ಸಿನಿಮಾ ಸೆಟ್‌ಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಒಂದು ದೊಡ್ಡ ಅವಘಡ ಸಂಭವಿಸಿ ಪ್ರಾಣವೇ ಹೊರಟು ಹೋದಾಗ ಹೃದಯವೇ ಒಡೆದು ಹೋಗುತ್ತದೆ. ಪ್ರಸಿದ್ಧ ಹಾಲಿವುಡ್ ನಟ ಮತ್ತು ಮಾರ್ಷಲ್ ಆರ್ಟ್ಸ್ ಮಾಸ್ಟರ್ ಬ್ರೂಸ್ ಲೀ ಅವರ ಮಗ ಬ್ರಾಂಡನ್ ಲೀ ಕೂಡಾ ಇಂಥದ್ದೇ ದುರಂತಕ್ಕೆ ಬಲಿಯಾಗಿರುವುದು. ಬ್ರಾಂಡನ್ ಕೂಡಾ ತನ್ನ ತಂದೆಯಂತೆ ಒಬ್ಬ ನಿಪುಣ ನಟರಾಗಿದ್ದು, 'ದಿ ಕ್ರೌ' ಚಿತ್ರದ ಚಿತ್ರೀಕರಣದಲ್ಲಿದ್ದರು. ಆದರೆ ಚಿತ್ರೀಕರಣದ ವೇಳೆಯೇ ಅವರು ಅಸು ನೀಗಿದ್ದಾರೆ.
ಚಿತ್ರೀಕರಣದ ದೃಶ್ಯವೊಂದರಲ್ಲಿ ನಿಜವಾದ ಗುಂಡು ತಗುಲಿ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇದು ಚಿತ್ರರಂಗ ಮತ್ತು ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ಮಾರ್ಚ್ 31, 1993 ರಂದು ಸಂಭವಿಸಿದ ಅವಘಡದಲಿ ಬ್ರಾಂಡನ್ ಲೀ 'ದಿ ಕ್ರೌ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಒಂದು ದೃಶ್ಯದಲ್ಲಿ, ಅವರಿಗೆ ಗುಂಡು ಹಾರಿಸಬೇಕಿತ್ತು. ಚಿತ್ರೀಕರಣಕ್ಕೆ ಬಳಸಿದ್ದ ರಿವಾಲ್ವರ್‌ನಲ್ಲಿ ಖಾಲಿ ಗುಂಡು ಇರಬೇಕಿತ್ತು. ಆದರೆ ನಿರ್ಲಕ್ಷ್ಯದಿಂದಾಗಿ ರಿವಾಲ್ವರ್ ಅನ್ನು ಸರಿಯಾಗಿ ಪರೀಕ್ಷಿಸಿರಲಿಲ್ಲ. ದೃಶ್ಯವನ್ನು ಚಿತ್ರೀಕರಿಸಿದ ತಕ್ಷಣ, ನಿಜವಾದ ಗುಂಡು ಬ್ರಾಂಡನ್‌ಗೆ ತಗುಲಿದೆ.
ಇದನ್ನೂ ಓದಿ : ಅಧಿಕೃತವಾಗಿ ಇವರೇ ನನ್ನ ಬಾಳಸಂಗಾತಿ ಎಂದು ಪರಿಚಯಿಸಿದ ಖ್ಯಾತ ನಟ! ವದಂತಿಗಳಿಗೆ ಬಿತ್ತು ಬ್ರೇಕ್..
