Unheard Love Story: ಐಟಿ ದಾಳಿ ವೇಳೆ ನೆರವಾಗಿದ್ದ 3 ಮಕ್ಕಳ ತಂದೆಯನ್ನೇ ಮದುವೆಯಾದ ಕನ್ನಡದ ಈ ಖ್ಯಾತ ನಟಿ..!

ಸಿನಿಮಾ ಜಗತ್ತಿನಲ್ಲಿ ಖ್ಯಾತಿಯನ್ನು ಪಡೆದಿದ್ದರೂ ಜಯಪ್ರದಾ ಅವರ ವೈಯಕ್ತಿಕ ಜೀವನವು ಬಹಳ ವಿವಾದಾತ್ಮಕವಾಗಿತ್ತು. ಒಂದೆಡೆ ವೃತ್ತಿ ಜೀವನದಲ್ಲಿ ಉತ್ತುಂಗವನ್ನು ತಲುಪುತ್ತಿದ್ದಾಗ ಆಗ ಆದಾಯ ತೆರಿಗೆ ಇಲಾಖೆಯಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದರು.

Written by - Manjunath Naragund | Last Updated : Mar 4, 2025, 04:54 PM IST
  • ಸಿನಿಮಾ ಜಗತ್ತಿನಲ್ಲಿ ಖ್ಯಾತಿಯನ್ನು ಪಡೆದಿದ್ದರೂ ಜಯಪ್ರದಾ ಅವರ ವೈಯಕ್ತಿಕ ಜೀವನವು ಬಹಳ ವಿವಾದಾತ್ಮಕವಾಗಿತ್ತು.
  • ಒಂದೆಡೆ ವೃತ್ತಿ ಜೀವನದಲ್ಲಿ ಉತ್ತುಂಗವನ್ನು ತಲುಪುತ್ತಿದ್ದಾಗ ಆಗ ಆದಾಯ ತೆರಿಗೆ ಇಲಾಖೆಯಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದರು.
  • ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದಂತಹ ವ್ಯಕ್ತಿಯೇ ನಿರ್ಮಾಪಕ ಶ್ರೀಕಾಂತ್ ನಹತಾ.
Unheard Love Story: ಐಟಿ ದಾಳಿ ವೇಳೆ ನೆರವಾಗಿದ್ದ 3 ಮಕ್ಕಳ ತಂದೆಯನ್ನೇ ಮದುವೆಯಾದ ಕನ್ನಡದ ಈ ಖ್ಯಾತ ನಟಿ..!

ಶಾಲೆಯಲ್ಲಿ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಆ ಬಾಲಕಿ ಮುಂದೊಂದು ದಿನ ಬಾಲಿವುಡ್‌ನ ದೊಡ್ಡ ನಟಿಯಾಗುತ್ತಾಳೆಂದು ಯಾರಿಗೆ ತಾನೇ ಗೊತ್ತಿತ್ತು ಹೇಳಿ..?  ಹೌದು, ಇವರು ಬೇರೆ ಯಾರೂ ಅಲ್ಲ, 70, 80 ಮತ್ತು 90 ರ ದಶಕದ ಯಶಸ್ವಿ ನಟಿ ಜಯಪ್ರದಾ.

Add Zee News as a Preferred Source

ಸಿನಿಮಾ ಜಗತ್ತಿನಲ್ಲಿ ಖ್ಯಾತಿಯನ್ನು ಪಡೆದಿದ್ದರೂ ಜಯಪ್ರದಾ ಅವರ ವೈಯಕ್ತಿಕ ಜೀವನವು ಬಹಳ ವಿವಾದಾತ್ಮಕವಾಗಿತ್ತು. ಒಂದೆಡೆ ವೃತ್ತಿ ಜೀವನದಲ್ಲಿ ಉತ್ತುಂಗವನ್ನು ತಲುಪುತ್ತಿದ್ದಾಗ ಆಗ ಆದಾಯ ತೆರಿಗೆ ಇಲಾಖೆಯಿಂದಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದರು.ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದಂತಹ ವ್ಯಕ್ತಿಯೇ ನಿರ್ಮಾಪಕ ಶ್ರೀಕಾಂತ್ ನಹತಾ.

