Sushant Singh Rajput ಸಾವಿಗೆ ಕಾರಣವೇನು? ಫೈನಲ್ Postmortem Report ನಲ್ಲಿ ಏನಿದೆ?

ಸುಶಾಂತ್ ಸಿಂಗ್ ರಾಜಪುತ್ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸುಶಾಂತ್ ಅವರ ಅಂತಿಮ ಮರಣೋತ್ತರ ವರದಿಯನ್ನು ನೀಡಲಾಗಿದೆ. ಈ ವರದಿಯಲ್ಲಿ ಸುಶಾಂತ್ ಸಾವಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಲಾಗಿದೆ.

Last Updated : Jun 24, 2020, 08:07 PM IST
Sushant Singh Rajput ಸಾವಿಗೆ ಕಾರಣವೇನು? ಫೈನಲ್ Postmortem Report ನಲ್ಲಿ ಏನಿದೆ? title=

ನವದೆಹಲಿ: ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ ಸಾವಿನ ಬಳಿಕ ಆರಂಭಿಕ ತನಿಖೆ ನಡೆಸಿದ್ದ ಪೊಲೀಸರು ಇದೊಂದು ಆತ್ಮಹತ್ಯೆಯ ಪ್ರಕರಣವಾಗಿದೆ ಎಂದು ಹೇಳಿದ್ದರು. ನಂತರ ಪ್ರಕಟಗೊಂಡ ಆರಂಭಿಕ ಮರಣೋತ್ತರ ಪರೀಕ್ಷಾ ವರದಿಯಲ್ಲಿಯೂ ಕೂಡ ಸುಶಾಂತ್ ಅವರ ಸಾವು ಆತ್ಮಹತ್ಯೆ ಎಂದು ವಿವರಿಸಲಾಗಿತ್ತು. ಇದೀಗ ಈ ಪ್ರಕರಣದ ಅಂತಿಮ ಮರಣೋತ್ತರ ವರದಿಯನ್ನು ಪೊಲೀಸರಿಗೆ ನೀಡಲಾಗಿದೆ. ಈ ವರದಿಯಲ್ಲಿ ಸುಶಾಂತ್ ಸಿಂಗ್ ರಾಜಪುತ್ ಅವರ ಸಾವಿಗೆ ಸಂಬಧಿಸಿದ ಹಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಲಾಗಿದೆ.

ವರದಿಯ ಪ್ರಕಾರ ಸುಶಾಂತ್ ಸಿಂಗ್ ರಾಜಪುತ್ ನೇಣುಬಿಗಿದುಕೊಂಡ ಕಾರಣ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸುಶಾಂತ್ ಅವರ ಒಳಾಂಗಗಳನ್ನು ಕೂಡ ರಾಸಾಯನಿಕ ಪರೀಕ್ಷೆಗಾಗಿ ಇಡಲಾಗಿದೆ. ಈ ಮೊದಲು ನೀಡಲಾಗಿದ್ದ ತಾತ್ಕಾಲಿಕ ಮರಣೋತ್ತರ ವರದಿಯಲ್ಲಿ ಮೂವರು ವೈದ್ಯರು ಸಹಿ ಹಾಕಿದ್ದರು. ಆದರೆ, ಫೈನಲ್ ವರದಿಯಲ್ಲಿ ಒಟ್ಟು ಐವರು ವೈದ್ಯರು ಸಹಿ ಹಾಕಿದ್ದಾರೆ. ಈ ವರದಿಯನ್ನು ಸಿದ್ಧಪಡಿಸುವ ಮುನ್ನ ಹೆಚ್ಚಿನ ತಪಾಸಣೆ ನಡೆಸಲಾಗಿದೆ.

ಉಸಿರುಗಟ್ಟಿ ಸುಶಾಂತ್ ಸಾವನ್ನಪ್ಪಿದ್ದಾರೆ 
ಅಂತಿಮ ಮರಣೋತ್ತರ ವರದಿಯಲ್ಲಿ ಸುಶಾಂತ್ ಶರೀರದ ಮೇಲೆ ಯಾವುದೇ ಹೊರಪೆಟ್ಟು ಗಮನಿಸಲಾಗಿಲ್ಲ ಎಂಬುದರ ಮೇಲೆ ಹೆಚ್ಚು ಒತ್ತು ನೀಡಲಾಗಿದೆ. ಅವರ ಉಗುರುಗಳು ಕೂಡ ತುಂಬಾ ಸ್ವಚ್ಛವಾಗಿದ್ದವು. ಈ ವರದಿಯಲ್ಲಿಯೂ ಕೂಡ ಸುಶಾಂತ್ ಸಿಂಗ್ ರಾಜಪುತ್ ಅವರ ಸಾವಿಗೆ ಆತ್ಮಹತ್ಯೆಯೇ ಕಾರಣ ಎನ್ನಲಾಗಿದ್ದು, ಅವರ ಸಾವಿನ ಕಾರಣದ ಮೇಲೆ ಯಾವುದೇ ಪ್ರಶ್ನೆಯನ್ನು ಎತ್ತಿ ಹಿಡಿದಿಲ್ಲ.

