ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಣಬೀರ್ ಕಪೂರ್ ಅವರ ಮುಖ್ಯ ಭೂಮಿಕೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಚಿತ್ರದ ಟೈಟಲ್ ಟೀಸರ್ ಇಂದು ಬಿಡುಗಡೆಯಾಗಿದೆ.
ಈ ಟೈಟಲ್ ಟೀಸರನ್ನು ಯಶ್ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಕುರಿತಾಗಿ ಬರೆದುಕೊಂಡಿರುವ ಅವರು ಹತ್ತು ವರ್ಷಗಳ ಆಕಾಂಕ್ಷೆ. ಎಲ್ಲಾ ಕಾಲದ ಅತ್ಯುತ್ತಮ ಮಹಾಕಾವ್ಯವನ್ನು ವಿಶ್ವಕ್ಕೆ ತರುವ ಅಚಲ ನಿಶ್ಚಯ. ವಿಶ್ವದ ಅತ್ಯುತ್ತಮ ಸಹಯೋಗಿಗಳ ಸಹಕಾರದಿಂದ ಫಲಿತಾಂಶವಾಗಿ, ರಾಮಾಯಣವನ್ನು ಅತ್ಯುತ್ತಮ ಗೌರವ ಮತ್ತು ಗೌರವದಿಂದ ಪ್ರಸ್ತುತಪಡಿಸಲಾಗಿದೆ. ಆರಂಭಕ್ಕೆ ಸುಸ್ವಾಗತ. ರಾಮ-ರಾವಣರ ಒಂದು ಅಮರ ಕಥೆಯನ್ನು ಆಚರಿಸೋಣ. ನಮ್ಮ ಸತ್ಯ. ನಮ್ಮ ಇತಿಹಾಸ.ಎಂದು ಎಕ್ಷ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಚಿತ್ರವು ವಿಶ್ವದ ಮುಂದೆ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದ್ದು, ಇದಕ್ಕೆ ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರಹಮಾನ್ ಅವರ ಸಂಗೀತವಿದೆ.ಕೇವಲ ಒಂದು ನಿಮಿಷದ ಈ ಟೀಸರ್ ಈಗಾಗಲೇ ಸಾಮಾನ್ಯ ಸಿನಿಮಾವಲ್ಲ ಎಂಬ ಭಾವನೆಯನ್ನು ಮೂಡಿಸಿದೆ.ಟೀಸರ್‌ನ ಅದ್ಭುತ ದೃಶ್ಯಗಳು ಬೆಂಗಳೂರಿನ ನೆಕ್ಸಸ್ ಮಾಲ್ ಸೇರಿದಂತೆ ವಿವಿಧ ನಗರಗಳ ಐಮ್ಯಾಕ್ಸ್ ಪರದೆಗಳಲ್ಲಿ ಬಿಡುಗಡೆಯಾದ ಈ ಟೀಸರ್‌ನಲ್ಲಿ ರಿಯಾಲಿಟಿ ಮತ್ತು ವಿಎಫ್‌ಎಕ್ಸ್ ತಂತ್ರಜ್ಞಾನದ ಸಮನ್ವಯದಿಂದ ಸೃಷ್ಟಿಯಾದ ಅದ್ಭುತ ಲೋಕವನ್ನು ತೋರಿಸಲಾಗಿದೆ.
‘ಅವತಾರ್’ನ ಪ್ಯಾಂಡೊರಾ ರೀತಿಯ ತೂಗು ದ್ವೀಪಗಳು, ಪುರಾತನ ದೇವಾಲಯಗಳು, ಹಿಮಾಲಯದ ಮೇಲೆ ವೇಗವಾಗಿ ಹಾರುವ ಹನುಮನ ಮತ್ತು ಇತರೆ ಭವ್ಯ ದೃಶ್ಯಗಳು ಟೀಸರ್‌ನ ಮುಖ್ಯ ಆಕರ್ಷಣೆಯಾಗಿವೆ. ‘ಪ್ರಭು ರಾಮನ ಮಹಿಮೆ, ಒಂದು ಹೊಸ ಯುಗದ ಪ್ರಾರಂಭ’ ಮತ್ತು ‘ರಾಮನ ಶಕ್ತಿ ಧರ್ಮದ ವಿಜಯ’ ಎಂಬ ಹಿನ್ನೆಲೆ ಧ್ವನಿಗಳು ಟೀಸರ್‌ಗೆ ಆಧ್ಯಾತ್ಮಿಕ ಛಾಪು ನೀಡಿದೆ.
