ನಿಯಮ ಮುರಿದು, ನಂಬಿಕೆಗಳನ್ನು ಹೊಡೆದು.. ವಿಚ್ಛೇದನ ನೀಡಿದ ಪತಿಗೆ ಜೀವನಾಂಶ ಕೊಟ್ಟ ಬಾಲಿವುಡ್‌ನ ಏಕೈಕ ಸ್ಟಾರ್‌ ನಟಿ ಈಕೆ!

Bollywood Actress: ಸಾಮಾನ್ಯವಾಗಿ ವಿಚ್ಛೇದನ ಪಡೆದ ನಂತರ ಪತಿಯೂ ಪತ್ನಿಗೆ ಜೀವನಾಂಶವನ್ನು ನೀಡುತ್ತಾರೆ, ಆದರೆ ಇಲ್ಲೊಬ್ಬ ನಟಿ ಈ ನಂಬಿಕೆಗಳನ್ನು ಹುಸಿ ಮಾಡಿ, ತನ್ನ ಪತಿಗೆ ವಿಚ್ಛೇದನ ನಂತರ ಜೀವನಾಂಶ ನೀಡಿದ್ದಾರೆ.  

Written by - Zee Kannada News Desk | Last Updated : Mar 31, 2025, 02:25 PM IST
  • ಶ್ವೇತಾ ತಿವಾರಿ ಅವರು ಹಲವು ವರ್ಷಗಳ ಕಾಲ ಚಿತ್ರರಂಗವನ್ನು ಆಳಿದ ಮತ್ತು ನಂತರ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ ಟಿವಿ ನಟಿಯರಲ್ಲಿ ಒಬ್ಬರು.
  • ಶ್ವೇತಾ ತನ್ನ 12 ನೇ ವಯಸ್ಸಿನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
  • ಕೌಟುಂಬಿಕ ಹಿಂಸಾಚಾರ ಮತ್ತು ರಾಜಾ ಅವರ ಕುಡಿತದ ಸಮಸ್ಯೆಯ ಆಧಾರದ ಮೇಲೆ ಶ್ವೇತಾ 2007 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ನಿಯಮ ಮುರಿದು, ನಂಬಿಕೆಗಳನ್ನು ಹೊಡೆದು.. ವಿಚ್ಛೇದನ ನೀಡಿದ ಪತಿಗೆ ಜೀವನಾಂಶ ಕೊಟ್ಟ ಬಾಲಿವುಡ್‌ನ ಏಕೈಕ ಸ್ಟಾರ್‌ ನಟಿ ಈಕೆ!

Bollywood Actress: ಶ್ವೇತಾ ತಿವಾರಿ ಅವರು ಹಲವು ವರ್ಷಗಳ ಕಾಲ ಚಿತ್ರರಂಗವನ್ನು ಆಳಿದ ಮತ್ತು ನಂತರ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ ಟಿವಿ ನಟಿಯರಲ್ಲಿ ಒಬ್ಬರು. ಅವರ ತೆರೆಯ ಮೇಲಿನ ಜೀವನ ಯಾವಾಗಲೂ ಉತ್ಸಾಹಭರಿತವಾಗಿದ್ದರೂ, ಅವರ ಕೌಟಿಂಬಿಕ ಜೀವನ ಅಷ್ಟೊಂದು ಸುಖಮಯವಾಗಿರಲಿಲ್ಲ. 

Add Zee News as a Preferred Source

ಶ್ವೇತಾ ತನ್ನ 12 ನೇ ವಯಸ್ಸಿನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು, ತನಗಿಂತ 5 ವರ್ಷ ದೊಡ್ಡವನಾದ ರಾಜಾ ಚೌಧರಿಯನ್ನು ಪ್ರೀತಿಸಿ, 18ನೇ ವಯಸ್ಸಿನಲ್ಲಿ ಮದುವೆಯಾಗಿದ್ದರು. ಶ್ವೇತಾ ತನ್ನ ಕುಟುಂಬದ ವಿರುದ್ಧ ಹೋಗಿ ರಾಜಾ ಜೊತೆ ನೆಲೆಸಿದರು ಮತ್ತು ಇಬ್ಬರೂ 1998 ರಲ್ಲಿ ವಿವಾಹವಾದರು, ಮದುವೆಯಾದ ಎರಡೇ ವರ್ಷಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಇವರು ಜನ್ಮ ಸಹ ಕೊಟ್ಟಿದ್ದರು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು, ಆದರೆ ಇದ್ದಕ್ಕಿದ್ದಂತೆ ಶ್ವೇತಾ ತಿವಾರಿ ದಾಂಪತ್ಯ ಜೀವನ ಅಲ್ಲೋಲ ಕಲ್ಲೋಲವಾಯಿತು. ಪತಿಯಿಂದ ಕಿರುಕುಳ, ಪ್ರತಿನಿತ್ಯ ಮನೆಯಲ್ಲಿ ಜಗಳಗಳು ಆರಂಭವಾದವು. 

