)
Sunny Leone on pregnancy : ಸನ್ನಿ ಲಿಯೋನ್ ಸಿನಿಮಾ ಪ್ರಿಯರಿಗೆ ಪರಿಚಯದ ಅಗತ್ಯವಿಲ್ಲದ ಹೆಸರು. ಕನ್ನಡ, ತೆಲುಗು ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ವಿಶೇಷ ಹಾಡುಗಳನ್ನು ಮಾಡುವ ಮೂಲಕ ದೇಶದ ಸಿನಿರಸಿಕರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಸಮಾಜಮುಖಿ ಕೆಲಸಗಳಿಂದಲೂ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
ಇತ್ತೀಚಿಗೆ ನಟಿ ತಮ್ಮ ವೈಯಕ್ತಿಕ ವಿಚಾರಗಳ ಕುರಿತು ಸಂದರ್ಶನವೊಂದರಲ್ಲಿ ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ನನಗೆ ಮಕ್ಕಳು ಅಂದ್ರೆ ತುಂಬಾ ಇಷ್ಟ.. ಆದರೆ ಗರ್ಭಧಾರಣೆಯೇ ಇಷ್ಟವಿಲ್ಲ. ಅದಕ್ಕೆ ಒಂದು ಕಾರಣವಿದೆ. ನಾನು ಹಲವು ಬಾರಿ ಐವಿಎಫ್ಗೆ ಹೋದರೂ ಸಫಲವಾಗಲಿಲ್ಲ ಮತ್ತು ಅನಾರೋಗ್ಯಕ್ಕೆ ಒಳಗಾದೆ, ಇದರಿಂದ ಗರ್ಭಿಣಿಯಾಗಲು ಬೇಸರಗೊಂಡರು ಎಂದು ಅವರು ಹೇಳಿಕೊಂಡಿದ್ದಾರೆ.. ಅದಕ್ಕಾಗಿಯೇ ಸನ್ನಿ ಒಂದು ಹೆಣ್ಣು ಮಗವನ್ನು ದತ್ತು ತೆಗೆದುಕೊಂಡು ತಾಯಿಯಾದರು. ನಂತರ ಸರೊಗಸಿ (ಬಾಡಿಗೆ ತಾಯ್ತನ) ಮೂಲಕ ಇನ್ನೂ ಎರಡು ಮಕ್ಕಳಿಗೆ ತಾಯಿಯಾದರು.
ಇತ್ತೀಚೆಗೆ ನಟಿ ಸೋಹಾ ಅಲಿ ಖಾನ್ ಅವರ ಪಾಡ್ಕ್ಯಾಸ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು. ನಾನು ಬಹಳ ದಿನಗಳಿಂದ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೆ. ಐವಿಎಫ್ ವಿಫಲವಾದ ದಿನ, ನಾವು ದತ್ತು ಪಡೆಯಲು ಅರ್ಜಿ ಸಲ್ಲಿಸಿದೆವು. ಆಗ ನಾವು ಹೆಣ್ಣು ಮಗುವನ್ನು ಆಯ್ಕೆ ಮಾಡಿದೆವು. ನಂತರ ನಾವು ಸರೋಗಸಿ ವಿಧಾನ ಆಯ್ಕೆ ಮಾಡಿದೇವು.. ನಾವು ಆಯ್ಕೆ ಮಾಡಿದ ಮಹಿಳೆಗೆ ವಾರಕ್ಕೊಮ್ಮೆ ಹಣ ನೀಡುತ್ತಿದ್ದೆವು. ಅವಳ ಗಂಡನಿಗೂ ಹಣ ಕೊಟ್ಟೆವು. ಆ ಹಣದಿಂದ ಅವಳು ದೊಡ್ಡ ಮನೆಯನ್ನು ಖರೀದಿಸಿ ಇಂದು ಸಂತೋಷವಾಗಿದ್ದಾಳೆ ಎಂದು ಸನ್ನಿ ತಿಳಿಸಿದರು.
ಅಂದಹಾಗೆ ಸನ್ನಿ ಲಿಯೋನ್ 2011 ರಲ್ಲಿ ನಟ ಡೇನಿಯಲ್ ವೆಬರ್ ಅವರನ್ನು ವಿವಾಹವಾದರು. ಅವರು 2017 ರಲ್ಲಿ ನಿಶಾ ಎಂಬ ಎರಡು ವರ್ಷದ ಮಗಳನ್ನು ದತ್ತು ಪಡೆದರು. 2018 ರಲ್ಲಿ, ಅವರು ಸರೊಗಸಿ ಮೂಲಕ ನೋಹ್ ಮತ್ತು ಆಶರ್ ಎಂಬ ಇಬ್ಬರು ಗಂಡು ಮಕ್ಕಳಿಗೆ ಪೋಷಕರಾದರು.