Samantha: ನಟಿ ಸಮಂತಾ ಫಿಟ್ನೆಸ್‌ ಸಿಕ್ರೇಟ್‌ ಇಲ್ಲಿದೆ ನೋಡಿ.. ನೀವೂ ಒಮ್ಮೆ ಟ್ರೈ ಮಾಡಿ

Samantha Rut Prabhu: ಸೌತ್‌ ಇಂಡಿಯಾದ ಜನಪ್ರಿಯ ನಟಿಯರಲ್ಲಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ತಮ್ಮ ಬ್ಯೂಟಿಯಿಂದಲೇ ಜನರ ಮನಸೆಳೆಯುವ ಸಮಂತಾ ಸದಾ ಫಿಟ್ ಆಗಿರಲು ಬುಯಸುತ್ತಾರೆ. ಇದಕ್ಕಾಗಿ ಸಾಕಷ್ಟು ವರ್ಕೌಟ್‌ ಜೊತೆ ಡಯೇಟ್‌ ಕೂಡ ಫಾಲೋ ಮಾಡುತ್ತಾರೆ.

Written by - Chetana Devarmani | Last Updated : Jun 6, 2022, 06:21 PM IST
  • ತೆಲುಗಿನ ಜನಪ್ರಿಯ ನಟಿಯರಲ್ಲಿ ಸಮಂತಾ ರುತ್ ಪ್ರಭು
  • ಬ್ಯೂಟಿಯಿಂದಲೇ ಜನರ ಮನಸೆಳೆಯುವ ಸಮಂತಾ
  • ನಟಿ ಸಮಂತಾ ಫಿಟ್ನೆಸ್‌ ಸಿಕ್ರೇಟ್‌ ಇಲ್ಲಿದೆ ನೋಡಿ
Samantha: ನಟಿ ಸಮಂತಾ ಫಿಟ್ನೆಸ್‌ ಸಿಕ್ರೇಟ್‌ ಇಲ್ಲಿದೆ ನೋಡಿ.. ನೀವೂ ಒಮ್ಮೆ ಟ್ರೈ ಮಾಡಿ  title=
ಸಮಂತಾ

Samantha Fitness Secrete: ಸೌತ್‌ ಇಂಡಿಯಾದ ಜನಪ್ರಿಯ ನಟಿಯರಲ್ಲಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ತಮ್ಮ ಬ್ಯೂಟಿಯಿಂದಲೇ ಜನರ ಮನಸೆಳೆಯುವ ಸಮಂತಾ ಸದಾ ಫಿಟ್ ಆಗಿರಲು ಬುಯಸುತ್ತಾರೆ. ಇದಕ್ಕಾಗಿ ಸಾಕಷ್ಟು ವರ್ಕೌಟ್‌ ಜೊತೆ ಡಯೇಟ್‌ ಕೂಡ ಫಾಲೋ ಮಾಡುತ್ತಾರೆ. ತಮ್ಮ ದಿನ ನಿತ್ಯದ ರೂಟಿನ್‌ನಲ್ಲಿ ಈ ಐದು ಸಂಗತಿಗಳನ್ನು ತಪ್ಪದೇ ಫಾಲೋ ಕೂಡ ಮಾಡುತ್ತಾರೆ. ಅವರ ದೇಹದ ಫಿಟ್ನೆಸ್ ಮತ್ತು ಸೌಂದರ್ಯ ಮತ್ತು ಪಾತ್ರಕ್ಕೆ ಸರಿ ಹೊಂದಲು ಮೊದಲೇ ಮಾಡಿಕೊಳ್ಳುವ ತಯಾರಿ ಎಂಥವರಿಗೂ ಸ್ಫೂರ್ತಿ ನೀಡುವಂತಿದೆ. 

