ಹಾಡುಗಳ ಮೂಲಕ ಚಳವಳಿ ಹುಟ್ಟು ಹಾಕಿದ್ದ ಖ್ಯಾತ ಜನಪದ ಗಾಯಕ ಗದ್ದರ್ ನಿಧನ..!
Flok Singer Gaddar : ಗದ್ದರ್ ಅವರ ನಿಜವಾದ ಹೆಸರು ಗುಮ್ಮಡಿ ವಿಠ್ಠಲ್ ರಾವ್. ಅವರು ನಿಜಾಮಾಬಾದ್ ಮತ್ತು ಹೈದರಾಬಾದ್‌ನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. 1975ರಲ್ಲಿ ಕೆನರಾ ಬ್ಯಾಂಕ್‌ಗೆ ಸೇರಿದ ಗದ್ದರ್‌ಗೆ ಪತ್ನಿ ವಿಮಲಾ ಮತ್ತು ಮೂವರು ಮಕ್ಕಳಿದ್ದಾರೆ.
Gaddar Passed Away : ಖ್ಯಾತ ಗಾಯಕ ಗದ್ದರ್ ನಿಧನರಾಗಿದ್ದಾರೆ. ತೆಲಂಗಾಣ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗದ್ದರ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಗದ್ದರ್ ಸಾವಿನ ಸುದ್ದಿಯನ್ನು ಅವರ ಪುತ್ರ ಸೂರ್ಯಂ ಖಚಿತಪಡಿಸಿದ್ದಾರೆ. 1949 ರಲ್ಲಿ ತುಫ್ರಾನ್‌ನಲ್ಲಿ ಜನಿಸಿದ ಗದ್ದರ್ ಅವರ ಮೂಲ ಹೆಸರು ವಿಠಲ್ ರಾವ್. ಗದ್ದರ್ ತಮ್ಮ ಹಾಡುಗಳಿಂದ ತೆಲಂಗಾಣ ಚಳವಳಿಯನ್ನು ಹುಟ್ಟು ಹಾಕಿದರು. ಗದ್ದರ್ ನಿಧನದಿಂದ ತೆಲಂಗಾಣ ಜನತೆ ತೀವ್ರ ದುಃಖಿತರಾಗಿದ್ದಾರೆ. ಎರಡು ದಿನಗಳ ಹಿಂದೆ ಆಪರೇಷನ್ ಯಶಸ್ವಿಯಾಗಿದೆ ಎಂದು ಅಪೋಲೋ ಆಸ್ಪತ್ರೆ ಆಡಳಿತ ಮಂಡಳಿ ಘೋಷಿಸಿದ್ದು ಗೊತ್ತೇ ಇದೆ.
ಇದನ್ನೂ ಓದಿ: ಜೈಲರ್ ಹೇಗಿದೆ? ಚಿತ್ರ ನೋಡಿದ ಗಣ್ಯರ ವಿಮರ್ಶೆ..!
ಹೈದರಾಬಾದ್‌ನ ಅಮೀರ್ ಪೇಟ್‌ನಲ್ಲಿರುವ ಅಪೋಲೋ ಸ್ಪೆಕ್ಟಾ ಆಸ್ಪತ್ರೆಯ ವೈದ್ಯರು ಗದ್ದರ್ ಸಾವಿನ ಕುರಿತು ಹೇಳಿಕೆ ನೀಡಿದ್ದಾರೆ. ಶ್ವಾಸಕೋಶ ಮತ್ತು ಮೂತ್ರ ಸಮಸ್ಯೆ ಹಾಗೂ ವಯೋಸಹಜ ಕಾರಣಗಳಿಂದ ಮಧ್ಯಾಹ್ನ 3 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ ಎನ್ನಲಾಗಿದೆ. ತೀವ್ರ ಹೃದ್ರೋಗದಿಂದ ಬಳಲುತ್ತಿದ್ದ ಗದ್ದರ್ ಅವರನ್ನು ಜುಲೈ 20 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಆಗಸ್ಟ್ 3 ರಂದು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಅದರಿಂದ ಚೇತರಿಸಿಕೊಂಡರೂ ಹಿಂದೆ ಶ್ವಾಸಕೋಶದ ಸಮಸ್ಯೆಯಿಂದ ಮೃತಪಟ್ಟರು ಎಂದು ತಿಳಿಸಿದರು.
