ಕರ್ನಾಟಕದ ಈ ಹಳ್ಳಿಗೆ ಬಾಲಿವುಡ್ ಅಂದ್ರೆನೇ ಗೊತ್ತಿಲ್ಲ,ಆದರೆ ಅಲಿಯಾ ಭಟ್ ಗೊತ್ತು!

ಹೌದು,ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ.ಕರ್ನಾಟಕದ ಈ ಗ್ರಾಮದ ನಿವಾಸಿಗಳಿಗೆ ಬಾಲಿವುಡ್ ಅಂದ್ರೆ ತಿಳಿಯುವುದಿಲ್ಲ, ಆದರೆ ಅದೇ ನೀವು ಬಾಲಿವುಡ್ ನಟಿ ಅಲಿಯಾ ಭಟ್ ಎಂದರೆ ಈ ಗ್ರಾಮದ ಎಲ್ಲ ನಿವಾಸಿಗಳಿಗೂ ಗೊತ್ತು.

Updated: Aug 31, 2018 , 01:03 PM IST
ಕರ್ನಾಟಕದ ಈ ಹಳ್ಳಿಗೆ ಬಾಲಿವುಡ್ ಅಂದ್ರೆನೇ ಗೊತ್ತಿಲ್ಲ,ಆದರೆ ಅಲಿಯಾ ಭಟ್ ಗೊತ್ತು!

ಬೆಂಗಳೂರು: ಹೌದು,ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ.ಕರ್ನಾಟಕದ ಈ ಗ್ರಾಮದ ನಿವಾಸಿಗಳಿಗೆ ಬಾಲಿವುಡ್ ಅಂದ್ರೆ ತಿಳಿಯುವುದಿಲ್ಲ, ಆದರೆ ಅದೇ ನೀವು ಬಾಲಿವುಡ್ ನಟಿ ಅಲಿಯಾ ಭಟ್ ಎಂದರೆ ಈ ಗ್ರಾಮದ ಎಲ್ಲ ನಿವಾಸಿಗಳಿಗೂ ಗೊತ್ತು.

ಬಾಲಿವುಡ್ ನಟಿ ಅಲಿಯಾ ಭಟ್ ಅವರ ಮಿ ವಾರ್ಡೋಬ ಇಸ್ ಸು ವಾರ್ಡೋಬ ನ ಪ್ರಚಾರದ  ಭಾಗವಾಗಿ ಅವರ ವಸ್ತುಗಳನ್ನು ಹರಾಜಿಗಿಟ್ಟು ಅದರಿಂದ ಬಂದಂತಹ ಹಣದ ಮೂಲಕ ಮಂಡ್ಯ ಜಿಲ್ಲೆಯ ಕಿಕ್ಕೆರಿ ಹಳ್ಳಿಗೆ ಸೋಲಾರ್ ದ್ವೀಪವನ್ನು ಅಳವಡಿಸಿದ ಕಾರಣಕ್ಕಾಗಿ ಎಲ್ಲರು ಹೆಮ್ಮೆಯಿಂದ ಸ್ಮರಿಸುತ್ತಾರೆ. 

ಪ್ರಾರಂಭದಲ್ಲಿ ಆರೋಹಾ ಎನ್ ಜಿ ಓ ಈ ಕಾರ್ಯವನ್ನು ಕೈಗೊಂಡಿತು. ಆದರೆ ನಂತರ ಈ ಕಾರ್ಯಕ್ಕೆ  ನಟಿ ಅಲಿಯಾ ಭಟ್ ಸಹಿತ ಕೈಜೋಡಿಸಿದರು.ಮಂಡ್ಯದ ಈ ಕಿಕ್ಕೇರಿ ಮೂಲತಃವಾಗಿ ಸ್ಥಳೀಯ ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 40 ಕುಟುಂಬಗಳ ವಾಸುವಿಕೆಯಿಂದ ಬೆಳೆದುಬಂದಿದೆ.

ನಟಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ  ಅಲ್ಲಿನ ಗ್ರಾಮಸ್ಥರೊಬ್ಬರು  ಹೇಳುವಂತೆ " ನಮಗೆ ಅಲಿಯಾ ಭಟ್ ಬಗ್ಗೆ ಗೊತ್ತಿಲ್ಲ,ನಾವು ಅವರ ಸಿನಿಮಾವನ್ನು ನೋಡಿಲ್ಲ,ನಮಗೆ ನೋಡಲು ಇಲ್ಲಿ ಟಿವಿ ಸಹಿತ ಇಲ್ಲ.ಆದರೆ ಅಂತಹ ದೊಡ್ಡ ವ್ಯಕ್ತಿಯೊಬ್ಬರು ವ್ಯಯಕ್ತಿಕವಾಗಿ ಸಹಾಯ ಮಾಡುತ್ತಿರುವುದನ್ನು ನೋಡಿದರೆ  ನಿಜಕ್ಕೂ ಸಂತಸವಾಗುತ್ತದೆ" ಎಂದು ತಿಳಿಸಿದ್ದರು.