ಪತಿಯಿಂದ ಕಿರುಕುಳ ಹೆಚ್ಚಾಗಲು ಆರಂಭಿಸಿತ್ತು, ಪ್ರೇಮ ವಿವಾಹವಾಗಿ ನಂತರ ವಿಚ್ಛೇದನ ದಾರಿ ಹಿಡಿದಿದಕ್ಕೆ ಶ್ವೇತಾ ಅವರ ತಾಯಿಯನ್ನು ಜನರು ನಿಂದಿಸಲು ಆರಂಭಿಸಿದ್ದರು. ವಿಚ್ಛೇದನ ಪಡೆಯಲು ಆಗಿನ ಸಮಯ ಕಷ್ಟವಾಗಿತ್ತು, ಅದಕ್ಕೆ ಕಾರಣ ಹಣದ ಸ್ವಾತಂತ್ರ ಅಲ್ಲ, ಬಹು ಕಾಲದ ಪ್ರೀತಿ ದೂರವಾಗಿ ಹೋಯಿತಲ್ಲ ಎಂಬ ನೋವು ಎಂದು ಶ್ವೇತಾ ತಿವಾರಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ನಟ ಮೋಹನ್‌ ಬಾಬು ಅವರಿಗೆ ಕಾಟ ಕೊಡ್ತಿದೆಯಾ ನಟಿ ಸೌಂದರ್ಯ ಆತ್ಮ! ಇಷ್ಟೆಲ್ಲ ತೊಂದರೆಗಳಿಗೆ ಕಾರಣ ಇದೇನಾ?

ತಂದೆ ಇಲ್ಲದೆ ಮಗಳನ್ನು ನಾನು ಬೆಳೆಸುವುದಿಲ್ಲ ಎಂದು ಶ್ವೇತಾ ತಿವಾರಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.  ಮಾನಸಿಕವಾಗಿ ಸಂತೋಷವಾಗಿದ್ದರೆ ಮಾತ್ರ ಸಂತೋಷದ ಕುಟುಂಬವನ್ನು ಹೊಂದಲು ಸಾಧ್ಯ ಎಂದು ನಂತರ ನನಗೆ ಅರಿವಾಯಿತು. ಇಬ್ಬರು ಒಟ್ಟಿಗೆ ಇರಲು ಸಾಧ್ಯವಾಗದಿದ್ದರೆ, ಬೇರೆಯಾಗುವುದು ಉತ್ತಮ ಎಂದು ಶ್ವೇತಾ ತಿವಾರಿ ಅವರಿಗೆ ಅರಿವಾಗಿತ್ತು.

ಕೌಟುಂಬಿಕ ಹಿಂಸಾಚಾರ ಮತ್ತು ರಾಜಾ ಅವರ ಕುಡಿತದ ಸಮಸ್ಯೆಯ ಆಧಾರದ ಮೇಲೆ ಶ್ವೇತಾ 2007 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನದ ನಂತರ ಮಗಳನ್ನು ನೀಡದೆ ಇದ್ದಿದ್ದಕ್ಕಾಗಿ ಶ್ವೇತಾ ತಿವಾರಿ ರಾಜ್‌ಗೆ ಜೀವನಾಂಶ ನೀಡಿದ ನಂತರವಷ್ಟೇ ತಮ್ಮ ಮಗಳನ್ನು ಸ್ವಾಧೀನಕ್ಕೆ ಪಡೆಯಲಾಯಿತು ಎಂದು ಶ್ವೇತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಶ್ವೇತಾ ಸಂದರ್ಶನವೊಂದರಲ್ಲಿ ಮಲಾಡ್‌ನಲ್ಲಿರುವ ರಾಜಾಗೆ 1 ಬಿಎಚ್‌ಕೆ ಫ್ಲಾಟ್ ನೀಡಿದ್ದೇನೆ ಮತ್ತು ಅವರು ತಮ್ಮ ಮಗಳ ಕಸ್ಟಡಿಗಾಗಿ ಈ ಫ್ಲಾಟ್ ಅನ್ನು ಬೇಡಿಕೆ ಇಟ್ಟಿದ್ದರು ಎಂದು ಹೇಳಿದರು. ರಾಜಾ ಚೌಧರಿಯಿಂದ ವಿಚ್ಛೇದನ ಪಡೆದ ನಂತರ, ಶ್ವೇತಾ ತಿವಾರಿ ತನ್ನ ಗೆಳೆಯ ಅಭಿನವ್ ಕೊಹ್ಲಿ ಜೊತೆ ಎರಡನೇ ಬಾರಿಗೆ ವಿವಾಹವಾದರು, ಆದರೆ ಈ ಮದುವೆಯೂ ಕೂಡ ಹೆಚ್ಚು ಕಾಲ ಉಳಿಯಲಿಲ್ಲ.

ಇದನ್ನೂ ಓದಿ: ಮೆಗಾ 157 ಸಿನಿಮಾಗೆ ವಿಕ್ಟರಿ ವೆಂಕಟೇಶ್ ಕ್ಲಾಪ್..! ಅನಿಲ್ ರವಿಪುಡಿ ಆಕ್ಷನ್ ಕಟ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News