದರು.
ಹೌದು.. ಇತ್ತೀಚಿಗೆ ಸುನೀಲ್ ಅವರು ತಮ್ಮ ತಂದೆ ವೀರಪ್ಪ ಶೆಟ್ಟಿ ಅವರ ಕುರಿತು ಮಾತನಾಡುವಾಗ, ಹಲವಾರು ಅಚ್ಚರಿ ವಿಚಾರಗಳನ್ನು ಬಿಚ್ಚಿಟ್ಟರು. ಅಂದಹಾಗೆ ಸುನೀಲ್ ಅವರ ತಂದೆ ಮೊದಲು ಮೇಜು ಒರೆಸುವ ಕೆಲಸ ಮಾಡುತ್ತಿದ್ದರು. ನಂತರ ರೆಸ್ಟೋರೆಂಟ್ ಮ್ಯಾನೇಜರ್ ಕೆಲಸಕ್ಕೆ ಬಡ್ತಿ ಪಡೆದರು. ಅಂತಿಮವಾಗಿ ಮಾಲೀಕರರಾದರು.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಫೋನ್ ಬಳಸುತ್ತಾರಾ..? ಸಾಕ್ಷಿ ಸಮೇತ ಸಿಕ್ಕಿತು ಉತ್ತರ.. ವಿಡಿಯೋ ವೈರಲ್
ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ವಿಶೇಷ ಸಂದರ್ಶನದಲ್ಲಿ ಸುನೀಲ್ ತಮ್ಮ ತಂದೆ ಎದುರಿಸಿದ ಹೋರಾಟಗಳ ಬಗ್ಗೆ ಮಾತನಾಡಿದರು. ನನ್ನ ತಂದೆ 9 ವರ್ಷದ ಮಗುವಾಗಿದ್ದಾಗ ಓಡಿಹೋಗಿ ಮುಂಬೈಗೆ ಬಂದರು. ಅವರಿಗೆ ತಂದೆ ಇರಲಿಲ್ಲ, ಮೂವರು ಸಹೋದರಿಯರು ಇದ್ದರು. ಒಂಬತ್ತನೇ ವಯಸ್ಸಿನಲ್ಲಿ ದಕ್ಷಿಣ ಭಾರತದ ರೆಸ್ಟೋರೆಂಟ್‌ನಲ್ಲಿ ಕೆಲಸ ಕಂಡುಕೊಂಡರು, ಏಕೆಂದರೆ ಅದು ನಮ್ಮ ಸಮುದಾಯದ ವಿಷಯ, ನಾವು ಪರಸ್ಪರ ಬೆಂಬಲಿಸುತ್ತೇವೆ. ಅವರ ಮೊದಲ ಕೆಲಸವೆಂದರೆ ಮೇಜುಗಳನ್ನು ಸ್ವಚ್ಛಗೊಳಿಸುವುದು. ಅವರು ತುಂಬಾ ಚಿಕ್ಕವರಾಗಿದ್ದರು, ಎಲ್ಲಾ ಬದಿಗಳನ್ನು ಸ್ವಚ್ಛಗೊಳಿಸಲು ಅವರು ಮೇಜಿನ ಸುತ್ತಲೂ ನಾಲ್ಕು ಸುತ್ತು ಸುತ್ತಬೇಕಾಗಿತ್ತು. ಆಗ ಅವರಿಗೆ ಹಾಸಿಗೆ ಕೂಡ ಇರಲಿಲ್ಲ, ಅಕ್ಕಿ ಚೀಲದೊಳಗೆ ಮಲಗುತ್ತಿದ್ದರು ಎಂದು ಸುನೀಲ್ ತಮ್ಮ ತಂದೆಯ ಕಷ್ಟದ ದಿನಗಳನ್ನು ಮೆಲುಕು ಹಾಕಿದರು.
ನಂತರ ತಮ್ಮ ತಂದೆ ಕಠಿಣ ಪರಿಶ್ರಮದಿಂದಾಗಿ ಹೇಗೆ ಉನ್ನತ ಹುದ್ದೆಗೆ ಏರಿದರು ಎಂಬುದರ ಕುರಿತು ಮಾತನಾಡಿದ ಅವರು, "ನಮ್ಮ ತಂದೆಯ ಬಾಸ್ ಮೂರು ಕಟ್ಟಡಗಳನ್ನು ಖರೀದಿಸಿದರು, ಅಂತಿಮವಾಗಿ ಅವುಗಳನ್ನು ನಿರ್ವಹಿಸಲು ತಂದೆಯನ್ನು ಕೇಳಲಾಯಿತು. ಬಾಸ್ ನಿವೃತ್ತರಾದಾಗ, ತಂದೆ ಮೂರು ಕಟ್ಟಡಗಳನ್ನು ಖರೀದಿಸಿದರು. ಇಂದಿಗೂ, ನನ್ನ ಬಳಿ ಆ ಮೂರು ಕಟ್ಟಡಗಳು ಉಳಿದಿವೆ" ಎಂದು ಸುನೀಲ್ ತಮ್ಮ ತಂದೆಯ ಶ್ರಮವನ್ನು ನೆನೆದರು.
ಇದನ್ನೂ ಓದಿ:ʼಅವರೊಂದಿಗೆ ಮಲಗಲು ಒಪ್ಪುತ್ತಿಲ್ಲ ಅಂತ ಗದರಿಸಿದ್ರುʼ.. ಕೆಜಿಎಫ್ ನಟಿ ಸೆನ್ಸೇಷನಲ್ ಕಾಮೆಂಟ್!
ಸುನೀಲ್ ಶೆಟ್ಟಿ 1992 ರಲ್ಲಿ ದೀರ್ಘಾವಧಿಯ ಹೋರಾಟದ ನಂತರ ನಟನೆಗೆ ಪಾದಾರ್ಪಣೆ ಮಾಡಿದರು. "ನನ್ನ ತಂದೆ ತುಂಬಾ ವಿನಮ್ರ ವ್ಯಕ್ತಿ, ಆದರೆ ಯಾರಾದರೂ ತಮ್ಮ ಮಕ್ಕಳು ಅಥವಾ ಅವರ ಸಿಬ್ಬಂದಿಯ ವಿರುದ್ಧ ಒಂದು ಮಾತಾಡಿದರೆ, ಅವರು ಸಿಂಹವಾಗಿ ಬದಲಾಗುತ್ತಿದ್ದರು" ಎಂದು ಸುನೀಲ್ ತಮ್ಮ ತಂದೆಯ ವ್ಯಕ್ತಿತ್ವವನ್ನು ನೆನೆದರು. ಪ್ರಸ್ತುತ ನಟನ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.