ಇನ್ನೊಂದೆಡೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೂಡ ಹಲವು ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ. ಮೊದಲು ಸುಶಾಂತ್ ಅವರ ಸಾವನ್ನು ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಧನಕ್ಕೆ ಜೋಡಿಸಿ ತನಿಖೆ ನಡೆಸಲಾಗಿದೆ. ಆದರೆ, ಬಳಿಕ ಪೊಲೀಸರು ಮ್ಯಾನೇಜರ್ ಸಾವಿನ ಜೊತೆಗೆ ಸುಶಾಂತ್ ಸಾವು ಯಾವುದೇ ರೀತಿಯ ಕನೆಕ್ಷನ್ ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ದಿಶಾ, ಸುಶಾಂತ್ ಅವರನ್ನು ಕೇವಲ ಒಂದು ಬಾರಿಗೆ ಭೇಟಿಯಾದ ಕಾರಣ ಈ ಕನೆಕ್ಷನ್ ಜೋಡಿಸುವುದು ಅನಾವಶ್ಯಕ ಎಂದಿದ್ದರು.

ಇದೆ ವೇಳೆ ಯಾವುದೇ ಆಧಾರಗಳು ಇಲ್ಲದೆ ಕೆಲ ವೆಬ್ಸೈಟ್ ಗಳು ಸುಶಾಂತ್ ಅವರ ನಿಧನಕ್ಕೆ ಸಂಬಂಧಿಸಿದಂತೆ ಬೇರೆ-ಬೇರೆ ಥಿಯರಿಗಳನ್ನು ಮಂಡಿಸಿದ್ದಕ್ಕೆ ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿಗಳ ಪ್ರಕಾರ ಈ ವೆಬ್ಸೈಟ್ ಗಳನ್ನು ಪೊಲೀಸರು ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ ಹಾಗೂ ಅವುಗಳ ತಥ್ಯಗಳನ್ನು ಪ್ರಶ್ನಿಸಲಾಗುವುದು ಎನ್ನಲಾಗಿದೆ.

ಒಟ್ಟು 23 ವ್ಯಕ್ತಿಗಳ ವಿಚಾರಣೆ ನಡೆದಿದೆ
ಈ ಪ್ರಕರಣದಲ್ಲಿ ಪೊಲೀಸರು ಕೈಗೊಂಡ ಕ್ರಮದ ಕುರಿತು ಹೇಳುವುದಾದರೆ, ಇದುವರೆಗೆ ಪ್ರಕರಣದಲ್ಲಿ ಪೊಲೀಸರು ಒಟ್ಟು 23 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನಟನ ಚಾರ್ಟರ್ಡ್ ಅಕೌಂಟೆಂಟ್ ಅವರ ಹೇಳಿಕೆಯನ್ನು ಕೂಡ ದಾಖಲಿಸಲಾಗಿದೆ. ಏತನ್ಮಧ್ಯೆ ಪೊಲೀಸರು ನಟಿ ರಿಯಾ ಚಕ್ರವರ್ತಿ, ಬಿಸಿನೆಸ್ ಮ್ಯಾನೇಜರ್, ಪಿಆರ್ ಮ್ಯಾನೇಜರ್, ಕುಶಾಲ್ ಜಾವೇರಿ ಮತ್ತು ಇತರೆ ಹಲವು ವ್ಯಕ್ತಿಗಳ ಹೆಲಿಕೆಗಳನ್ನು ಕೂಡ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಎಲ್ಲ ಜನರು ಸುಶಾಂತ್ ಜೊತೆ ನಿಕಟ ಸಂಪರ್ಕ ಹೊಂದಿದ್ದಲ್ಲದೆ, ಅವರ ವೃತ್ತಿ ಜೀವನದ ಜೊತೆಗೂ ಕೂಡ ಸಂಬಂಧ ಹೊಂದಿದ್ದಾರೆ.

Trending News