ನಟಿ ಸಮಂತಾ ಫಿಟ್ನೆಸ್‌ ಸಿಕ್ರೇಟ್‌ ಇಲ್ಲಿದೆ ನೋಡಿ: 

1.ಕ್ಯಾಲೋರಿಗಳನ್ನು ಬರ್ನ್ ಮಾಡುವುದು: ಫಿಟ್ನೆಸ್ ತರಬೇತಿಯ ವಿಚಾರದಲ್ಲಿ ನಟಿ ಸಮಂತಾ ಹೆಚ್ಚು ಕಷ್ಟಪಟ್ಟು ಜಿಮ್ ನಲ್ಲಿ ವರ್ಕೌಟ್‌ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಇನ್‌ಸ್ಟಾಗ್ರಾಮ್ ನಲ್ಲಿ ಇತ್ತೀಚೆಗೆ ಹಾಕಿಕೊಂಡಿರುವ ಅವರ ಒಂದು ವಿಡಿಯೋದಲ್ಲಿ ಅವರು ತಮ್ಮ ಕ್ಯಾಲೋರಿ ಬರ್ನ್‌ ಮಾಡಲು ಎಷ್ಟೆಲ್ಲ ಕಷ್ಟ ಪಡುತ್ತಾರೆ ಎಂಬುದನ್ನು ತಿಳಿಯಬಹುದು.

ಇದನ್ನೂ ಓದಿ: Megha Shetty: ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಮೇಘಾ ಶೆಟ್ಟಿ!

2.ಸ್ಕೀಯಿಂಗ್ ಮಾಡುವುದು: ಸ್ಕೀಯಿಂಗ್ ನಲ್ಲಿ ನಟಿ ಸಮಂತಾ ಅವರು ಎಷ್ಟೇ ಬಾರಿ ಎಡವಿದರೂ ಸಹ ಅದನ್ನು ಬಿಡದೆ ಕಲಿತುಕೊಂಡು ಅದನ್ನು ಸರಾಗವಾಗಿ ಮಾಡಿ ಆನಂದಿಸಿದ್ದಾರೆ. ಇದಲ್ಲದೇ, ಸಾಹಸ ಕ್ರೀಡೆಗಳನ್ನು ಸಹ ಇವರು ತುಂಬಾ ಇಷ್ಟ ಪಡುತ್ತಾರೆ. 

3.ಸೈಕಲ್ ಸವಾರಿ: ನಟಿ ಸಮಂತಾ ರುತ್‌ ಪ್ರಭು ಸೈಕಲ್ ಸವಾರಿ ಮಾಡುವ ಮೂಲಕವೂ ದೈಹಿಕ ಚಟುವಟಿಕೆ ಮಾಡುತ್ತಾರೆ. 

4.ಸಿಂಗಲ್ ಹ್ಯಾಂಡ್ ಪ್ಲ್ಯಾಂಕ್ಸ್ ಚಾಲೆಂಜ್: ಈ ಎಲ್ಲದರ ಜೊತೆ ಒಂಟಿ ಕೈಯಲ್ಲಿ ಪ್ಲ್ಯಾಂಕ್ಸ್ ಮಾಡುತ್ತಾರೆ. ತಾವು ಮಾಡುವುದು ಮಾತ್ರವಲ್ಲ ಇತರರಿಗೂ ಈ ರೀತಿ ಮಾಡುವಂತೆ ಸವಾಲು ಹಾಕುತ್ತಾರೆ. 

5.ನಾಯಿ ಎಂದರೆ ಬಲು ಇಷ್ಟ: ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿ ನಟಿ ಸಮಂತಾ ಪ್ರತಿದಿನ ತಪ್ಪದೆ ತಮ್ಮ ನಾಯಿಯೊಂದಿಗೆ ಆಟವಾಡುತ್ತಾರೆ. ಈ ಮೂಲಕವೂ ತಮ್ಮ ಕೊಬ್ಬನ್ನು ಬರ್ನ್‌ ಮಾಡುತ್ತಾರೆ. 

ಇದನ್ನೂ ಓದಿ: Bairagi: ಶಿವಣ್ಣ ಅಭಿನಯದ 123ನೇ ಚಿತ್ರ 'ಬೈರಾಗಿ' ರಿಲೀಸ್‌ ಡೇಟ್‌ ಫಿಕ್ಸ್‌ 

ಈ ಎಲ್ಲದರ ಜೊತೆ ಸಮಂತಾ ಡಯಟ್‌ ಕೂಡ ಫಾಲೋ ಮಾಡುತ್ತಾರೆ. ಹಸಿರು ಸೊಪ್ಪನ್ನು ಹೆಚ್ಚಾಗಿ ತಮ್ಮ ಆಹಾರದಲ್ಲಿ ಸೇವಿಸುತ್ತಾರೆ. ಅಲ್ಲದೇ ತರಕಾರಿ, ಹಣ್ಣುಗಳನ್ನು ಸಹ ತಿನ್ನುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News