ಈ 32 ವರ್ಷದ ಸೂಪರ್‌ಸ್ಟಾರ್ 15 ವರ್ಷದ ನಟಿಗೆ ಸೆಟ್‌ನಲ್ಲೇ ಬಲವಂತವಾಗಿ ಮುತ್ತಿಕ್ಕಿದ್ದರು!!

Actress Rekha & Biswajit Chatterjee: ಆ ದಿನಗಳಲ್ಲಿ ಈ ಸಿನಿಮಾದ ದೃಶ್ಯ ದೊಡ್ಡ ಸುದ್ದಿಯಾಗಿತ್ತು. ಬಿಸ್ವಜಿತ್‌ ರೇಖಾರಿಗೆ ಕಿಸ್‌ ಮಾಡಿದ್ದು ಸಖತ್‌ ಸೌಂಡ್‌ ಮಾಡಿತ್ತು. ನಂತರ ಸಂದರ್ಶವೊಂದರಲ್ಲಿ ಬಿಸ್ವಜಿತ್‌ ಈ ಘಟನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಆ ದೃಶ್ಯವನ್ನು ಹೆಮ್ಮೆಯಿಂದ ಸಮರ್ಥಿಸಿಕೊಂಡಿದ್ದರು. 

Written by - Puttaraj K Alur | Last Updated : May 24, 2025, 04:49 PM IST
  • ಶೂಟಿಂಗ್‌ ಸೆಟ್‌ನಲ್ಲಿ ನಟಿಗೆ ಬಲವಂತವಾಗಿ ಮುತ್ತಿಕ್ಕಿದ ಸ್ಟಾರ್‌ ನಟ
  • ತಮ್ಮ ವೃತ್ತಿಜೀವನದಲ್ಲಿ ಆದ ಕಹಿ ಘಟನೆ ಬಗ್ಗೆ ತಿಳಿಸಿದ ನಟಿ ರೇಖಾ
  • ನಟಿ ರೇಖಾರಿಗೆ ಕಿಸ್‌ ಮಾಡಿದ್ದ ಬಂಗಾಳಿ ಸೂಪರ್‌ಸ್ಟಾರ್ ಬಿಸ್ವಜಿತ್ ಚಟರ್ಜಿ
ಈ 32 ವರ್ಷದ ಸೂಪರ್‌ಸ್ಟಾರ್ 15 ವರ್ಷದ ನಟಿಗೆ ಸೆಟ್‌ನಲ್ಲೇ ಬಲವಂತವಾಗಿ ಮುತ್ತಿಕ್ಕಿದ್ದರು!!

Biswajit Chatterjee: ಚಿತ್ರರಂಗದ ನಟ-ನಟಿಯರು ಕೆಲವು ಭಯಾನಕ ಘಟನೆಗಳನ್ನು ಎದುರಿಸಿದ್ದಾರೆ. ಈ ಕಹಿ ಘಟನೆಗಳು ಅವರ ಘನತೆಯನ್ನೇ ಪ್ರಶ್ನಿಸುವಂತೆ ಮಾಡಿತು. ಇವರಲ್ಲಿ ಕೆಲವರು ಇಂಡಸ್ಟ್ರಿಯಲ್ಲಿ ಉಳಿದರು, ಆದರೆ ಹಲವರು ಚಿತ್ರರಂಗವನ್ನೇ ತೊರೆದರು. ಅದರಂತೆ ಒಬ್ಬ ಹಿರಿಯ ನಟಿ ತನ್ನ ಸಿನಿಮಾ ವೃತ್ತಿಜೀವನ ಪ್ರಾರಂಭಿಸಿದಾಗ ಆದ ಕಹಿ ಘಟನೆ ಬಗ್ಗೆ ತಿಳಿಸಿದ್ದಾರೆ.

Add Zee News as a Preferred Source

ನಟಿಗೆ ಬಲವಂತವಾಗಿ ಚುಂಬಿಸಿದ ಸ್ಟಾರ್‌ ನಟ!

