Mohan Babu attack on reporter : ಕಳೆದ ಮೂರ್ನಾಲ್ಕು ದಿನಗಳಿಂದ ತೆಲುಗು ಸಿನಿರಂಗದಲ್ಲಿ ಹೆಸರುವಾಸಿಯಾಗಿರುವ ಮಂಚು ಕುಟುಂಬದಲ್ಲಿ ಗಲಾಟೆ ನಡೆಯುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಮೋಹನ್‌ ಬಾಬು ತಮ್ಮ ಮಂಚು ಮನೋಜ್‌ ನಡುವೆ ಗಲಾಟೆಯಾಗಿತ್ತು.. ತಂದೆ-ಮಗನ ಜಗಳ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ..


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಟಿವಿ9 ವರದಿಗಾರನ ಮೇಲೆ ಮೋಹನ್ ಬಾಬು ಹಲ್ಲೆ ಮಾಡಿದ್ದರು. ಈ ಘಟನೆಗೆ ರಾಜಕೀಯ ಮುಖಂಡರು, ಗಣ್ಯರು, ಸಿನಿರಂಗದ ನಟರು ತೀವ್ರ ಟೀಕೆ ಮಾಡಿದ್ದರು. ಮೇಲಾಗಿ ಉಭಯ ರಾಜ್ಯಗಳ ಪತ್ರಕರ್ತರ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ, ಮೋಹನ್ ಬಾಬು ವಿರುದ್ಧ ಪ್ರಕರಣ ದಾಖಲಾಗಿತ್ತು..


ಇದನ್ನೂ ಓದಿ:ಬಿಗ್‌ಬಾಸ್‌ ಮನೆಯಲ್ಲಿ ನಡೆದೇ ಹೋಯ್ತು ಅನೀರಿಕ್ಷಿತ ಘಟನೆ! ದೊಡ್ಮನೆಯಿಂದ ರಜತ್‌ ಔಟ್!?‌


ಘಟನೆ ಹಿನ್ನೆಲೆ : ಶಂಶಾಬಾದ್‌ನ ಜಲಪಲ್ಲಿಯಲ್ಲಿರುವ ಮೋಹನ್‌ ಬಾಬು ಫಾರ್ಮ್‌ ಹೌಸ್‌ಗೆ ಅವರ ಪುತ್ರ ಮಂಚು ಮನೋಜ್‌ ಹೋಗಿದ್ದರು. ಆಗ ಮನೋಜ್‌ ಗೇಟ್ ಮುರಿದು ಒಳಗೆ ಹೋದರು.. ಆ ಸಂದರ್ಭದಲ್ಲಿ ಪತ್ರಕರ್ತರೂ ಅಲ್ಲಿಗೆ ಕವರೇಜ್ ಮಾಡಲು ಹೋಗಿದ್ದರು. ಆದರೆ ಮೋಹನ್ ಬಾಬು ಅವರ ಮೇಲೆ ಒಮ್ಮೆಲೇ ಕಿಡಿಕಾರಿದರು. ಮೈಕ್ ಕಿತ್ತುಕೊಂಡ ಅಯ್ಯಪ್ಪ ಮಾಳ ಎಂಬ ಟಿವಿ9 ವರದಿಗಾರನ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ವರದಿಗಾರ ಗಂಭೀರವಾಗಿ ಗಾಯಗೊಂಡಿದ್ದ. ಇದಾದ ಕೆಲವೇ ದಿನಗಳಲ್ಲಿ ಮೋಹನ್ ಬಾಬು ಅವರ ಬಿಪಿ ಲೆವೆಲ್ಸ್ ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು.


ದರ್ಶನ್ ಜಾಮೀನು ಭವಿಷ್ಯ ನಾಳೆ ನಿರ್ಧಾರ; ಶುಭ ಶುಕ್ರವಾರವೋ? ಬ್ಲ್ಯಾಕ್ ಫ್ರೈಡೇಯೋ?


ಪತ್ರದಲ್ಲಿ ಏನಿದೆ..? : 'ನನ್ನ ಕೌಟುಂಬಿಕ ಸಮಸ್ಯೆ ಇಷ್ಟು ದೊಡ್ಡದಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ಟಿವಿ9 ಪತ್ರಕರ್ತರು ತೊಂದರೆ ಅನುಭವಿಸಿದ್ದಕ್ಕಾಗಿ ವಿಷಾದಿಸುತ್ತೇನೆ. ನನ್ನ ಆರೋಗ್ಯ ಹದಗೆಟ್ಟಿದ್ದರಿಂದ ತಕ್ಷಣ ಸ್ಪಂದಿಸಲು ಸಾಧ್ಯವಾಗಲಿಲ್ಲ... 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಹಾಗಾಗಿಯೇ ಪತ್ರಕರ್ತರೊಬ್ಬರು ಸಿಟ್ಟಿನ ಪ್ರಸಂಗದಲ್ಲಿ ಗಾಯಗೊಂಡಿರುವುದು ತುಂಬಾ ನೋವಿನ ಸಂಗತಿ. ನಾನು ಹಾಗು ನನ್ನ ಕುಟುಂಬ ಟಿವಿ 9ಗೆ ಕ್ಷಮೆಯಾಚಿಸುತ್ತೇನೆʼ ಎಂದು ಬರೆದುಕೊಂಡಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.