ಸೆಟ್ಟೇರಿತು ಸೂರಿ-ಯುವ ಸಿನಿಮಾ..ದೊಡ್ಮನೆ ಕುಡಿಗೆ ದುನಿಯಾ ವಿಜಯ್‌ ಪುತ್ರಿ ನಾಯಕಿ

Suri Yuva New Movie: ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ರಾಜ್‌ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಬ್ಯಾನರ್‌ನಡಿ ಎಕ್ಕ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಈ ಪ್ರೊಡಕ್ಷನ್ಸ್‌ ನಡಿ ಹೊಸ ಸಿನಿಮಾ ಘೋಷಣೆಯಾಗಿದೆ.  

Written by - YASHODHA POOJARI | Edited by - Zee Kannada News Desk | Last Updated : Apr 30, 2025, 03:54 PM IST
  • ಸೆಟ್ಟೇರಿತು ಸೂರಿ-ಯುವ ಸಿನಿಮಾ..ದೊಡ್ಮನೆ ಕುಡಿಗೆ ದುನಿಯಾ ವಿಜಯ್‌ ಪುತ್ರಿ ನಾಯಕಿ
  • ಅಕ್ಷಯ ತೃತೀಯಕ್ಕೆ ಸೂರಿ ಹೊಸ ಸಿನಿಮಾಗೆ ಚಾಲನೆ.. ಯುವ-ರಿತನ್ಯಾ ಚಿತ್ರಕ್ಕೆ ಎಕ್ಕ ನಿರ್ಮಾಪಕರು ಸಾಥ್‌
  • ಪಿಆರ್‌ಕೆ-ಕೆಆರ್‌ಜಿ-ಜಯಣ್ಣ ಫಿಲ್ಮಂ ಬ್ಯಾನರ್‌ನಡಿ ಮತ್ತೊಂದು ಸಿನಿಮಾ..ಯುವ-ರಿತನ್ಯಾಗೆ ಸೂರಿ ಆಕ್ಷನ್‌ ಕಟ್‌
ಸೆಟ್ಟೇರಿತು ಸೂರಿ-ಯುವ ಸಿನಿಮಾ..ದೊಡ್ಮನೆ ಕುಡಿಗೆ ದುನಿಯಾ ವಿಜಯ್‌ ಪುತ್ರಿ ನಾಯಕಿ

Suri Yuva New Movie: ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ರಾಜ್‌ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಬ್ಯಾನರ್‌ನಡಿ ಎಕ್ಕ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಈ ಪ್ರೊಡಕ್ಷನ್ಸ್‌ ನಡಿ ಹೊಸ ಸಿನಿಮಾ ಘೋಷಣೆಯಾಗಿದೆ.

Add Zee News as a Preferred Source

ಬಹಳ ದಿನಗಳಿಂದ ಕೇಳಿ ಬರ್ತಿದ್ದ ಯುವರಾಜ್‌ಕುಮಾರ್‌ ಹಾಗೂ ಸುಕ್ಕ ಸೂರಿ ಸಿನಿಮಾಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಅಕ್ಷಯ ತೃತೀಯದಿನವಾದ ಇಂದು ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಸ್ಯಾಂಡಲ್‌ವುಡ್‌ ಸಲಗ ದುನಿಯಾ ವಿಜಯ್‌ಕುಮಾರ್‌ ಕ್ಲ್ಯಾಪ್‌ ಮಾಡಿದ್ದು, ಅಪ್ಪು ಅವರ ಮಗಳು ಧೃತಿ ಪುನೀತ್ ರಾಜ್ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯುವ ಫ್ಯಾಮಿಲಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್‌, ನಿರ್ದೇಶಕ ಸೂರಿ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.