ಹೌದು, ನಾವು ಮಾತನಾಡುತ್ತಿರುವ ನಟಿ ಬೇರೆ ಯಾರೂ ಅಲ್ಲ. ಅವರೇ ಭಾರತೀಯ ಸಿನಿಮಾ ಇತಿಹಾಸದಲ್ಲಿ ಅದ್ಭುತ ಮೈಲಿಗಲ್ಲು ಸೃಷ್ಟಿಸಿದ ರೇಖಾ. ನಿಮ್ಮಲ್ಲಿ ಹಲವರಿಗೆ ಇದು ತಿಳಿದಿಲ್ಲದಿರಬಹುದು. 15ನೇ ವಯಸ್ಸಿನಲ್ಲಿ ಈ ನಟಿಗೆ ಸಹನಟನೊಬ್ಬ ಬಲವಂತವಾಗಿ ಚುಂಬಿಸಿದ್ದು ಅವರನ್ನು ಆಘಾತಕ್ಕೀಡು ಮಾಡಿತು. 1969ರಲ್ಲಿ ನಟಿ ಕುಲ್ಜಿತ್ ಪಾಲ್ ಅವರ ʼದೋ ಶಿಕಾರಿʼ ಚಿತ್ರಕ್ಕೆ ಸಹಿ ಹಾಕಿದರು. ಈ ಚಿತ್ರದಲ್ಲಿ ಅವರು 60ರ ದಶಕದ ಬಂಗಾಳಿ ಸೂಪರ್‌ಸ್ಟಾರ್ ಬಿಸ್ವಜಿತ್ ಚಟರ್ಜಿ ಅವರೊಂದಿಗೆ ಜೋಡಿಯಾಗಿದ್ದರು. ಆ ಸಮಯದಲ್ಲಿ ಬಿಸ್ವಜಿತ್ ವಯಸ್ಸು 32 ಆಗಿದ್ದರೆ, ರೇಖಾರಿಗೆ 15 ವರ್ಷವಾಗಿತ್ತು.

ಇದನ್ನೂ ಓದಿ: ಬಿಗ್‌ ಆಫರ್‌, 6 ಕೋಟಿ, ರಾತ್ರೋರಾತ್ರಿ ಶ್ರೀಮಂತಳಾದ ಸ್ಟಾರ್‌ ನಟಿ..! ಯಾರು ಈ ಚೆಲವೆ..?

ರೇಖಾ ಅವರ ಪ್ರಕಟಿತ ಜೀವನ ಚರಿತ್ರೆಯಲ್ಲಿ ಈ ಸಂಗತಿಯನ್ನ ಉಲ್ಲೇಖಿಸಲಾಗಿದೆ. ನಾಯಕ ನಟ ಮತ್ತು ನಿರ್ದೇಶಕರು ತಮ್ಮ ಒಪ್ಪಿಗೆಯಿಲ್ಲದೆ ಚುಂಬನ ದೃಶ್ಯವನ್ನು ಚಿತ್ರೀಕರಿಸಲು ಯೋಜಿಸಿದ ಘಟನೆಯನ್ನು ರೇಖಾ ಅವರು ತಿಳಿಸಿದ್ದಾರೆ. ಈ ನಿರ್ದಿಷ್ಟ ದೃಶ್ಯದಲ್ಲಿ ಬಿಸ್ವಜಿತ್ ತಮ್ಮ ಸಹನಟಿಯ ಮೇಲಿನ ಪ್ರೀತಿಯನ್ನು ಪ್ರದರ್ಶಿಸಬೇಕಾಗಿತ್ತು. ಕ್ಯಾಮೆರಾ ಆನ್‌ ಆಗಿತ್ತು.. ನಟ ಕಿಸ್‌ ಮಾಡಲು ರೇಖಾರನ್ನ ಬಿಗಿದಪ್ಪಿದ್ದರು. ಆದರೆ ಇದೆಲ್ಲದರ ಅರಿವು ಇಲ್ಲದ ರೇಖಾರಿಗೆ ಮುಜುಗರವನ್ನುಂಟು ಮಾಡಿತು. ನಿರ್ದೇಶಕರು ಈ ದೃಶ್ಯಕ್ಕೆ ಕಟ್‌ ಹೇಳಿರಲಿಲ್ಲ... ನಟ ಬಿಸ್ವಜಿತ್ ಅವರು ರೇಖಾರಿಗೆ ಮನಸಾರೆ ಚುಂಬಿಸಿದರು. ದೃಶ್ಯ ಮುಗಿದ ನಂತರ ರೇಖಾ ಕಣ್ಣೀರು ಹಾಕಿದ್ದರು. ಅವರ ತುಟಿಗಳಿಂದ ರಕ್ತಸ್ರಾವವಾಗುತ್ತಿತ್ತು. 

