the Kerala story : ʼದಿ ಕೇರಳ ಸ್ಟೋರಿʼ ಸಿನಿಮಾ ಟೀಸರ್ ಬಿಡುಗಡೆಯಾದಾಗಿನಿಂದಲೂ ವಿರೋಧವನ್ನು ಎದುರಿಸುತ್ತಾ ಬಂದಿದೆ. ಇದೀಗ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಅಲ್ಲದೆ, ಜನರಿಗೂ ಸಹ ಇಷ್ಟವಾಗಿದೆ. ಇನ್ನು ಈ ಚಿತ್ರದಲ್ಲಿ ನಟಿಸಿರುವ ನಟಿಯರಿಗೆ ಸಾಲು ಸಾಲು ಸಂದೇಶ ಮತ್ತು ಕೊಲೆ ಬೆದರಿಕೆ ಬರುತ್ತಿವೆ.
ಹೌದು.. ಕಳೆದ ಕೆಲವು ದಿನಗಳ ಹಿಂದೆ ಈ ಚಿತ್ರದ ಪ್ರಮುಖ ನಟಿ ಅದಾ ಶರ್ಮಾ ಅವರಿಗೆ ಕೊಲೆ ಬೆದರಿಕೆ ಬಂದಿತ್ತು. ಇದೀಗ ಈ ಸಿನಿಮಾದಲ್ಲಿ ಮುಸ್ಲಿಂ ಯುವತಿ ಪಾತ್ರ ನಿರ್ವಹಿಸಿದ್ದ ನಟಿ ಸೋನಿಯಾ ಬಾಲಾನಿಗೂ ಸಹ ಕೊಲೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಸೋನಿಯಾ, ಯಾರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಈ ಸಿನಿಮಾ ಹೊಂದಿಲ್ಲ. ನಾವು ಚಲನಚಿತ್ರವನ್ನು ಮಾಡಿದಾಗ, ಅದು ಸಂಪೂರ್ಣವಾಗಿ ಆ ಹುಡುಗಿಯರ ನೈಜ ಕಥೆಯಾಗಿದೆ ಎಂದು ಬಲಾನಿ ಹೇಳಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಬಿಕಿನಿ ತೊಟ್ಟು ಶಾಕ್ ಕೊಟ್ಟ ʼಪುಷ್ಟಾʼ ನಟಿ...! ಫೋಟೋಸ್ ನೋಡಿ
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಮುಸ್ಲಿಂ ಹುಡುಗಿ ಆಸಿಫಾ ಪಾತ್ರದಲ್ಲಿ ಸೋನಿಯಾ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತನ್ನ ರೂಮ್‌ಮೇಟ್‌ಗಳನ್ನು ಇಸ್ಲಾಂಗೆ ಪರಿವರ್ತಿಸುವ ಪಾತ್ರವನ್ನು ನಿಭಾಯಿಸಿದ್ದಾರೆ. ನಿರ್ದೇಶಕ ಸುದೀಪ್ತೋ ಏಳು ವರ್ಷಗಳಿಂದ ಈ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಅವರು ನಮಗೆ ಕೆಲವು ಚಿತ್ರಗಳು ಮತ್ತು ವೀಡಿಯೊಗಳನ್ನು ತೋರಿಸಿದರು ಮತ್ತು ನನಗೆ ತಕ್ಷಣ ಈ ಪಾತ್ರವನ್ನು ಮಾಡಬೇಕು ಅಂತ ಅನಿಸಿತು. ಏಕೆಂದರೆ ಇದು ತುಂಬಾ ದುಃಖದ ಕಥೆ. ನಾನು ಸ್ಕ್ರಿಪ್ಟ್ ಓದಿದಾಗ ಅದು ನನ್ನ ಮೇಲೆ ಪರಿಣಾಮ ಬೀರಿತು, ಎಂದು ತಮ್ಮ ಪಾತ್ರದ ಕುರಿತು ಸೋನಿಯಾ ತಿಳಿಸಿದ್ದಾರೆ.
ಇದು ಯಾವುದೇ ಸಮುದಾಯ ಅಥವಾ ಧರ್ಮದ ವಿರುದ್ಧದ ಉದ್ದೇಶಿತ ಸಿನಿಮಾವಲ್ಲ. ಇದೊಂದು ನಿಜವಾದ ಕಥೆ, ಆ ಯುವತಿಯರಿಗೆ ಆದ ನೋವನ್ನು ತಿಳಿದರೆ ಯಾರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ. ಐಸಿಸ್ ಮತ್ತು ಭಯೋತ್ಪಾದನೆ ಕುರಿತು ಈ ಚಿತ್ರ ಎಂದು ಬಲಾನಿ ಹೇಳಿದ್ದಾರೆ. ಇದೇ ವೇಳೆ ಎಲ್ಲರ ಮೆಚ್ಚುಗೆಯ ನಡುವೆ, ಕೆಲವು ಅಸಹ್ಯ ಪ್ರತಿಕ್ರಿಯೆಗಳನ್ನು ಸಹ ಸ್ವೀಕರಿಸಿದ್ದಾಗಿ ತಿಳಿಸಿದರು.
ಇದನ್ನೂ ಓದಿ: ಶೂಟಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅಪಘಾತ; 29 ವರ್ಷದ ಯುವ ನಟಿ ಸಾವು!
ಈ ಸಿನಿಮಾದಲ್ಲಿ ನಾನು ಎಲ್ಲಾ ದೇವರುಗಳ ಬಗ್ಗೆ ಬಲವಾದ ಸಾಲುಗಳನ್ನು ಹೇಳಿರುವುದರಿಂದ ನನಗೆ ನಿಂದನೀಯ ಸಂದೇಶಗಳು ಬರುತ್ತಿವೆ. ಆದರೆ ಅವರು ಇದು ನಿಜವಾದ ಕಥೆ ಅರಿತುಕೊಂಡರೆ ಹಾಗೂ ಭಯೋತ್ಪಾದಕ ಗುಂಪುಗಳ ಬಗ್ಗೆ ಅರಿವು ಮೂಡಿಸುವುದಷ್ಟೇ ಆ ಪಾತ್ರದ ಉದ್ದೇಶ ಎಂದು ತಿಳಿದುಕೊಂಡರೆ ಉತ್ತಮ. ನಾನು ಟ್ರೋಲಿಂಗ್ ಮತ್ತು ನಿಷೇಧಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಟೀ ಮಾರುವವರಿಂದ ಹಿಡಿದು ಪ್ರತಿಯೊಬ್ಬರೂ ದಿ ಕೇರಳ ಚಿತ್ರವನ್ನು ಬೆಂಬಲಿಸುತ್ತಿದ್ದಾರೆ ಅಷ್ಟು ಸಾಕು ಎಂದು ನಟಿ ಸೋನಿಯಾ ವಿವರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