ಇದನ್ನೂ ಓದಿ:ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಈ 3 ಪಾನೀಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ..!

ಹೌದು, ಆದಾಯ ತೆರಿಗೆಯ ಕಾನೂನು ಹೋರಾಟದಲ್ಲಿ ಜಯಪ್ರದಾ ಅವರಿಗೆ ಸಾಕಷ್ಟು ಸಹಾಯವನ್ನು ಮಾಡಿದರು. ಈ ವಿಚಾರದಲ್ಲಿ ಇಬ್ಬರೂ ಹತ್ತಿರವಾದಂತೆ ಭಾವನಾತ್ಮಕವಾಗಿ ಒಂದಾದರು. ಅಷ್ಟೇ ಅಲ್ಲದೆ ನಹತಾ ಅವರು ಮದುವೆಯಾಗಿ ಮೂವರು ಮಕ್ಕಳಿದ್ದರೂ ಕೂಡ ಜಯಪ್ರದಾ ಅವರನ್ನು ಇಷ್ಟಪಟ್ಟು ಮದುವೆಯಾದರು.ಶೀಘ್ರದಲ್ಲೇ ಅವರ ಸಂಬಂಧದ ಬಗ್ಗೆ ಗಾಸಿಪ್ ಹರಡಿತು. ಆದರೆ ಜಯಾ ಅಥವಾ ಶ್ರೀಕಾಂತ್ ಸಂಬಂಧದಿಂದ ಹಿಂದೆ ಸರಿಯಲು ನಿರ್ಧರಿಸಲಿಲ್ಲ. ಆದರೆ, ಒಂದು ಕಾಲದಲ್ಲಿ ಹುಚ್ಚು ಪ್ರೀತಿಯಲ್ಲಿ ಸಿಲುಕಿದ್ದ ಜಯಾ ಮತ್ತು ಶ್ರೀಕಾಂತ್ ಕಾಲಾಂತರದಲ್ಲಿ ಅವರ ಪ್ರೇಮಕಥೆಯು ದುರಂತದ ಅಂತ್ಯವನ್ನು ಕಂಡಿತು.

ಇದನ್ನೂ ಓದಿ: ಸ್ಟಾರ್ ಕ್ರಿಕೆಟಿಗನನ್ನು ಪ್ರೀತಿಸಿದ್ದ ಗಾಯಕಿ ಲತಾ ಮಂಗೇಶ್ಕರ್ ಕೊನೆಗೂ ಮದುವೆಯಾಗದೇ ಉಳಿದಿದ್ದೇಕೆ?

ಮದುವೆಯಾದ ನಂತರ ಜಯಪ್ರದಾ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿದರು.ಆದರೆ ಅವರಿಗೆ ಆಗ ಅಷ್ಟಾಗಿ ಅವಕಾಶಗಳು ಸಿಗಲಿಲ್ಲ.ಹೀಗಾಗಿ ಅವರು ವೃತ್ತಿ ಜೀವನದಲ್ಲಿಯೂ ಕೂಡ ವೈಪಲ್ಯವನ್ನು ಅನುಭವಿಸಿದರು.ಇದಷ್ಟೇ ಅಲ್ಲದೆ ನಹತಾ ಆಗಲೇ ಮದುವೆಯಾಗಿದ್ದರಿಂದಾಗಿ ಮೊದಲ ಪತ್ನಿಯ ಕಾರಣದಿಂದಾಗಿ ಜಯಪ್ರದಾ  ಶ್ರೀಕಾಂತ್ ಅವರ ಮನೆಯಲ್ಲಿ ವಾಸಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಅವರ ವೈವಾಹಿಕ ಜೀವನವೂ ಕೊನೆಗೊಂಡಿತು. ಹೀಗಾಗಿ ಅವರು ಜೀವನಪೂರ್ತಿ ಏಕಾಂಗಿಯಾಗಿ ಉಳಿಯುವಂತಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

About the Author

Trending News