Hebbuli Cut: 'ಹೆಬ್ಬುಲಿ ಕಟ್' ಚಿತ್ರದ ಎರಡನೇ ಸಿಂಗಲ್‌ 'ಬಡವ ರ‍್ಯಾಪ್' ಸಾಂಗ್ ಬಿಡುಗಡೆ

"ಹೆಬ್ಬುಲಿ ಕಟ್" ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜದ ಕೊರತೆಗಳನ್ನು ಪ್ರಶ್ನಿಸುವ, ಜಾಗೃತಿಯ ಕಿಡಿಯನ್ನು ಹೊತ್ತಿಸುವ ಒಂದು ಕಲಾತ್ಮಕ ಪ್ರಯತ್ನ.

Written by - Manjunath Naragund | Last Updated : Apr 12, 2025, 02:37 PM IST
  • "ಹೆಬ್ಬುಲಿ ಕಟ್" ಚಿತ್ರವು ಸಮಾಜದ ಕೊರತೆಗಳನ್ನು ಪ್ರಶ್ನಿಸುವ, ಜಾಗೃತಿಯ ಕಿಡಿಯನ್ನು ಹೊತ್ತಿಸುವ ಒಂದು ಕಲಾತ್ಮಕ ಪ್ರಯತ್ನ.
  • ಸತೀಶ್ ಪಿಕ್ಚರ್ ಹೌಸ್‌ನಡಿಯಲ್ಲಿ ಭೀಮರಾವ್, ಪ್ರಮೋದಿನಿ ಆರ್. ರುದ್ರಯ್ಯ, ಕರ್ಣ ಮಲಡಕಲ್, ಮತ್ತು ಬಿ. ಸುರೇಶ್‌ ಅವರ ನಿರ್ಮಾಣದಲ್ಲಿ ರೂಪುಗೊಂಡಿರುವ ಈ ಚಿತ್ರ,
  • ಮೌನೇಶ್ ನಟರಂಗ, ಅನನ್ಯ ನಿಹಾರಿಕಾ, ಮಹದೇವ್ ಹಡಪದ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಒಳಗೊಂಡಿದೆ
Hebbuli Cut: 'ಹೆಬ್ಬುಲಿ ಕಟ್' ಚಿತ್ರದ ಎರಡನೇ ಸಿಂಗಲ್‌ 'ಬಡವ ರ‍್ಯಾಪ್' ಸಾಂಗ್ ಬಿಡುಗಡೆ

Hebbuli Cut: ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಸಂದೇಶಗಳನ್ನು ಧ್ವನಿಸುವ ಹಾಡುಗಳು ಯಾವಾಗಲೂ ಜನಮಾನಸದಲ್ಲಿ ಪರಿಣಾಮಕಾರಿಯಾದ ಛಾಪನ್ನು ಮೂಡಿಸಿವೆ. ಈಗ, 'ಹೆಬ್ಬುಲಿ ಕಟ್' ಚಿತ್ರದ ಎರಡನೇ ಸಿಂಗಲ್‌ ಆಗಿ ಇಂದು ಬಿಡುಗಡೆಯಾದ 'ಬಡವ ರ‍್ಯಾಪ್' ಹಾಡು, ಬಡವರ ಆಕ್ರಂದನಕ್ಕೆ ಧ್ವನಿಯಾಗಿ, ಅಸಮಾನತೆಯ ವಿರುದ್ಧ ಹೋರಾಟದ ಕಿಚ್ಚನ್ನು ಹೊತ್ತಿಸುವ ಕರೆಯಾಗಿ ಎಲ್ಲರ ಗಮನ ಸೆಳೆದಿದೆ. ಭೀಮರಾವ್ ಪಿ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ, ಸಾಮಾಜಿಕ ಕಳಕಳಿಯನ್ನು ಕೇಂದ್ರವಾಗಿರಿಸಿಕೊಂಡು ರೂಪುಗೊಂಡಿದ್ದು, 'ಬಡವ ರ‍್ಯಾಪ್' ಈ ಸಂದೇಶವನ್ನು ತೀಕ್ಷ್ಣವಾಗಿ, ಆಕರ್ಷಕವಾಗಿ ಜನರ ಮನದಾಳಕ್ಕೆ ತಲುಪಿಸುವ ಒಂದು ಶಕ್ತಿಶಾಲಿ ಪ್ರಯತ್ನವಾಗಿದೆ.

