Tamil actress Maya: ನಿರ್ದೇಶಕರು ಸಿನಿಮಾದಲ್ಲಿ ಎಲ್ಲಾ ರೀತಿಯ ಭಾವನೆಗಳನ್ನು ತೋರಿಸುತ್ತಾರೆ. ಕಥೆಯನ್ನು ಮುಂದಕ್ಕೆ ಸಾಗಿಸಲು ಕೆಲವೊಮ್ಮೆ ಒಂದಿಷ್ಟು ಭಯಾನಕ ದೃಶ್ಯಗಳು, ಅತ್ಯಾಚಾರ ದೃಶ್ಯಗಳನ್ನು ಸೇರಿಸಬೇಕಾಗುತ್ತದೆ. ಅತ್ಯಾಚಾರದ ದೃಶ್ಯಗಳಲ್ಲಿ ಸಾಮಾನ್ಯವಾಗಿ ವೈಯಕ್ತಿಕ ಅನ್ಯೋನ್ಯತೆ ಇರುವುದಿಲ್ಲ. ಏಕೆಂದರೆ ಶೂಟಿಂಗ್ ಸಮಯದಲ್ಲಿ ಸುತ್ತಲೂ ಬಹಳಷ್ಟು ಸಿಬ್ಬಂದಿ ಇರುತ್ತಾರೆ.
ಆದರೆ ಕೆಲವು ನಟರು ಈ ಪರಿಸ್ಥಿತಿಯ ಲಾಭ ಪಡೆದು ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ವಿವಿಧ ಸಿನಿ ಉದ್ಯಮಗಳಲ್ಲಿ ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. ಇತ್ತೀಚೆಗೆ ತಮಿಳು ನಟಿ ಮಾಯಾ ಅವರು ಮಲಯಾಳಂನ ಮಾಜಿ ನಟನ ಬಗ್ಗೆ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಒಂದು ಸಂದರ್ಶನದಲ್ಲಿ, ಅತ್ಯಾಚಾರದ ದೃಶ್ಯವೊಂದರಲ್ಲಿ ಅವನು ತನ್ನ ಉಗುರುಗಳಿಂದ ಪರಚಿ ಗಾಯಗೊಳಿಸಿದ್ದ ಎಂದು ಹೇಳಿದ್ದರು.
ಮಲಯಾಳಂ ಚಿತ್ರರಂಗದಲ್ಲಿ ಬಾಲನ್ ಕೆ ನಾಯರ್ ಎಂಬ ನಟ ಇದ್ದರು. ಬಾಲನ್ ಕೆ ನಾಯರ್ ಲೆಜೆಂಡರಿ ನಟ. ಈ ಹಿರಿಯ ನಟನಿಗೆ ಹೆಚ್ಚಾಗಿ ಖಳನಾಯಕ ಪಾತ್ರಗಳನ್ನು ನೀಡಲಾಗುತ್ತಿತ್ತು. ಅವರು ಖಳನಾಯಕನ ಪಾತ್ರ ಮಾಡುವ ಸಿನಿಮಾದಲ್ಲಿ ಒಂದಾದರೂ ಅತ್ಯಾಚಾರದ ದೃಶ್ಯ ಇದ್ದೇ ಇರುತ್ತಿತ್ತು. ತಮಿಳು ನಟಿ ಮಾಯಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಾಲನ್ ಕೆ ನಾಯರ್ ಇಂತಹ ದೃಶ್ಯಗಳ ಸಮಯದಲ್ಲಿ ಉದ್ರೇಕಗೊಳ್ಳುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ: ಭಿಕ್ಷೆ ಬೇಡುವಂತಹ ಸ್ಥಿತಿ ಬಂದಿದೆ: ಕರಾಳ ಸತ್ಯ ಬಿಚ್ಚಿಟ್ಟ ಸ್ಟಾರ್ ನಟಿ
ಮೂರ್ಖಾನ್ (1980) ಚಿತ್ರ ಮಾಡುವಾಗ ಬಾಲನ್ ಕೆ. ನಾಯರ್ ಅವರೊಂದಿಗೆ ನಟಿ ಮಾಯಾ ಅತ್ಯಾಚಾರ ದೃಶ್ಯದಲ್ಲಿ ನಟಿಸಬೇಕಾಯಿತು. ಸಂದರ್ಶನವೊಂದರಲ್ಲಿ, ಅವರು ಆ ಚಿತ್ರದಲ್ಲಿನ ತಮ್ಮ ಅನುಭವವನ್ನು ನೆನಪಿಸಿಕೊಂಡರು.
