Trikona Cinema : ಕನ್ನಡ ಸೇರಿ ಮೂರು ಭಾಷೆಗಳಲ್ಲಿ ತೆರೆಗೆ ಬರಲಿದೆ `ತ್ರಿಕೋನ` ಸಿನಿಮಾ! ಏನಿದರ ಕಥೆ?
ಈ ಬೆನ್ನಲ್ಲೇ ಡಿಫರೆಂಟ್ ಟೈಟಲ್ ಹಾಗೂ ಡಿಫರೆಂಟ್ ಕಥೆಯುಳ್ಳ ಸಿನಿಮಾಗಳು ನಮ್ಮ ಚಿತ್ರರಂಗದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿವೆ. ಈ ಪೈಕಿ `ತ್ರಿಕೋನ` ಸಿನಿಮಾ ಕೂಡ ಸಾಕಷ್ಟು ಹೋಪ್ ಇಟ್ಟುಕೊಂಡು ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ.
ಕನ್ನಡ ಚಿತ್ರರಂಗದ ಗತವೈಭವ ಮರುಕಳಿಸುತ್ತಿದ್ದು, ಕಳೆದ 2 ವರ್ಷಗಳಿಂದ ಎದುರಾಗಿದ್ದ ಸಂಕಟಗಳು ನಿಧಾನವಾಗಿ ದೂರಾಗುತ್ತಿವೆ. ಈ ಬೆನ್ನಲ್ಲೇ ಡಿಫರೆಂಟ್ ಟೈಟಲ್ ಹಾಗೂ ಡಿಫರೆಂಟ್ ಕಥೆಯುಳ್ಳ ಸಿನಿಮಾಗಳು ನಮ್ಮ ಚಿತ್ರರಂಗದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿವೆ. ಈ ಪೈಕಿ 'ತ್ರಿಕೋನ' ಸಿನಿಮಾ ಕೂಡ ಸಾಕಷ್ಟು ಹೋಪ್ ಇಟ್ಟುಕೊಂಡು ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ.
ಅಂದಹಾಗೆ ವಿಭಿನ್ನ ಕಥಾಹಂದರ ಹೊಂದಿರುವ 'ತ್ರಿಕೋನ'(Trikona Cinema) ಏಪ್ರಿಲ್ 1ರಂದು ರಿಲೀಸ್ ಆಗಲಿದೆ. 143 ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಕಾಂತ್ 'ತ್ರಿಕೋನ'ವನ್ನು ನಿರ್ದೇಶಿಸಿದ್ದಾರೆ. ರಾಜಶೇಖರ್ ಚಿತ್ರಕ್ಕೆ ಕಥೆ ಬರೆದಿದ್ದು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದೆ.
ಇದನ್ನೂ ಓದಿ : ಮಲ್ಪೆಯಲ್ಲಿ "ಆಪರೇಶನ್ D" ಹಾಡು.
ಘಟಾನುಘಟಿ ನಟರು
ಪೊಲೀಸ್ ಪ್ರಕಿ ಪ್ರೊಡಕ್ಷನ್ ಲಾಂಛನದಲ್ಲಿ ರಾಜಶೇಖರ್ ನಿರ್ಮಿಸಿರುವ ಈ ಚಿತ್ರವನ್ನು ಚಂದ್ರಕಾಂತ್(Chandrakant) ನಿರ್ದೇಶಿಸಿದ್ದಾರೆ. ಸುರೇಂದ್ರನಾಥ್ ಸಂಗೀತ ನಿರ್ದೇಶನ ಹಾಗೂ ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸುರೇಶ್ ಹೆಬ್ಳೀಕರ್, ಲಕ್ಷ್ಮೀ, ಅಚ್ಯುತಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಾರುತೇಶ್, ರಾಜವೀರ್, ಬೇಬಿ ಅದಿತಿ, ಬೇಬಿ ಹಾಸಿನಿ, ಮನದೀಪ್ ರಾಯ್, ರಾಕ್ ಲೈನ್ ಸುಧಾಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಒಟ್ಟಾರೆ ಟೈಟಲ್ ಮೂಲಕವೇ 'ತ್ರಿಕೋನ' ಪ್ರೇಕ್ಷಕರ ಗಮನ ಸೆಳೆದಿದ್ದು, ತೆರೆ ಮೇಲೂ ಇದೇ ರೀತಿ ಕಮಾಲ್ ಮಾಡಲಿದೆ ಎಂಬ ಹೋಪ್ ಇದೆ. ಚಿತ್ರವನ್ನ ಕಣ್ತುಂಬಿಕೊಳ್ಳಲು ಕನ್ನಡ ಪ್ರೇಕ್ಷಕರು ಕೂಡ ಕಾತುರರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.