Add Zee News as a Preferred Source

ಬಡವ ಬಡವ.. ದುಡಿವ ದುಡಿವ.. ಇದುವೇ ಜಗದ ನಿಯಮ

ಒಡಲೊಳಗೆ ನೋವ ಅದುಕಿ ನಗುತ ನಡೆವ..
 

ನೊಂದಿಗೆ ಬೆಂದಿದೆ ನನ್ನದೇ 

ಕಾದಿರೋ ಕುಲುಮೆ ಕೆಂಡದಿ

ಕರುಣೆ ಮರೆತು ಕಂಬನಿ ಒರೆಸೋ ಕೈಗಳೇ 

ಹಚ್ಚಿರೋ ಬೆಂಕಿಗೆ

ಈ ಸಾಲುಗಳನ್ನು ಕೇಳಿದಾಗ 'ಬಡವ ರ‍್ಯಾಪ್' ಹಾಡು ಕೇವಲ ಸಂಗೀತವಲ್ಲ; ಅದು ಶತಮಾನಗಳಿಂದ ಶೋಷಣೆಯ ಗಾಲಿಯಲ್ಲಿ ಸಿಲುಕಿರುವವರ ಒಡಲಾಳದ ಕೂಗು ಮತ್ತು ಅವರ ಹೋರಾಟದ ಛಲವನ್ನೂ ಪ್ರತಿಬಿಂಭಿಸುತ್ತದೆ. ಸಂಜು ವೈಬಿಎಚ್ ಅವರ ರಚನೆ ಮತ್ತು ಗಾಯನವು ಈ ಸಾಹಿತ್ಯಕ್ಕೆ ಜೀವ ತುಂಬಿದ್ದು, ಯುವ ಜನರ ಹೃದಯವನ್ನು ಸ್ಪರ್ಶಿಸುವಂತೆ ಮಾಡಿದೆ. ವಿಜಯ್ ಕುಮಾರ್ ಜಿ. ಅವರ ಸಂಕಲ್ಪನೆಯಲ್ಲಿ ರೂಪಗೊಂಡ ಈ ರ‍್ಯಾಪ್‌ಗೆ, ನವನೀತ್ ಶಾಮ್ ಅವರ ಸಂಗೀತ ಸಂಯೋಜನೆ ಹೊಸ ಲಯದ ರಾಗವನ್ನು ಸೇರಿಸಿದೆ. ಸಿದ್ಧಾರ್ಥ ಬೆಳ್ಮಣ್ಣ ಅವರ ಹಿನ್ನೆಲೆ ಧ್ವನಿ, ಪ್ರೇರಣಾ ವಿ. ಅವರ ವಯಲಿನ್, ಗಿರಿಧರ್ ದಿವಾನ್ ಅವರ ರೆಕಾರ್ಡಿಂಗ್, ಮತ್ತು ಸಂಜಯ್ ಕುಮಾರ್ ಅವರ ಮಿಕ್ಸಿಂಗ್‌ನಿಂದ ಈ ಹಾಡು ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿದೆ.

ಕೃಷ್ಣ ಬಾಲಗಂ ಅವರ ಛಾಯಾಗ್ರಹಣವು ಸಾಮಾಜಿಕ ಅಸಮಾನತೆಯ ಕಠೋರ ವಾಸ್ತವವನ್ನು ಸೂಕ್ಷ್ಮವಾಗಿ ಚಿತ್ರಿಸಿದರೆ, ಅನುರಂಜನ್ ಎಚ್‌ಆರ್‌ ಅವರ ಸಂಕಲನವು ಕಥನಕ್ಕೆ ತೀವ್ರತೆಯನ್ನು ತಂದಿದೆ. ಟಾಮ್ ಸಿ. ಜೋಸ್‌ ಅವರ ಕಲರ್ ಗ್ರೇಡಿಂಗ್‌ನಿಂದ ವಿಡಿಯೋಗೆ ಒಂದು ಆಕರ್ಷಕ ದೃಶ್ಯವನ್ನು ಕಟ್ಟಲು ಸಹಕಾರಿಯಾಗಿದೆ. ಈ ಎಲ್ಲ ಅಂಶಗಳು ಒಟ್ಟಾಗಿ 'ಬಡವ ರ‍್ಯಾಪ್' ಸಾಂಗ್ ನ್ನು ಮನೋಜ್ಞ ಧೃಶ್ಯ ಕಥನವನ್ನಾಗಿಸುವಲ್ಲಿ ಯಶಸ್ವಿಯಾಗಿವೆ.

