)
Silk Smitha Life Story: ಬೋಲ್ಡ್ ಪಾತ್ರಗಳ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಫೇಮಸ್ ಆಗಿದ್ದ ನಟಿ ಸಿಲ್ಕ್ ಸ್ಮಿತಾ. ಬಟ್ಟಲು ಕಣ್ಣಿನ ಬೆಡಗಿಯ ಕಣ್ಣೋಟಕ್ಕೆ ಮರುಳಾದವರು ಅದೆಷ್ಟೋ ಜನ. ಐಟಂ ಡ್ಯಾನ್ಸರ್ ಪಾತ್ರಗಳಲ್ಲಿ ಮಿಂಚಿ ಜನರ ಹೃದಯ ಕದ್ದ ಮೋಹಕ ನಟಿ.
ಸಿಕ್ಕಾಪಟ್ಟೆ ನೇಮ್ ಫೇಮ್ ಇದ್ದರೂ ನಟಿ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡರು. ನಟಿ ಸಿಲ್ಕ್ ಸ್ಮಿತಾಳ ದುರಂತ ಬದುಕಿನ ಆ ಕರಾಳ ಮುಖದ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ...
ಸಿಲ್ಕ್ ಸ್ಮಿತಾ 1980 ರ ಟಾಪ್ ನಟಿ. ದಕ್ಷಿಣ ಭಾರತದಲ್ಲೇ ಬಹುಬೇಡಿಕೆ ಹೊಂದಿದ್ದ ಸುಂದರಿ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಐಟಂ ಡಾನ್ಸ್ ಮೂಲಕವೇ ಸ್ಟಾರ್ಡಮ್ ಗಿಟ್ಟಿಸಿಕೊಂಡು ಟಾಪ್ ನಟಿ ಆಗಿದ್ದರು.
ನಿರ್ಮಾಪಕರಿಗೆ ಸಿಲ್ಕ್ ಸ್ಮಿತಾ ಸದಾ ಕಾಲ ಹಾಟ್ ಫೆವರೇಟ್. ಕೆಲಸದಲ್ಲಿನ ಅವರ ನಿಷ್ಠೆಯೇ ಇದಕ್ಕೆ ಕಾರಣವಾಗಿತ್ತು. ಸಿಲ್ಕ್ ಸ್ಮಿತಾ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ರೆ ಸಾಕು ಆ ಚಿತ್ರ ಸೂಪರ್ ಹಿಟ್ ಆಗುವ ಕಾಲ ಅದಾಗಿತ್ತು.
ಸಿನಿಮಾದಲ್ಲಿ ಯಶಸ್ವಿ ಆದರೂ ಸ್ಮಿತಾಳ ಮನಸ್ಸು ಮಾತ್ರ ಸದಾ ಸ್ನೇಹಕ್ಕೆ ಹಾತೊರೆಯುತ್ತಿತ್ತು. ಇದನ್ನೇ ಅನೇಕರು ಮಿಸ್ ಯೂಸ್ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ.
ಸಿಲ್ಕ್ ಸ್ಮಿತಾಳ ಸ್ನೇಹ ಮಾಡಿದ ಖ್ಯಾತ ನಟರೊಬ್ಬರು ಗೆಳೆತನದ ಗುರುತಿಗಾಗಿ ಅವಳ ಮೈ ಯನ್ನು ಸಿಗರೇಟ್ ನಿಂದ ಸುಡುತ್ತಿದ್ದರು ಎಂದು ಹೇಳಲಾಗುತ್ತೆ.
ಇಂಥದ್ದೊಂದು ಚಿತ್ರಹಿಂಸೆಗೆ ಒಳಗಾಗಿದ್ದರು ಚೆಂದುಳ್ಳಿ ಚೆಲುವೆ ಸಿಲ್ಕ್ ಸ್ಮಿತಾ ಕಾಲ ಕ್ರಮೇಣ ಅವಕಾಶ ಕಳೆದುಕೊಂಡರು. ಬಳಿಕ ಸಿನಿಮಾ ನಿರ್ಮಿಸಿದರೂ ಅದು ಕೂಡ ಕೈ ಹಿಡಿಯಲಿಲ್ಲ. ಯಶಸ್ಸಿನ ಶಿಖರವೇರಿದ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕಿಗೆ ಅಂತ್ಯ ಹಾಡಿದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.