)
Tamil actor Krishna arrest : ಸಿನಿಮಾರಂಗದ ದೊಡ್ಡ ಸೆಲೆಬ್ರಿಟಿಗಳು ಮಾದಕ ವಸ್ತುಗಳ ಬಳಕೆಯ ಪ್ರಕರಣದಲ್ಲಿ ಶಾಮೀಲಾಗಿರುವುದನ್ನು ಕೇಳುತ್ತಿರುವುದು ಇದೇನು ಮೊದಲ ಬಾರಿಯೇನಲ್ಲ. ಅದಷ್ಟೋ ದೊಡ್ಡ ತಾರೆಯರು ಈ ವಿಷಯದಲ್ಲಿ ಪೋಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ಈ ಸಮಸ್ಯೆಯು ಬರೀ ಒಂದೇ ಭಾಷೆಯ ಸಿನಿಮಾರಂಗದ್ದಲ್ಲ, ಬದಲಾಗಿ ಇದು ಸ್ಯಾಂಡಲ್ವುಡ್, ಟಾಲಿವುಡ್ ಮತ್ತು ಬಾಲಿವುಡ್ನಲ್ಲಿಯೂ ಸಹ ಹರಿದಾಡಿದೆ. ಸದ್ಯಕ್ಕೆ ತೆಲಗು ಮತ್ತು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಇದರಲ್ಲಿ ಕೆಲವು ಸ್ಟಾರ್ ನಟನರನ್ನ ವಿಚಾರಣೆ ನಡೆಸಿದ್ದಾರೆ.
ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೆಲಸ ಮಾಡುವ ಪ್ರಸಿದ್ಧ ನಟರೊಬ್ಬರ ಹೆಸರು ಡ್ರಗ್ಸ್ ಕೇಸ್ನಲ್ಲಿ ತಳಕು ಹಾಕಿಕೊಂಡಿದೆ. ಪ್ರಸ್ತುತ ಚೆನ್ನೈನಲ್ಲಿ ನೆಲೆಸಿರುವ ಈ ನಟನನ್ನು ಚೆನ್ನೈ ನಾರ್ಕೋಟಿಕ್ಸ್ ಇಂಟೆಲಿಜೆನ್ಸ್ ತಂಡ ಬಂಧಿಸಿದ್ದು, ರಕ್ತದ ಮಾದರಿಗಳನ್ನು ಸಂಗ್ರಹಿಸಿ ವರದಿಗಳಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ನಟ ಶ್ರೀಕಾಂತ್ ಅವರನ್ನು ಸಹ ಡ್ರಗ್ಸ್ ಕೇಸ್ನಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ಕೃಷ್ಣ ವಿರುದ್ಧವೂ ಆರೋಪಗಳು ಕೇಳಿಬಂದವು. ಕೃಷ್ಣ ಕೂಡ ಮಾದಕ ವಸ್ತು ಸೇವಿಸಿದ್ದಾರೆ ಎಂಬ ಆರೋಪ ಶುರುವಾಗಿತ್ತು. ಈ ಹಿನ್ನೆಲೆ ನಾರ್ಕೋಟಿಕ್ಸ್ ಇಂಟೆಲಿಜೆನ್ಸ್ ತಂಡ ನಟ ಕೃಷ್ಣ ಅವರನ್ನು ಸಹ ವಿಚಾರಣೆ ಮಾಡಲು ಕರೆದಿದ್ದರು. ಆದರೆ ಕೃಷ್ಣ ತಲೆಮರೆಸಿಕೊಂಡಿದ್ದರಿಂದ ಹುಡುಕಾಟ ನಡೆಸುತ್ತಿದ್ದರು.
ಕೊನೆಗೂ ನಟ ಕೃಷ್ಣ ಸಿಕ್ಕಿಬಿದ್ದಿದ್ದಾರೆ. ಮಾದಕ ವಸ್ತು ಪ್ರಕರಣದಲ್ಲಿ ನಟ ಶ್ರೀಕಾಂತ್ ನೀಡಿದ ಹೇಳಿಕೆಯ ಆಧಾರದ ಮೇಲೆ ನಟ ಕೃಷ್ಣ ಅವರನ್ನು ಸಹ ಬಂಧಿಸಲು 5 ವಿಶೇಷ ತಂಡಗಳನ್ನು ರಚಿಸಲಾಯಿತು. ಇದರ ನಂತರ ಜೂನ್ 25, 2025 ರಂದು ಕೃಷ್ಣ ಅವರನ್ನು ಬಂಧಿಸಿ ರಾತ್ರಿಯಿಡೀ ವಿಚಾರಣೆ ನಡೆಸಿದ್ದಾರೆ. ಸದ್ಯಕ್ಕೆ ಕೃಷ್ಣ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.