'ಹೆಬ್ಬುಲಿ ಕಟ್': ಒಂದು ಸಾಮಾಜಿಕ ಚಿಂತನೆಯ ಕನ್ನಡಿ

"ಹೆಬ್ಬುಲಿ ಕಟ್" ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜದ ಕೊರತೆಗಳನ್ನು ಪ್ರಶ್ನಿಸುವ, ಜಾಗೃತಿಯ ಕಿಡಿಯನ್ನು ಹೊತ್ತಿಸುವ ಒಂದು ಕಲಾತ್ಮಕ ಪ್ರಯತ್ನ. ಸತೀಶ್ ಪಿಕ್ಚರ್ ಹೌಸ್‌ನಡಿಯಲ್ಲಿ ಭೀಮರಾವ್, ಪ್ರಮೋದಿನಿ ಆರ್. ರುದ್ರಯ್ಯ, ಕರ್ಣ ಮಲಡಕಲ್, ಮತ್ತು ಬಿ. ಸುರೇಶ್‌ ಅವರ ನಿರ್ಮಾಣದಲ್ಲಿ ರೂಪುಗೊಂಡಿರುವ ಈ ಚಿತ್ರ, ಮೌನೇಶ್ ನಟರಂಗ, ಅನನ್ಯ ನಿಹಾರಿಕಾ, ಮಹದೇವ್ ಹಡಪದ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಒಳಗೊಂಡಿದೆ. ದೀಪಕ್ ಯರಗೇರ ಅವರ ಛಾಯಾಗ್ರಹಣ, ಆಶೆ ಪ್ರಜ್ವಲ್‌ ಅವರ ಸಂಕಲನ, ಮತ್ತು ಸ್ವಸ್ತಿಕ್ ಕರೇಕಾಡ್‌ ಅವರ ಸೌಂಡ್ ಡಿಸೈನ್‌ನಿಂದ ಚಿತ್ರಕ್ಕೆ ಉತ್ತಮ ತಾಂತ್ರಿಕ ಗುಣಮಟ್ಟ ಸಿಕ್ಕಿದೆ.ಅನಂತ ಶಾಂಡ್ರೇಯ ಮತ್ತು ಭೀಮರಾವ್‌ರವರ ಕಥೆ ಮತ್ತು  ಚಿತ್ರಕಥೆಯು ಚಿತ್ರಕ್ಕೆ ಆಳವಾದ ಸಾಮಾಜಿಕ ಆಯಾಮವನ್ನು ನೀಡಿದೆ.

ಯುವ ಶಕ್ತಿಯ ಹೋರಾಟದ ಧ್ವನಿ

Haadio ಯೂಟ್ಯೂಬ್ ಚಾನೆಲ್‌ನಲ್ಲಿ ಸಾರಾ ಫಿಲ್ಮ್ಸ್‌ನಡಿಯಲ್ಲಿ, ಹಾಡಿಯೋ ಮ್ಯೂಸಿಕ್ ಲೇಬಲ್‌ನಿಂದ ಬಿಡುಗಡೆಯಾದ ಈ ರ‍್ಯಾಪ್ ಸಾಂಗ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಈ ರ‍್ಯಾಪ್‌ನ ಲಯ, ಸಾಹಿತ್ಯ, ಮತ್ತು ದೃಶ್ಯಗಳು ಒಟ್ಟಿಗೆ ಸೇರಿ ಇದು ಕೇವಲ ರಂಜಿಸುವ ಹಾಡಾಗದೆ; ಅದು ಶೋಷಣೆ, ಅನ್ಯಾಯ, ಮತ್ತು ಅಸಮಾನತೆಯ ವಿರುದ್ಧ ಧ್ವನಿಯಾಗಿ ರೂಪುಗೊಂಡಿದೆ. ವಿಶೇಷವಾಗಿ ಯುವ ಜನರಿಗೆ ಈ ಹಾಡು ಒಂದು ಪ್ರೇರಣೆಯ ಕಿಡಿಯಾಗಿದ್ದು, ಹೋರಾಟದ ಛಲವನ್ನು ತುಂಬುತ್ತದೆ.Haadio ಯೂಟ್ಯೂಬ್‌ನಲ್ಲಿ ಇಂದು ಬಿಡುಗಡೆಯಾಗಿರುವ ಈಗಲೇ ಈ ಹಾಡನ್ನು ಆಲಿಸಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

 

 

 

About the Author

Trending News