)
Richest Comedian In India: ಹಾಸ್ಯ ಮತ್ತು ನಗುವಿಗೆ ಸಮಾನಾರ್ಥಕ ಹೆಸರು ಬ್ರಹ್ಮಾನಂದಂ ಎನ್ನುವಷ್ಟರ ಮಟ್ಟಿಗೆ ಕಳೆದ ನಾಲ್ಕು ದಶಕಗಳಿಂದ ಬ್ರಹ್ಮಾನಂದಂ ಅವರು ಬೆಳ್ಳಿತೆರೆಯಲ್ಲಿ ನಗುವಿನ ಹಾಸ್ಯನಟನೆಯ ರಾಜನಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಬಹುತೇಕ ಜನರಿಗೆ ಗೊತ್ತಿರದ ವಿಷಯವೆಂದರೆ ಈತ ಇಡೀ ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ಹಾಸ್ಯನಟ ಎಂಬುದು. ಬ್ರಹ್ಮಾನಂದಂ ಆರಂಭಿಕ ಜೀವನ ಹೇಗಿತ್ತು? ಬ್ರಹ್ಮಾನಂದಂ ಸಿನಿಮಾ ಪ್ರಯಾಣ? ಬ್ರಹ್ಮಾನಂದಂ ಅವರ ಸಂಭಾವನೆ ಎಷ್ಟು? ಬ್ರಹ್ಮಾನಂದಂ ಒಟ್ಟು ನಿವ್ವಳ ಆಸ್ತಿ ಮೌಲ್ಯ ಎಷ್ಟಿದೆ? ಎಂಬ ವಿವರ ತಿಳಿಯಲು ಮುಂದೆ ಓದಿ...
20ನೇ ವಯಸ್ಸಿನಲ್ಲಿ ನಟನೆಯನ್ನು ಪ್ರಾರಂಭಿಸಿದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಇದುವರೆಗೂ 1050ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಾಸ್ಯನಟ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಇವರು 1986ರಲ್ಲಿ ಬಿಡುಗಡೆಯಾದ "ಚಂತಬ್ಬಾಯಿ" ಚಿತ್ರದೊಂದಿಗೆ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಬ್ರಹ್ಮಾನಂದಂ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟ
ಕೇವಲ ಒಂದೇ ವರ್ಷದಲ್ಲಿ ಸತತವಾಗಿ 30 ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಇವರಿಗಿದೆ. ಇವರು ತೆಲುಗಿನ ಬಹುತೇಕ ಎಲ್ಲಾ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ನಟಿಸಿ ಎಲ್ಲರನ್ನೂ ಮೆಚ್ಚಿಸಿದ್ದಾರೆ ಮತ್ತು ಇಂದಿಗೂ ಅಭಿಮಾನಿಗಳನ್ನ ನಗಿಸುತ್ತಲೇ ಇದ್ದಾರೆ. ಬ್ರಹ್ಮಾನಂದಂ ಈಗ ಪ್ರತಿ ಚಿತ್ರಕ್ಕೆ 1 ಕೋಟಿಯಿಂದ 2.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ಹಾಸ್ಯನಟ:
68ನೇ ವಯಸ್ಸಿನಲ್ಲಿಯೂ ನಾಯಕನಾಗಿ ನಟಿಸದಿದ್ದರೂ ಬಹುಭಾಷಾ ಚಿತ್ರಗಳಲ್ಲಿ ಸಕ್ರಿಯರಾಗಿರುವ ಬ್ರಹ್ಮಾನಂದಂ ಅವರಿಗೆ ಆಸ್ತಿಗೇನು ಕಡಿಮೆ ಇಲ್ಲ. ಪ್ರಸ್ತುತ ಇವರು ಸುಮಾರು 490 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಹಾಸ್ಯನಟ. ನಟನೆಯ ಜೊತೆಗೆ, ಅವರು ಚಿತ್ರಕಲೆಯನ್ನೂ ಸಹ ಕರಗತ ಮಾಡಿಕೊಂಡಿದ್ದಾರೆ.
ಅವಕಾಶಗಳ ಕೊರತೆ...
ಸಿನಿಮಾರಂಗದಲ್ಲಿ ಅಳಿಸದ ಅಚ್ಚನ್ನು ಮೂಡಿಸಿದ ಹಾಸ್ಯನಟ ಬ್ರಹ್ಮಾನಂದ ಅವರ ಬೇಡಿಕೆ ಇತ್ತೀಚಿಗೆ ಕಡಿಮೆಯಾಗಿದೆ. ಹೊಸ ಹಾಸ್ಯನಟರ ಆಗಮನದಿಂದ ಬ್ರಹ್ಮಾನಂದಂ ಅವರ ಅವಕಾಶಗಳು ಕಡಿಮೆಯಾಗಿವೆ. ಬ್ರಹ್ಮಾನಂದಂ ಅವರು ಇಷ್ಟು ವರ್ಷಗಳಿಂದ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದರೂ ಸಹ ಇನ್ನೂ ಹೊಸ ಮತ್ತು ವಿಭಿನ್ನ ಪಾತ್ರಗಳನ್ನು ಮಾಡಲು ಬಯಸುತ್ತಾರೆ ಎಂದು ಹೇಳಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.