Al Pacino wifes : ಬೆಳ್ಳಿತೆರೆಯಲ್ಲಿ ಮಾತ್ರವಲ್ಲ, ಸಿನಿಮಾ ನಟರ ಜೀವನದಲ್ಲೂ ಕೆಲವು ಅಚ್ಚರಿಗಳು ಸಂಭವಿಸುತ್ತವೆ. ಆ ನಿಟ್ಟಿನಲ್ಲಿ, 50 ವರ್ಷಗಳ ಸಿನಿಮಾ ಜೀವನವನ್ನು ಯಶಸ್ವಿಯಾಗಿ ಪೂರೈಸಿರುವ ಈ ನಟ 83 ನೇ ವಯಸ್ಸಿನಲ್ಲಿ ತಮ್ಮ 4 ನೇ ಮಗುವಿನ ತಂದೆಯಾಗಿದ್ದಾರೆ. ಅಷ್ಟೇ ಅಲ್ಲ, ಇವರಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ.
ಹೌದು.. ಹಾಲಿವುಡ್‌ನ ಲೆಜೆಂಡರಿ ನಟ ಅಲ್ ಪಸಿನೊ 'ಗಾಡ್‌ಫಾದರ್' ಚಿತ್ರದ ಮೂಲಕ ಪ್ರಪಂಚದಾದ್ಯಂತ ಸದ್ದು ಮಾಡಿತ್ತು. ಅಲ್ಲದೆ ಅಪಾರ ಅಭಿಮಾನಿಗಳಗ ಸೃಷ್ಟಿಸಿತು. ಅವರ 'ದಿ ಐರಿಶ್ ಮ್ಯಾನ್', 'ಸೆಂಟ್ ಆಫ್ ಎ ವುಮನ್', 'ಜ್ಯಾಕ್ ಅಂಡ್ ಜಿಲ್', 'ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್' ನಂತಹ ಅನೇಕ ಚಿತ್ರಗಳು ಸೂಪರ್ ಹಿಟ್ ಆದವು.
ಇದನ್ನೂ ಓದಿ:ಬಳಸಿ ಬಿಸಾಕುವ ಈ ವಸ್ತುವಿಗಿದೆ ವಿಷಸರ್ಪವನ್ನು ಓಡಿಸುವ ಶಕ್ತಿ..! ಹಾವುಗಳು ಮನೆಯ ಹತ್ತಿರವೂ ಸುಳಿಯಲ್ಲ
1993 ರಲ್ಲಿ ಬಿಡುಗಡೆಯಾದ 'ದಿ ಸೆಂಟ್ ಆಫ್ ಎ ವುಮನ್' ಚಿತ್ರಕ್ಕಾಗಿ ಅತ್ಯುತ್ತಮ ನಟನೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆದರು. ಎಮ್ಮಿ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅಲ್ ಪಸಿನೋ ಅವರು ಮುಡಿಗೇರಿಸಿಕೊಂಡಿದ್ದಾರೆ.
1969 ರಲ್ಲಿ 'ಮಿ, ನಟಾಲಿ' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. 'ದಿ ಗಾಡ್‌ಫಾದರ್' ಅಲ್ ಪಸಿನೊಗೆ ಜಾಗತಿಕ ಮನ್ನಣೆ ತಂದುಕೊಟ್ಟಿತು. ಸುಮಾರು 50 ವರ್ಷಗಳಿಂದ ಹಾಲಿವುಡ್‌ನಲ್ಲಿ ಕಾರ್ಯನಿರತವಾಗಿರುವ ಪನಿಸೋ ಸಾಕ್ಷ್ಯಚಿತ್ರಗಳು, ಟಿವಿ ರಿಯಾಲಿಟಿ ಶೋಗಳು ಮತ್ತು ಚಲನಚಿತ್ರಗಳು ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ 1989 ರಿಂದ 1996 ರವರೆಗೆ ನಿರ್ದೇಶಕಿ ಮತ್ತು ನಿರ್ಮಾಪಕಿ ಲಿಯೊಂಟೆಲ್ಲೆ ಹಬ್ಬ್ಸ್ ಅವರೊಂದಿಗೆ ಪಸಿನೋ ಸಂಬಂಧ ಹೊಂದಿದ್ದರು, ಅವರಿಗೆ ಜೂಲಿ ಮೇರಿ ಎಂಬ ಮಗಳು ಇದ್ದಳು. ನಂತರ ಅವರು 1997 ರಿಂದ 2003 ರವರೆಗೆ ನಟಿ ಬೆವರ್ಲಿ ಡಿ'ಏಂಜೆಲೊ ಅವರೊಂದಿಗೆ ಸಂಬಂಧ ಹೊಂದಿದ್ದರು, ಇವರಿಗೆ 2001 ರಲ್ಲಿ ಮಗ ಆಂಟನ್ ಜೇಮ್ಸ್ ಮತ್ತು ಮಗಳು ಒಲಿವಿಯಾ ರೋಸ್ ಎಂಬ ಅವಳಿ ಮಕ್ಕಳಿದ್ದರು.
2022 ರಲ್ಲಿ ನೂರ್ ಅಲ್ಫಲ್ಲಾ ಜೊತೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿತ್ತು. ತರುವಾತ, ಜೂನ್ 2023 ರಲ್ಲಿ, ಅಲ್ ಪಸಿನೊ ಮತ್ತು ಅಲ್ಫಲ್ಲಾ ಅವರಿಗೆ ಗಂಡು ಮಗು ಜನಿಸಿತು. ಇದು ಅಲ್ ಪಸಿನೊ ಅವರ 4 ನೇ ಮಗು. ಆ ಸಮಯದಲ್ಲಿ, ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರ ಗೆಳತಿ ಅಲ್ಫಲ್ಲಾಗೆ 29 ವರ್ಷ ವಯಸ್ಸು.









