close

News WrapGet Handpicked Stories from our editors directly to your mailbox

ನಟ ಸಾಮ್ರಾಟ್ ಡಾ.ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ಕನ್ನಡದ ಚಿತ್ರ ರಸಿಕರ ಮನದಲ್ಲಿ ಅಣ್ಣಾವ್ರು ಎಂದೇ ಜನಜನಿತರಾದ ಡಾ.ರಾಜ್ ಕುಮಾರ್ ಅವರಿಗೆ ಇಂದು 91ನೇ ಜನ್ಮದಿನದ ಸಂಭ್ರಮ. ತಮ್ಮ ನಟನೇ ಯಿಂದಲೇ ಐದು ದಶಕಗಳ ಕಾಲ ಚಂದನವನದ ದೊರೆಯಾಗಿ ಮೆರೆದ ರಾಜಕುಮಾರ ಅವರನ್ನು ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಲಾಗುತ್ತದೆ.

Updated: Apr 24, 2019 , 05:58 PM IST
ನಟ ಸಾಮ್ರಾಟ್ ಡಾ.ರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ
Photo courtesy: Twitter

ಬೆಂಗಳೂರು: ಕನ್ನಡದ ಚಿತ್ರ ರಸಿಕರ ಮನದಲ್ಲಿ ಅಣ್ಣಾವ್ರು ಎಂದೇ ಜನಜನಿತರಾದ ಡಾ.ರಾಜ್ ಕುಮಾರ್ ಅವರಿಗೆ ಇಂದು 91ನೇ ಜನ್ಮದಿನದ ಸಂಭ್ರಮ. ತಮ್ಮ ನಟನೇ ಯಿಂದಲೇ ಐದು ದಶಕಗಳ ಕಾಲ ಚಂದನವನದ ದೊರೆಯಾಗಿ ಮೆರೆದ ರಾಜಕುಮಾರ ಅವರನ್ನು ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಲಾಗುತ್ತದೆ.

ಐತಿಹಾಸಿಕ, ಸಾಮಾಜಿಕ, ಪೌರಾಣಿಕ, ಹಾಸ್ಯ, ಹೀಗೆ ಹಲವು ಬಗೆಯ ಪಾತ್ರಗಳ ಮೂಲಕ ತಮ್ಮದೇ ಛಾಪನ್ನು ರಾಜಕುಮಾರ್ ಭಾರತೀಯ ಸಿನಿಮಾ ರಂಗದಲ್ಲಿ ಉಳಿಸಿಹೊಗಿದ್ದಾರೆ. ಇಂತಹ ಮಹಾನ್ ನಟ ನಿಧನರಾಗಿ ದಶಕಗಳಿಗೂ ಹೆಚ್ಚು ವರ್ಷವಾಗುತ್ತಾ ಬಂತು, ಆದರೆ ಇಂದಿಗೂ ಕೂಡ ರಾಜ್ ಕುಮಾರ್ ಕನ್ನಡ ಮಟ್ಟಿಗೆ ಜೀವಂತ ಸಾಕ್ಷಿ ಪ್ರಜ್ನೆಯಾಗಿದ್ದಾರೆ. ಪ್ರತಿ ವರ್ಷ ಏಪ್ರಿಲ್ 24 ಬಂದರೆ ಸಾಕು ಕರ್ನಾಟಕದ ಮಟ್ಟಿಗೆ ಮತ್ತೊಂದು ರಾಜ್ಯೋತ್ಸವದ ರೀತಿಯಲ್ಲಿ ಆಚರಿಸಲಾಗುತ್ತದೆ.

ಈಗ ಅವರ ಜನ್ಮ ದಿನದ ನಿಮಿತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ  "ಡಾ. ರಾಜ್ ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲಿಯೂ ಅವರ ಔದಾರ್ಯ, ಅಂತಃಕರಣ, ಜೀವನ ಮೌಲ್ಯಗಳು ಅನುಕರಣೀಯ.   ನಾಳೆ  ಅವರ ಹುಟ್ಟುಹಬ್ಬ. ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ  ರಾಜಣ್ಣ  ಅವರ ಹುಟ್ಟು ಹಬ್ಬ ಆಚರಿಸುತ್ತಿದೆ.ಎಲ್ಲರೂ  ಭಾಗವಹಿಸಿ. ಡಾ ರಾಜ್ ಹುಟ್ಟುಹಬ್ಬದ ಶುಭಾಶಯಗಳು" ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ಕಿಚ್ಚ ಸುದೀಪ್  "ಸಿನಿಮಾ ಎಲ್ಲಿಯವರೆಗೂ ಅಸ್ತಿತ್ವದಲ್ಲಿರುತ್ತೋ ಅಲ್ಲಿಯವರೆಗೆ ಈ ದಿನ ಸದಾ ನೆನಪಿನಲ್ಲಿರುತ್ತದೆ " ಎಂದು ಟ್ವೀಟ್ ಮಾಡಿದ್ದಾರೆ.ಪುನೀತ್ ರಾಜಕುಮಾರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜ್ ಕುಮಾರ್ ಅವರ ಕುರಿತ ಅಪರೂಪದ ಆಡಿಯೋವೊಂದನ್ನು ಶೇರ್ ಮಾಡಿದ್ದಾರೆ.