ಬಾಲನ್ ಕೆ ನಾಯರ್ ಯಾವುದೇ ದೃಶ್ಯ ಮಾಡಿದರೂ, ಅವರು ಅದರಲ್ಲಿ ಮೈ ಮರೆಯುತ್ತಿದ್ದರು. ಎಲ್ಲಾ ಅತ್ಯಾಚಾರ ದೃಶ್ಯಗಳು ನಿಜವೆಂಬಂತೆಯೇ ನಟಿಸುತ್ತಿದ್ದರು. ನಿರ್ದೇಶಕರು ಆಕ್ಷನ್ ಹೇಳಿದ ತಕ್ಷಣ, ಅವರು ಪಾತ್ರಕ್ಕೆ ಧುಮುಕಿ ಬಿಡುತ್ತಿದ್ದರು. ನಾನು ಅವರ ಜೊತೆ ಒಂದು ದೃಶ್ಯ ಮಾಡಬೇಕಿತ್ತು. ಕ್ಯಾಮೆರಾ ತಿರುಗಲು ಪ್ರಾರಂಭಿಸಿದ ತಕ್ಷಣ, ಅವರು ಇದ್ದಕ್ಕಿದ್ದಂತೆ ನನ್ನ ಮೇಲೆ ದಾಳಿ ಮಾಡಿದರು. ನಿಜವಾಗಿಯೂ ನನ್ನ ಮೇಲೆ ಅತ್ಯಾಚಾರ ಮಾಡಲು ಬರುತ್ತಿದ್ದಾರೆಂಬಂತೆ ನನಗೆ ಭಯವಾಯಿತು ಎಂದು ನಟಿ ಮಾಯಾ ಹೇಳಿದ್ದಾರೆ.
ಆ ದೃಶ್ಯದಲ್ಲಿ ಬಾಲನ್ ಅವರ ಉಗುರುಗಳಿಂದ ನನ್ನ ಬೆನ್ನಿಗೆ ಪರಚಿದ್ದರು. ಅವರು ನನ್ನ ಬೆನ್ನನ್ನು ಬಲವಾಗಿ ಪರಿಚಿದ್ದರಿಂದ ಗಾಯವಾಯಿತು. ಆ ದೃಶ್ಯ ನನಗೆ ದೈಹಿಕವಾಗಿ ನೋವುಂಟು ಮಾಡಿತು. ನಿರ್ದೇಶಕರು ಬಾಲನ್‌ಗೆ ಇಷ್ಟೊಂದು ಸ್ವಾತಂತ್ರ್ಯವನ್ನು ಏಕೆ ನೀಡುತ್ತಿದ್ದಾರೆಂದು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿತ್ತು. ಆದರೆ, ಅದು ಅವರ ನಟನಾ ಶೈಲಿ ಎಂದು ತಿಳಿದುಕೊಂಡು, ನಾನು ಮೌನವಾಗಿದ್ದೆ ಎಂದು ಮಾಯಾ ವಿವರಿಸಿದ್ದಾರೆ.
ತೆರೆಯಲ್ಲಿ ಖಳನಾಯಕ ಪಾತ್ರಗಳನ್ನು ನಿರ್ವಹಿಸುವ ಬಾಲನ್ ನಾಯರ್ ನಿಜ ಜೀವನದಲ್ಲಿ ಒಬ್ಬ ಸಂಭಾವಿತ ವ್ಯಕ್ತಿ. ಕುಟುಂಬದ ಒಬ್ಬ ಸದಸ್ಯನಂತೆ ತನ್ನ ಎಲ್ಲಾ ಸಹೋದ್ಯೋಗಿಗಳೊಂದಿಗೆ ಹೊಂದಿಕೊಳ್ಳುತ್ತಾರೆ. ಯಾರನ್ನೂ ಕೆಟ್ಟ ಉದ್ದೇಶದಿಂದ ಮಾತನಾಡಿಸುವುದಿಲ್ಲ ಎಂದು ನಟಿ ಮಾಯಾ ಹೇಳಿದ್ದಾರೆ.
ಇದನ್ನೂ ಓದಿ: ಟಿಬೆಟ್ ನಿಂದ ಬಾಲಿವುಡ್ ವರೆಗೆ...ಸಿನಿಮಾಗೋಸ್ಕರ ಮತಾಂತರಗೊಂಡು ಬಾಲಿವುಡ್ ನಲ್ಲಿ ಮಿಂಚಿದ ನಟಿ..!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









