ಯ್ಯೂಟೂಬ್ ನಲ್ಲಿ ಕೊನೆಗೂ ಸಾಮ್ರಾಟ್ ಆದ ಭಾರತದ ಈ ಕಂಪನಿ...!

ಸ್ವೀಡಿಸ್ ಮೂಲದ PewDiePie ಕಂಪನಿ ಇದುವರೆಗೂ ಯೂಟೂಬ್ ನಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿದ ಕಂಪನಿ ಎಂದು ಹೆಸರುವಾಸಿಯಾಗಿತ್ತು.ಕಳೆದ ವರ್ಷದದಿಂದ ಭಾರತದ T-Series ಕಂಪನಿ ಜೊತೆ ನಿರಂತರ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿತ್ತು. ಆದರೆ ಈಗ ಇದೇ ಮೊದಲ ಬಾರಿಗೆ ಅದು ಸೋಲನ್ನು ಒಪ್ಪಿಗೊಂಡಿದೆ. 

Last Updated : Apr 1, 2019, 06:45 PM IST
ಯ್ಯೂಟೂಬ್ ನಲ್ಲಿ ಕೊನೆಗೂ ಸಾಮ್ರಾಟ್ ಆದ ಭಾರತದ ಈ ಕಂಪನಿ...! title=

ನವದೆಹಲಿ: ಸ್ವೀಡಿಸ್ ಮೂಲದ PewDiePie ಕಂಪನಿ ಇದುವರೆಗೂ ಯೂಟೂಬ್ ನಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿದ ಕಂಪನಿ ಎಂದು ಹೆಸರುವಾಸಿಯಾಗಿತ್ತು. ಕಳೆದ ವರ್ಷದದಿಂದ ಭಾರತದ T-Series ಕಂಪನಿ ಜೊತೆ ನಿರಂತರ ಸ್ಪರ್ಧೆಯಲ್ಲಿ ತೊಡಗಿತ್ತು. ಆದರೆ ಈಗ ಇದೇ ಮೊದಲ ಬಾರಿಗೆ ಅದು ಸೋಲನ್ನು ಒಪ್ಪಿಗೊಂಡಿದೆ. 

ಈಗ ಈ ಕುರಿತಾಗಿ ವಿಡಿಯೋ ಮಾಡಿರುವ PewDiePie ತನ್ನ ವಿಡಿಯೋ ದಲ್ಲಿ  ಟಿ-ಸೀರಿಸ್ ಪೈರೆಸಿ ವಿಡಿಯೋ ಗಳನ್ನು ಮಾರಾಟ ಮಾಡುತ್ತದೆ ಎಂದು ಆರೋಪಿದೆ.ಭಾರತದ ಜಾತಿ ವ್ಯವಸ್ಥೆ ಹಾಗೂ ಬಡತನದ ಬಗ್ಗೆ ಮಾತನಾಡುತ್ತಾ ವ್ಯಂಗ್ಯವಾಡಿದೆ. ಭಾರತವು YouTube ನಲ್ಲಿ ಅಗ್ರಸ್ತಾನವನ್ನು ಪಡೆದುಕೊಂಡಿದೆ...ಮುಂದೆ ನೀವು ಹೇಗೆ ಜಾತಿ ವ್ಯವಸ್ಥೆಯನ್ನು ಬಗೆಹರಿಸುತ್ತಿರಿ.. ನಿಮ್ಮ ಜಾಹೀರಾತುಗಳು ನಿಮ್ಮ ಬಡತನವನ್ನು ಪರಿಹಾರ ನೀಡಬಹುದು "ಎಂದು ಪ್ಯೂಡಿಪೀ ವ್ಯಂಗ್ಯವಾಡಿದ್ದಾರೆ.

ಕಳೆದ ತಿಂಗಳು ಎಲ್ಲರಿಗೂ ಚಂದಾದಾರರಾಗಲು ಟಿ-ಸೀರಿಸ್ ಮನವಿ ಮಾಡಿಕೊಂಡಿತ್ತು.ಈ ಹಿನ್ನಲೆಯಲ್ಲಿ ಬಾಲಿವುಡ್ ನಟರು ಕೂಡ  ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.ಈ ಹಿನ್ನಲೆಯಲ್ಲಿ ಈಗ ಟಿ-ಸೀರಿಸ್  92,147,546 ಚಂದಾದಾರನ್ನು ಹೊಂದಿದ್ದರೆ PewDiePie 92,142,095 ರಷ್ಟು ಚಂದಾದಾರನ್ನು ಹೊಂದಿದೆ.

Trending News