)
ನಂದಮೂರಿ ಬಾಲಕೃಷ್ಣ... ಈ ಹೆಸರು ಅನೇಕರಿಗೆ ಪರಿಚಯ ಸಿಗಲಿಕ್ಕಿಲ್ಲ. ಆದರೆ ನಟ ಬಾಲಯ್ಯ ಅಂದರೆ ಎಲ್ಲರಿಗೂ ಚಿರಪರಿಚಿತ. ನಂದಮೂರಿ ವಂಶಸ್ಥರಾಗಿ ಬಾಲಯ್ಯ ಟಾಲಿವುಡ್ನಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ. ಬಾಲಯ್ಯ ಎಂದೇ ಖ್ಯಾತಿ ಗಳಿಸಿದ್ದಾರೆ.
ಸಿನಿಮಾ ಇಂಡಸ್ಟ್ರಿಗೆ ಬಂದಾಗಿನಿಂದ ತಮ್ಮ ವಿಭಿನ್ನ ನಟನಾ ಶೈಲಿಯಿಂದ ತಮ್ಮದೇ ಛಾಪು ಮೂಡಿಸಿದ್ದಾರೆ. ನಂದಮೂರಿ ಬಾಲಕೃಷ್ಣ ಅವರ ಮಗ ಮೋಕ್ಷಜ್ಞ ಇತ್ತೀಚೆಗೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಆದರೆ ಬಾಲಯ್ಯ ಅವರಿಗೆ ಇಬ್ಬರು ಮಗಳಂದಿರೂ ಸಹ ಇದ್ದಾರೆ. ಇವರಿಬ್ಬರೂ ತಂದೆಯಂತೆಯೇ ಸಾಕಷ್ಟು ಜನಪ್ರಿಯರಾಗಿದ್ದಾರೆ.
ನಟ ಬಾಲಯ್ಯ ಅವರ ದೊಡ್ಡ ಮಗಳು ಬ್ರಾಹ್ಮಿಣಿ. ಇವರು ನಾರಾ ಮನೆತನದ ಸೊಸೆಯಾಗಿದ್ದಾರೆ. ಲೋಕೇಶ್ ನಾರಾ ಅವರ ಪತ್ನಿ ಬ್ರಾಹ್ಮಿಣಿ. ಅಷ್ಟೇ ಅಲ್ಲ ಬ್ರಾಹ್ಮಿಣಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಸೊಸೆ ಕೂಡ ಹೌದು. ಚಿಕ್ಕ ವಯಸ್ಸಿಗೆ ಉದ್ಯಮ ರಂಗಕ್ಕೆ ಕಾಲಿಟ್ಟ ಬ್ರಾಹ್ಮಿಣಿ ಒಳ್ಳೆ ಬಿಸಿನೆಸ್ ವುಮನ್ ಆಗಿದ್ದಾರೆ. ಹೆರಿಟೇಜ್ ಸೇರಿದಂತೆ ಹಲವು ಕಂಪನಿಗಳನ್ನು ನಡೆಸುತ್ತಾರೆ .
ಇನ್ನೂ ಬಾಲಯ್ಯ ಅವರ ಚಿಕ್ಕ ಮಗಳು ತೇಜಸ್ವಿನಿ. ಇವರು ತಂದೆಯಂತೆ ಸಿನಿರಂಗದಲ್ಲಿದ್ದಾರೆ. ಆದರೆ ನಟನೆಯಿಂದ ದೂರವಿದ್ದಾರೆ. ತೇಜಸ್ವಿನಿ ನಿರ್ಮಾಪಕಿಯಾಗಿದ್ದಾರಂತೆ. ತಮ್ಮ ಮೋಕ್ಷಜ್ಞ ಸಿನಿಮಾವನ್ನ ತೇಜಸ್ವಿನಿ ಅವರೇ ನಿರ್ಮಿಸುತ್ತಿದ್ದಾರಂತೆ.
‘ಗಾಡ್ ಆಫ್ ಮಾಸ್’ ಎಂದೇ ದಕ್ಷಿಣ ಸಿನಿರಂಗದಲ್ಲಿ ನಂದಮೂರಿ ಬಾಲಕೃಷ್ಣ ಅವರನ್ನು ಕರೆಯಲಾಗುತ್ತದೆ. ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ಬಾಲಯ್ಯ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ನಂದಮೂರಿ ಬಾಲಕೃಷ್ಣ ಟಾಲಿವುಡ್ ಸ್ಟಾರ್ ನಟ. ವಯಸ್ಸು 60 ದಾಟಿದ್ದರೂ ಸಹ ಬಾಲಕೃಷ್ಣ ನಟಿಸಿದ ಎಲ್ಲ ಸಿನಿಮಾಗಳೂ ಸೂಪರ್ ಹಿಟ್ ಆಗುತ್ತಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.