ಇದನ್ನೂ ಓದಿ:Bhogi movie : ಶರ್ವಾನಂದ "ಭೋಗಿ" ಚಿತ್ರದ ಟೀಸರ್‌ ರಿಲೀಸ್‌..! ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌

ಸುಕ್ಕ ಸೂರಿ ರಾ ಸ್ಟೈಲ್‌ ಮೇಕಿಂಗ್‌ಗೆ ಫೇಮಸ್..ಹೀಗಾಗಿ ಯುವ ಅವರ ಗರಡಿಯಲ್ಲಿ ಯಾವ ರೀತಿ ಕಾಣಿಸಲಿದ್ದಾರೆ ಎಂಬ ಕುತೂಹಲವಿದೆ. ಇನ್ನೂ ದುನಿಯಾ ವಿಜಯ್‌ ಮೊದಲ ಪುತ್ರಿ ರಿತನ್ಯಾ ವಿಜಯ್‌ ಕುಮಾರ್‌ ಈ ಚಿತ್ರದ ನಾಯಕಿ. ಈಗಾಗಲೇ ಅಪ್ಪನ ಜೊತೆ ಲ್ಯಾಂಡ್‌ ಲಾರ್ಡ್‌ ಸಿನಿಮಾ ಮೂಲಕ ಇಂಡಸ್ಟ್ರೀಗೆ ಬಲಗಾಲಿಟ್ಟಿರುವ ರಿತನ್ಯಾಗೆ ಇದು ಎರಡನೇ ಸಿನಿಮಾವಾದರೆ, ಯುವರಾಜ್‌ ಕುಮಾರ್ ಗೆ ಇದು ಮೂರನೇ ಚಿತ್ರ..

ಸೂರಿ ಗರಡಿಯಲ್ಲಿ ಖಾಯಂ ಆಗಿ ಕೆಲಸ ಮಾಡುವ ದೀಪು ಎಸ್‌ ಕುಮಾರ್‌ ಸಂಕಲನ, ಚರಣ್‌ ರಾಜ್‌ ಸಂಗೀತ ನಿರ್ದೇಶನ, ಸಂತೋಷ್‌ ಕಲಾ ನಿರ್ದೇಶನ, ಶೇಖರ್‌ ಕ್ಯಾಮೆರಾ ವರ್ಕ್‌ ಈ ಚಿತ್ರಕ್ಕೆ ಇರಲಿದೆ. ಮೇ ತಿಂಗಳಾತ್ಯಂತಕ್ಕೆ ಚಿತ್ರತಂಡ ಶೂಟಿಂಗ್‌ ಅಖಾಡಕ್ಕೆ ಇಳಿಯಲಿದೆ. ಪ್ರತಿಷ್ಠಿತ ಮೂರು ನಿರ್ಮಾಣ ಸಂಸ್ಥೆಯಡಿ ಬರ್ತಿರುವ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ತಯಾರಗಲಿದೆ.

ಇದನ್ನೂ ಓದಿ:ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು.. ಫ್ಯಾನ್ಸ್‌ ಆತಂಕ

ಜೂನ್‌ಗೆ ಎಕ್ಕ
ಪಿಆರ್‌ಕೆ-ಕೆಆರ್‌ಜಿ-ಜಯಣ್ಣ ಫಿಲ್ಮಂ ಬ್ಯಾನರ್‌ನಡಿ ಬರ್ತಿರುವ ಯುವರಾಜ್‌ ಕುಮಾರ್‌ ನಾಯಕನಾಗಿ ಹಾಗೂ ರೋಹಿತ್‌ ಪದಕಿ ನಿರ್ದೇಶನದ ಎಕ್ಕ ಸಿನಿಮಾ ಜೂನ್‌ ತಿಂಗಳಲ್ಲಿ ತೆರೆಗೆ ಬರಲಿದೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಹಾಗೂ ಟೈಟಲ್‌ ಟ್ರ್ಯಾಕ್‌ ದೊಡ್ಡ ಮಟ್ಟದ ಹಿಟ್‌ ಕಂಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Trending News