ಗದ್ದರ್ ಅವರ ನಿಜವಾದ ಹೆಸರು ಗುಮ್ಮಡಿ ವಿಠ್ಠಲ್ ರಾವ್. ಅವರು ನಿಜಾಮಾಬಾದ್ ಮತ್ತು ಹೈದರಾಬಾದ್‌ನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. 1975ರಲ್ಲಿ ಕೆನರಾ ಬ್ಯಾಂಕ್‌ಗೆ ಸೇರಿದ ಗದ್ದರ್‌ಗೆ ಪತ್ನಿ ವಿಮಲಾ ಮತ್ತು ಮೂವರು ಮಕ್ಕಳಿದ್ದಾರೆ. ಜನ ನಾಟ್ಯಮಂಡಳಿಯ ಸಂಸ್ಥಾಪಕರಲ್ಲಿ ಒಬ್ಬರಾದ ಗದ್ದರ್ ಅವರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ತಮ್ಮ ಧ್ವನಿಯೊಂದಿಗೆ ಹೋರಾಡಿದರು. ಅವರು ತಮ್ಮ ಹಾಡುಗಳಿಂದ ಜನರನ್ನು ಹುರಿದುಂಬಿಸುತ್ತಿದ್ದರು. ಗದ್ದರ್ ಹಾಡುಗಳು ತೆಲಂಗಾಣ ಚಳವಳಿಗೆ ಜೀವ ತುಂಬಿದವು.
ಇದನ್ನೂ ಓದಿ: ಮನಸೂರೆಗೊಳ್ಳುತ್ತಿದೆ ಮ್ಯಾಟ್ನಿ ಹಾಡು.."ಏನಮ್ಮಿ ಏನಮ್ಮಿ" ಜೋಡಿಯ ಮತ್ತೊಂದು ಸೂಪರ್ ಹಿಟ್ ಸಾಂಗ್..!
1987ರಲ್ಲಿ ಕರಚೆಂದು ದಲಿತರ ಹತ್ಯೆಗಳ ವಿರುದ್ಧ ಗದ್ದರ್ ನಡೆಸಿದ ಹೋರಾಟ ಎಂದಿಗೂ ಮರೆಯಲಾಗದು. ನಕಲಿ ಎನ್‌ಕೌಂಟರ್‌ಗಳ ವಿರುದ್ಧ ನಿರಂತರ ಹೋರಾಟ ನಡೆಸಿದರು. "ಅಮ್ಮ ತೆಲಂಗಾಣಮಾ" ಮತ್ತು "ಪೊಡುಸನ್ಯ ಪೊದ್ದುಮೀಡ" ಗೀತೆಗಳು ತೆಲಂಗಾಣ ಚಳವಳಿಯಲ್ಲಿ ಜನರ ಹೋರಾಟದ ಜೊತೆಗೂಡಿವೆ. "ಪದಂ ಕೇಳ್ ಪುಟ್ಟುಮಚ್ಚನೈ ಚೆಲ್ಲೆಮಾ.." ಹಾಡಿಗೆ ಗದ್ದರ್ ನಂದಿ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಪೀಪಲ್ಸ್ ವಾರ್, ಮಾವೋವಾದಿ, ತೆಲಂಗಾಣ ಚಳವಳಿಗಳಲ್ಲಿ ತಮ್ಮ ದನಿಯಿಂದ ಕೋಟ್ಯಂತರ ಜನರಿಗೆ ಸ್ಪೂರ್ತಿ ನೀಡಿದ ಗದ್ದರ್ ತಮ್ಮ 74ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.