)
Death date well mystery : ನಮ್ಮ ಸುತ್ತಮುತ್ತಲಿರುವ ಅನೇಕ ದೇಗುಲಗಳು, ಸ್ಥಳಗಳು ಕೆಲವೊಂದಿಷ್ಟು ರಹಸ್ಯಗಳನ್ನು ಒಳಗೊಂಡಿರುತ್ತವೆ. ಆ ವಿಚಾರ ನಮಗೆ ತಿಳಿಯುವವರೆ ನಮಗೆ ಅವು ಸಾಮಾನ್ಯವಾಗಿ ಕಾಣುತ್ತವೆ. ಅವುಗಳ ಸತ್ಯದರ್ಶನವಾದಾಗ ಅಚ್ಚರಿಯಾಗುತ್ತದೆ. ಅದರಂತೆ ವಾರಣಾಸಿಯಲ್ಲಿರುವ ಈ ನಿಗೂಢ ಸ್ಥಳವೂ ಒಂದು.
ಈ ಬಾವಿಯ ಹೆಸರು ಚಂದ್ರಕೂಪ್ ವಿಹಿರ್. ಈ ನಿಗೂಢ ಬಾವಿ ಸಿದ್ಧೇಶ್ವರಿ ದೇವಾಲಯದ ಒಳಗೆ ಇದೆ. ಈ ಬಾವಿ ನೀವು ಯಾವಾಗ ಸಾಯುತ್ತೀರಿ ಎಂಬ ಭವಿಷ್ಯವನ್ನು ತಿಳಿಸುತ್ತದೆ ಎಂಬ ನಂಬಿಕೆ ಇದೆ. ಈ ಬಾವಿಗೆ ಸಂಬಂಧಿಸಿದ ರಹಸ್ಯವೇನು? ಇದರ ಹಿನ್ನೆಲೆ ಎನು..? ಬನ್ನಿ ನೋಡೋಣ..
ಈ ನಿಗೂಢ ಬಾವಿಯನ್ನು ಸಾವಿನ ಸಂಕೇತವೆಂದು ನಂಬಲಾಗಿದೆ. ಈ ಬಾವಿಯಲ್ಲಿ ಬಗ್ಗಿ ನೋಡಿದ ವ್ಯಕ್ತಿಗೆ ತನ್ನ ನೆರಳು ಕಾಣದಿದ್ದರೆ, ಅವನು ಮುಂದಿನ 6 ತಿಂಗಳೊಳಗೆ ಅವನು ಸಾಯುತ್ತಾನೆ ಎಂದು ನಂಬಲಾಗಿದೆ. ಈ ಬಾವಿಯ ನೀರಿನಲ್ಲಿ ನಿಮ್ಮ ನೆರಳು ಕಂಡುಬಂದರೆ, ಆ ವ್ಯಕ್ತಿಗೆ ಯಾವುದೇ ಅಪಾಯವಿಲ್ಲ ಎಂದು ನಂಬಲಾಗಿದೆ.
ಚಂದ್ರಕೂಪ ಬಾವಿ ಹಿನ್ನೆಲೆ : ಹಿಂದೂ ನಂಬಿಕೆಯ ಪ್ರಕಾರ, ವಾರಣಾಸಿಯಲ್ಲಿರುವ ಚಂದ್ರಕೂಪ ಬಾವಿಯನ್ನು ಚಂದ್ರದೇವನು ಸೃಷ್ಟಿಸಿದನು. ಚಂದ್ರದೇವನು ಹಲವು ವರ್ಷಗಳ ಕಾಲ ಶಿವನಿಗಾಗಿ ಕಠಿಣ ತಪಸ್ಸು ಮಾಡಿದನು. ಅವನ ತಪಸ್ಸಿಗೆ ಮೆಚ್ಚಿದ ಶಿವನು ಅವನಿಗೆ ನಿಗೂಢ ಶಕ್ತಿಗಳನ್ನು ದಯಪಾಲಿಸಿದನು. ಈ ಬಾವಿ ಅನೇಕ ಧರ್ಮಗಳ ಕೇಂದ್ರವಾಗಿದೆ. ಈ ಬಾವಿಯ ನೀರಿನಲ್ಲಿ ಒಬ್ಬರ ಪ್ರತಿಬಿಂಬವನ್ನು ನೋಡುವುದರಿಂದ ಮನಸ್ಸು, ದೇಹ ಮತ್ತು ಆತ್ಮ ಶುದ್ಧವಾಗುತ್ತದೆ ಎಂದು ನಂಬಲಾಗಿದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಚಂದ್ರಶ್ವೇರ ಲಿಂಗದ ದರ್ಶನ ಪಡೆಯಲು ಭಕ್ತರು ದೂರದೂರದಿಂದ ಬರುತ್ತಾರೆ.