Ten years of Aspiration. Relentless Conviction to bring the Greatest Epic of all time to the World. An outcome through a collaboration of some of the world’s best to ensure that Ramayana is presented with the greatest amount of Reverence and Respect.
Welcome to the Beginning.…
— Yash (@TheNameIsYash) July 3, 2025
ಪ್ರಮುಖ ನಟರ ಭೂಮಿಕೆಈ ಟೀಸರ್‌ನಲ್ಲಿ ರಣಬೀರ್ ಕಪೂರ್ ರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಮಿಂಚಿದ್ದಾರೆ. ಆದರೆ ರಾವಣನ ಪಾತ್ರದಲ್ಲಿ ಯಶ್ ಅವರ ಮುಖ ತೋರಿಸದೆ, ಅಜಾನುಬಾಹು ದೇಹವನ್ನು ಮಾತ್ರ ಪ್ರದರ್ಶಿಸಲಾಗಿದ್ದು, ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದು, ನಮಿತ್ ಮಲ್ಹೋತ್ರಾ ಉತ್ಪಾದನೆಯಲ್ಲಿ ಭಾರತದ ಅತಿ ದೊಡ್ಡ ಬಜೆಟ್ ಚಿತ್ರವಾಗಿ ($835 ಮಿಲಿಯನ್) ರೂಪುಗೊಂಡಿದೆ.ತಾಂತ್ರಿಕ ಶಕ್ತಿ ಮತ್ತು ಸಹಯೋಗಚಿತ್ರಕ್ಕೆ ಆಸ್ಕರ್ ವಿಜೇತ ಹಾನ್ಸ್ ಜಿಮ್ಮರ್ ಸಂಗೀತ ನೀಡಿದ್ದಾರೆ, ಆಸ್ಕರ್ ವಿಜೇತ ಸ್ಟಂಟ್ ಕೋರಿಯೋಗ್ರಾಫರ್ ಸ್ಟಂಟ್‌ಗಳನ್ನು ವಿನ್ಯಾಸಗೊಳಿಸಿದ್ದು, ಹಾಲಿವುಡ್‌ನ ಪ್ರತಿಷ್ಠಿತ ಸ್ಟುಡಿಯೋಗಳು ವಿಎಫ್‌ಎಕ್ಸ್ ಕಾರ್ಯ ಮಾಡಿದ್ದು, ಇದು ಚಿತ್ರಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ತರುವ ನಿರೀಕ್ಷೆಯಿದೆ.
ಯಶ್ ಈ ಚಿತ್ರದಲ್ಲಿ ರಾವಣನ ಪಾತ್ರದ ಜೊತೆಗೆ ಸಹ-ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಮಾಯಣ’ ಮೊದಲ ಭಾಗ 2026ರ ದೀಪಾವಳಿಗೆ ಬಿಡುಗಡೆಯಾಗಲಿದೆ, ಇನ್ನೂ ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಈ ಚಿತ್ರವು ಭಾರತೀಯ ಸಿನಿಮಾ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಪ್ರಬಲಗೊಳಿಸುವ ಗುರಿಯನ್ನು ಹೊಂದಿದ್ದು. ತಂತ್ರಜ್ಞಾನ ಮತ್ತು ಸಂಸ್ಕೃತಿ ಸಮ್ಮಿಶ್ರಣದ ಮೂಲಕ ಚಿತ್ರರಸಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಲು ಸಜ್ಜಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