ಆ ದಿನಗಳಲ್ಲಿ ಈ ಸಿನಿಮಾದ ದೃಶ್ಯ ದೊಡ್ಡ ಸುದ್ದಿಯಾಗಿತ್ತು. ಬಿಸ್ವಜಿತ್‌ ರೇಖಾರಿಗೆ ಕಿಸ್‌ ಮಾಡಿದ್ದು ಸಖತ್‌ ಸೌಂಡ್‌ ಮಾಡಿತ್ತು. ನಂತರ ಸಂದರ್ಶವೊಂದರಲ್ಲಿ ಬಿಸ್ವಜಿತ್‌ ಈ ಘಟನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಆ ದೃಶ್ಯವನ್ನು ಹೆಮ್ಮೆಯಿಂದ ಸಮರ್ಥಿಸಿಕೊಂಡಿದ್ದರು. ಈ ದೃಶ್ಯವನ್ನು ಶೂಟ್‌ ಮಾಡುವಾಗ ನಾನು ನಿರ್ದೇಶಕರು ಹೇಳಿದಂತೆ ನಟಿಸಿದೆ, ಇದು ಪ್ರೇಕ್ಷಕರು ಇಷ್ಟವಾಗಿದೆ. ಇದರಲ್ಲಿ ಯಾವುದೇ ತಪ್ಪು ಆಗಿಲ್ಲ. ಇದನ್ನ ವಿವಾದ ಮಾಡುವ ಅಗತ್ಯವಿಲ್ಲವೆಂದು ಹೇಳಿಕೊಂಡಿದ್ದರು. 

ಇದನ್ನೂ ಓದಿ: ಕಿರುತೆರೆಯಲ್ಲಿ ಮತ್ತೊಂದು ಡಿವೋರ್ಸ್‌ ಸದ್ದು.. ಪ್ರಖ್ಯಾತ ಸಿರೀಯಲ್‌ ನಟನ ದಾಂಪತ್ಯದಲ್ಲಿ ಬಿರುಕು! ಹಾಲು ಜೇನಿನಂತಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದೇಕೆ?

ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್‌ ಮಾಡದ ಸಿನಿಮಾ!

ಈ ಚುಂಬನ ಘಟನೆಯ ನಂತರ ರೇಖಾ ಸೆಟ್‌ಗೆ ಹಿಂತಿರುಗಲು ಒಪ್ಪದ ಕಾರಣ ಚಿತ್ರ ವಿಳಂಬವಾಯಿತು. ಅದು ಹೇಗೋ ನಿರ್ಮಾಪಕರು ಇಬ್ಬರನ್ನೂ ಅಂದರೆ ನಟ-ನಟಿಯರನ್ನ ಒಪ್ಪಿಸಿ ಚಿತ್ರವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು. ನಂತರ ಈ ಸಿನಿಮಾ 1979ರಲ್ಲಿ ಬಿಡುಗಡೆಯಾಯಿತು. ಆದರೆ ಅದು ಗಲ್ಲಾಪೆಟ್ಟಿಗೆಯಲ್ಲಿ ಕೆಟ್ಟದಾಗಿ ಸೋತಿತು. ಈ ಘಟನೆಯ ನಂತರ ರೇಖಾ ಮತ್ತು ಬಿಸ್ವಜಿತ್ ಎಂದಿಗೂ ಒಟ್ಟಿಗೆ ಮತ್ತೊಂಚು ಸಿನಿಮಾದಲ್ಲಿ ಕೆಲಸ ಮಾಡಲಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News