ನಿಜವಾದ ಗುಂಡು ತಗುಲಿ ಸಾವು :
ಆ ಗುಂಡು ಅವರ ಹೊಟ್ಟೆಗೆ ನೇರವಾಗಿ ತಗುಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಆ ದೃಶ್ಯದಲ್ಲಿ, ನಟ ಮೈಕೆಲ್ ಮಾಸ್ಸೀ ಬ್ರಾಂಡನ್ ಮೇಲೆ ಗುಂಡು ಹಾರಿಸಬೇಕಾಯಿತು. ನಿರ್ದೇಶಕರು 'ಆಕ್ಷನ್' ಹೇಳಿದ ತಕ್ಷಣ, ಮೈಕೆಲ್ ಗುಂಡು ಹಾರಿಸಿದ್ದಾರೆ. ಆದರೆ ದೃಶ್ಯದ ಪ್ರಕಾರ, ಬ್ರಾಂಡನ್ ಮುಂದೆ ಬೀಳಬೇಕಿತ್ತು. ಆದರೆ ಅವರು ಹಿಂದೆ ಬಿದ್ದರು. ಆರಂಭದಲ್ಲಿ ಎಲ್ಲರೂ ಅದು ಶೂಟಿಂಗ್ ನ ಒಂದು ಭಾಗ ಎಂದೇ ಭಾವಿಸಿದ್ದರು. ಆದರೆ ಬ್ರಾಂಡನ್ ಎದ್ದೇಳದಿದ್ದಾಗ, ಸೆಟ್‌ನಲ್ಲಿದ್ದ ಜನರಿಗೆ ಅನುಮಾನ ಬಂದು ಅವರನ್ನು ಮೇಲೆತ್ತಲು ಪ್ರಯತ್ನಿಸಿದಾಗ ಅವರು ಮೃತಪಟ್ಟಿರುವುದು ತಿಳಿದು ಬಂತು.
17 ದಿನಗಳಲ್ಲಿ ನಡೆಯಬೇಕಿತ್ತು ಮದುವೆ :
ಇದಾದ ನಂತರ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಪಿಸ್ತೂಲ್ ನಲ್ಲಿ ನಿಜವಾದ ಗುಂಡು ಇತ್ತು ಎನ್ನುವುದು ನಂತರ ನಡೆದ ತನಿಖೆಯಲ್ಲಿ ಬೆಳಕಿಗೆ ಬಂತು. ಆ ಸಮಯದಲ್ಲಿ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿತ್ತು. ವರದಿಗಳ ಪ್ರಕಾರ, ಕೇವಲ 8 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಆ ಸಮಯದಲ್ಲಿ ಬ್ರಾಂಡನ್ ಲೀ ಕೇವಲ 28 ವರ್ಷ ವಯಸ್ಸಿನವರಾಗಿದ್ದರು. ಅತ್ಯಂತ ದುಃಖಕರ ಸಂಗತಿಯೆಂದರೆ ಅವರ ಮದುವೆ ಕೂಡಾ 17 ದಿನಗಳ ನಂತರ ನಡೆಯಬೇಕಿತ್ತು.
ಇದನ್ನೂ ಓದಿ : ಒಂದು ವೇಳೆ ನನಗೆ ಮದುವೆಯಾಗಿಲ್ಲ ಅಂದಿದ್ರೆ ಆ ನಟನನ್ನ.. : ಖ್ಯಾತ ನಟಿಯ ಬಹಿರಂಗ ಹೇಳಿಕೆ
ಮಗನೂ ಇಲ್ಲ, ತಂದೆಯೂ ಇಲ್ಲ :
ಅವರು ಅಕ್ಟೋಬರ್ 1992 ರಲ್ಲಿ ಎಲಿಜಾ ಹಟ್ಟನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರ ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಬ್ರಾಂಡನ್ ತನ್ನ ಮದುವೆಯ ಬಗ್ಗೆ ಸಂಭ್ರಮದಲ್ಲಿದ್ದರು. ಆದರೆ ವಿಧಿಯಾಟ ಬೇರೇನೇ ಆಗಿತ್ತು. ಬ್ರಾಂಡನ್ ಅವರ ತಂದೆ ಬ್ರೂಸ್ ಲೀ ಕೂಡ ಕೇವಲ 32 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದರು. ಅವರು ಕೂಡಾ ಬಹಳ ಕಡಿಮೆ ಅವಧಿಯಲ್ಲಿ ಪ್ರಪಂಚದಾದ್ಯಂತ ಖ್ಯಾತಿಯನ್ನು ಗಳಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.