2019 ಕ್ಕೆ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮದುವೆ?

 ಹೌದು, ಹೀಗೊಂದು ಊಹಾಪೋಹ ಈಗ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.ಇದಕ್ಕೆ ಪೂರಕವೆನ್ನುವಂತೆ ಮಾಜಿ ಮಿಸ್ ಯುನಿವರ್ಸ್ ಕೂಡ ತನ್ನ ಹೊಸ ಬಾಯ್ ಫ್ರೆಂಡ್ ಜೊತೆ ಸುತ್ತಾಡುತ್ತಿರುವುದು ಇದಕ್ಕೆಲ್ಲಾ ಸಾಕಷ್ಟು ಪುಷ್ಟಿ ಕೊಡುತ್ತಿದೆ.

Updated: Nov 9, 2018 , 12:51 PM IST
2019 ಕ್ಕೆ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮದುವೆ?
Photo:instagram

ನವದೆಹಲಿ:  ಹೌದು, ಹೀಗೊಂದು ಊಹಾಪೋಹ ಈಗ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.ಇದಕ್ಕೆ ಪೂರಕವೆನ್ನುವಂತೆ ಮಾಜಿ ಮಿಸ್ ಯುನಿವರ್ಸ್ ಕೂಡ ತನ್ನ ಹೊಸ ಬಾಯ್ ಫ್ರೆಂಡ್ ಜೊತೆ ಸುತ್ತಾಡುತ್ತಿರುವುದು ಇದಕ್ಕೆಲ್ಲಾ ಸಾಕಷ್ಟು ಪುಷ್ಟಿ ಕೊಡುತ್ತಿದೆ.

ಹಾಗಾದರೆ ಈಗ ಸುಶ್ಮೀತಾ ಸೇನ್ ಅಷ್ಟಕ್ಕೂ ಮದುವೆಯಾಗಲು ಹೊರಟಿರುವುದು ಯಾರ ಜೊತೆ ಗೊತ್ತೇ? ಕೆಲವು ತಿಂಗಳ ಹಿಂದೆ 27 ವರ್ಷ ವಯಸ್ಸಿನ ರೋಹ್ಮಾನ್ ಶಾಲ್ ಎನ್ನುವ ಮಾಡೆಲ್ ಇತ್ತೀಚಿಗೆ ಫ್ಯಾಶನ್ ಷೋವೊಂದರಲ್ಲಿ ಭೇಟಿಯಾಗಿದ್ದ ಸೇನ್ ಈಗ ಆಗಿನಿಂದ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ. ಈಗ ಮದುವೆಗೂ ಕೂಡ ಮುಂದಾಗಿದ್ದಾರೆ ಎನ್ನುವ ವಿಷಯ ತಿಳಿದುಬಂದಿದೆ.

ಸುದ್ದಿ ಮೂಲಗಳ ಪ್ರಕಾರ ಇಬ್ಬರು ಜೋಡಿಗಳ ಮದುವೆಗೆ ಸುಶ್ಮೀತಾ ಸೇನ್ ಅವರ ದತ್ತು ಮಕ್ಕಳಿಬ್ಬರು ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ಡಿಎನ್ಎ ವರದಿ ಮಾಡಿದೆ.ರೋಹನ್ ಸುಶ್ಮೀತಾಗೆ ಮದುವೆ ಪ್ರೊಪೋಸ್ ಮಾಡಿದ್ದಕ್ಕೆ ಈಗಾಗಲೇ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ 2019 ರ ಚಳಿಗಾಲದ ಸಮಯದಲ್ಲಿ ಇಬ್ಬರು ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. 

ಇತ್ತೀಚಿಗೆ ಸುಶ್ಮೀತಾ ಕೂಡ ತಮ್ಮಿಬ್ಬರ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ.