Thalapathy Vijay Iftar party video: ದಳಪತಿ ವಿಜಯ್ ಸದ್ಯ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ತಮಿಳಾಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಸ್ಥಾಪಿಸಿದರು. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿರುವ ವಿಜಯ್, ರಾಜಕೀಯ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಆಯೋಜಿಸುತ್ತಿದ್ದಾರೆ. ಶುಕ್ರವಾರ (ಮಾರ್ಚ್ 07) ಚೆನ್ನೈನಲ್ಲಿ ಅವರ ಪಕ್ಷ ಇಫ್ತಾರ್ ಕೂಟ ಆಯೋಜಿಸಿತ್ತು. ರಂಜಾನ್ ಹಿನ್ನೆಲೆ ಆಯೋಜಿಸಿದ್ದ ಈ ಇಫ್ತಾರ್ ಕೂಟದಲ್ಲಿ ದಳಪತಿ ವಿಜಯ್ ಸಹ ಭಾಗಿಯಾಗಿದ್ದರು. ಇಫ್ತಾರ್ ಕೂಟದಲ್ಲಿನ ದಳಪತಿ ವಿಜಯ್ ಲುಕ್ ವೈರಲ್ ಆಗಿತ್ತು. ವೈಟ್ ಅಂಡ್ ವೈಟ್ ನಲ್ಲಿ ಟೋಪಿ ಧರಿಸಿರುವ ವಿಜಯ್ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ.
#WATCH | Tamilaga Vettri Kazhagam founder and chief Vijay hosts 'Iftar' during Ramzan month, in Chennai pic.twitter.com/tmxP95wEME
— ANI (@ANI) March 7, 2025
ಇಫ್ತಾರ್ ಔತಣಕೂಟದಲ್ಲಿ ದಳಪತಿ ವಿಜಯ್ ಮುಸ್ಲಿಂ ಸಹೋದರರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ವಿಜಯ್ ಮುಸ್ಲಿಮರು ಧರಿಸುವ ಸಾಂಪ್ರದಾಯಿಕ ಟೋಪಿಯನ್ನು ತಲೆಯ ಮೇಲೆ ಧರಿಸಿದ್ದರು. ಮುಸ್ಲಿಂ ಸಹೋದರರ ನಡುವೆ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿರುವ ದಳಪತಿಯ ಫೋಟೋ ವೈರಲ್ ಆಗಿದೆ.
ಇದನ್ನೂ ಓದಿ: ಇದು ಸಿನಿರಂಗದ ಅತ್ಯಂತ ದುಬಾರಿ ಡಿವೋರ್ಸ್.. ಪತ್ನಿಗೆ 380 ಕೋಟಿ ಜೀವನಾಂಶ ಕೊಟ್ಟಿರುವ ಖ್ಯಾತ ಹೀರೋ!
ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ಮತ್ತು ಮುಖ್ಯಸ್ಥ ವಿಜಯ್ ಅವರು ತಮ್ಮ ಆಹ್ವಾನದ ಮೇರೆಗೆ ಇಫ್ತಾರ್ ಔತಣಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಹೇಳುವ ವಿಡಿಯೋ ಕೂಡ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ರಾಯಪೇಟ ವೈಎಂಸಿಎ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಭಾಗವಹಿಸಿದ್ದರು. ಪ್ರಾರ್ಥನೆಯ ನಂತರ ಉಪವಾಸ ಮುರಿದು ಮುಸ್ಲಿಂ ಜನರೊಂದಿಗೆ ಔತಣಕೂಟ ನಡೆಸಿದರು.ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಅವರ ಅಭಿಮಾನಿಗಳು ವಿಜಯ್ ಜೊತೆ ಫೋಟೋ ತೆಗೆಸಿಕೊಂಡರು.
Thalapathy Vijay joins the #Iftar celebrations and breaks his fast ??? #TVKVijay @actorvijay @TVKVijayHQ pic.twitter.com/GbzPCsDDe0
— Vijay Fans Trends (@VijayFansTrends) March 7, 2025
ದಳಪತಿ ವಿಜಯ್ ಕೊನೆಯ ಬಾರಿಗೆ 2024 ರಲ್ಲಿ ವೆಂಕಟ್ ಪ್ರಭು ನಿರ್ದೇಶನದ 'ದಿ ಗೋಟ್' ಚಿತ್ರದಲ್ಲಿ ನಟಿಸಿದ್ದರು. ಅವರು ಶೀಘ್ರದಲ್ಲೇ ಎಚ್.ವಿನೋದ್ ನಿರ್ದೇಶನದಲ್ಲಿ 'ಜನನಾಯಕ' ಚಿತ್ರದಲ್ಲಿ ನಟಿಸಲಿದ್ದಾರೆ. ಟಿವಿಕೆ ರ್ಯಾಲಿಯಲ್ಲಿ ವಿಜಯ್ ಇದು ತಮ್ಮ ಕೊನೆಯ ಚಿತ್ರ ಎಂದು ದೃಢಪಡಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ತಮ್ಮ 69ನೇ ಚಿತ್ರದೊಂದಿಗೆ ದಳಪತಿ ವಿಜಯ್ ನಟನಾ ವೃತ್ತಿಯನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ರಾಜಕೀಯದತ್ತ ಗಮನಹರಿಸುತ್ತೇನೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಬದ್ಧನಾಗಿರುತ್ತೇನೆ ಎಂದು ದಳಪತಿ ವಿಜಯ್ ತಿಳಿಸಿದ್ದಾರೆ. 2026 ರ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ ತಮಿಳುನಾಡಿನಲ್ಲಿ ಸ್ಪರ್ಧಿಸಲಿದೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್ ನಟ ಚಿಕ್ಕಣ್ಣಗೆ ಕೂಡಿ ಬಂತು ಕಂಕಣ ಭಾಗ್ಯ! ಹುಡುಗಿ ಇವರೇ ನೋಡ್ರಿ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









