ಕಿರುತೆರೆಯ ಈ ಫೇಮಸ್‌ ಜೋಡಿ ತೆರೆಯ ಮೇಲೆ ತಾಯಿ ಮಗ, ಆದರೆ ನಿಜ ಜೀವನದಲ್ಲಿ ಗಂಡ ಹೆಂಡತಿ!

TV Actress Love story: ಒಂದು ಕಾಲದಲ್ಲಿ ತಾಯಿ ಮತ್ತು ಮಗನಾಗಿ ಟಿವಿ ಪರದೆಯ ಮೇಲೆ ನಟಿಸಿದ್ದ ಈ ನಟ - ನಟಿ ನಿಜ ಜೀವನದಲ್ಲಿ ಮದುವೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. 

Written by - Chetana Devarmani | Last Updated : Apr 19, 2025, 03:22 PM IST
  • ಟಿವಿ ಪರದೆಯ ಮೇಲೆ ತಾಯಿ ಮತ್ತು ಮಗ
  • ನಿಜ ಜೀವನದಲ್ಲಿ ಪತಿ - ಪತ್ನಿ
  • ಕಿರುತೆರೆಯ ಫೇಮಸ್‌ ಜೋಡಿ
ಕಿರುತೆರೆಯ ಈ ಫೇಮಸ್‌ ಜೋಡಿ ತೆರೆಯ ಮೇಲೆ ತಾಯಿ  ಮಗ, ಆದರೆ ನಿಜ ಜೀವನದಲ್ಲಿ ಗಂಡ ಹೆಂಡತಿ!

Kishwer Merchant Love story: ಕಿರುತೆರೆ ನಟರೂ ಸಹ ಇತ್ತೀಚೆಗೆ ಸಿಕ್ಕಾಪಟ್ಟೆ ಫೇಮಸ್‌ ಆಗುತ್ತಿದ್ದಾರೆ. ಸಿನಿಮಾಗಳ ನಟ - ನಟಿಯರಂತೆ ಕಿರುತೆರೆಯಲ್ಲೂ ಅನೇಕ ಪ್ರೇಮ ಕಹಾನಿಗಳಿವೆ. ಪ್ರೇಕ್ಷಕರು ನಟನೆ ಕೇವಲ ಒಂದು ಕೆಲಸ ಎಂಬುದನ್ನು ಮರೆತುಬಿಡುತ್ತಾರೆ. ನಟರನ್ನು ಅವರ ಪಾತ್ರಗಳ ಆಧಾರದ ಮೇಲೆ ಗುರುತಿಸಲು ಆರಂಭಿಸುತ್ತಾರೆ. ಆದರೆ ಪ್ರೀತಿ ಯಾವಾಗ ಬೇಕಾದರೂ, ಯಾರೊಂದಿಗಲಾದರೂ ಹುಟ್ಟಬಹುದು. 

Add Zee News as a Preferred Source

ಬಣ್ಣದ ಜಗತ್ತಿನಲ್ಲಿ ಪರದೆಯ ಮೇಲೆ ತಾಯಿ-ಮಗನ ಪಾತ್ರ ನಿರ್ವಹಿಸಿದ ಹಲವಾರು ಜೋಡಿಗಳು ಇದ್ದಾರೆ. ಆದರೆ ಈ ಜೋಡಿ ತುಂಬಾ ವಿಶೇಷ. ತೆರೆಯ ಮೇಲೆ ತಾಯಿ ಮಗನಾಗಿ ನಟಿಸಿ ನಿಜ ಜೀವನದಲ್ಲಿ ಗಂಡ ಮತ್ತು ಹೆಂಡತಿಯಾಗಿದ್ದಾರೆ. ಈ ಜೋಡಿಯೇ ಕಿಶ್ವರ್ ಮರ್ಚೆಂಟ್ ಮತ್ತು ಸುಯ್ಯಾಶ್ ರೈ.

ಇದನ್ನೂ ಓದಿ : ಐಶ್ವರ್ಯಾ ರೈ ಮಗಳ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..! ಆರಾಧ್ಯ ಬಚ್ಚನ್ ಭವಿಷ್ಯ ಹೀಗಿದೆ ಗೊತ್ತೆ..?

ನಟ ಸುಯ್ಯಾಶ್ ರೈ ಹಿಂದೂ ಪಂಜಾಬಿ ಕುಟುಂಬಕ್ಕೆ ಸೇರಿದವರು. ಇವರ ಪತ್ನಿ ಮತ್ತು ನಟಿ ಕಿಶ್ವರ್ ಮರ್ಚೆಂಟ್ ಮುಸ್ಲಿಂ ಕುಟುಂಬದಿಂದ ಬಂದವರು. ಮದುವೆಗೆ ಧರ್ಮ ಅಡ್ಡಿ ಬರಲು ಬಿಡಲಿಲ್ಲ ಎಂದು ನಟಿ ಕಿಶ್ವರ್ ಮರ್ಚೆಂಟ್ ಹೇಳಿದ್ದರು. 

ಇಬ್ಬರೂ 2016 ರಲ್ಲಿ ವಿವಾಹವಾದರು. ಸುಯ್ಯಾಶ್ ತನ್ನ ಹೆಂಡತಿಗಿಂತ 8 ವರ್ಷ ಚಿಕ್ಕವರು ಎಂಬುದು ವಿಶೇಷ. ವಯಸ್ಸಿನ ಅಂತರದ ಬಗ್ಗೆ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಆದರೆ ಇಬ್ಬರೂ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. 

 

 
 
 
 

 
 
 
 
 
 
 
 
 
 
 

A post shared by Suyyash Rai (@suyyashrai)

 

ಪ್ಯಾರ್ ಕಿ ಯೇ ಏಕ್ ಕಹಾನಿ ಧಾರಾವಾಹಿಯಲ್ಲಿ ಕಿಶ್ವರ್ ಮರ್ಚೆಂಟ್ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಟ ಸುಯ್ಯಾಶ್ ರೈ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ಈ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಆ ಬಳಿಕ ಮನೆಯಲ್ಲಿ ಈ ವಿಚಾರ ತಿಳಿಸಿದಾಗ, ನಟ ಸುಯ್ಯಾಶ್ ರೈ ಅವರ ತಾಯಿ ಆರಂಭದಲ್ಲಿ ಅವರ ಮದುವೆಗೆ ವಿರೋಧ ವ್ಯಕ್ತಪಡಿಸಿದರಂತೆ. 

ಇಬ್ಬರ ನಡುವೆ ದೊಡ್ಡ 8 ವರ್ಷಗಳ ವಯಸ್ಸಿನ ಅಂತರವಿತ್ತು. ಆದರೆ ಕಾಲ ಕಳೆದಂತೆ ಎಲ್ಲವೂ ಸರಿ ಹೋಯಿತು. ಇಬ್ಬರೂ ಮದುವೆ ಆಗಿದ್ದಾರೆ. 2021 ರಲ್ಲಿ ಈ ಜೋಡಿ ತಮ್ಮ ಮಗ ನಿರ್ವೈರ್ ಅವರನ್ನು ಸ್ವಾಗತಿಸಿದರು.

ಇದನ್ನೂ ಓದಿ : ಕೊನೆಗೂ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಸಮಂತಾ..! ಆ ವಿಶೇಷ ದಿನಾಂಕ ಸೇರಿದಂತೆ ಎಲ್ಲದಕ್ಕೂ ಸ್ಪಷ್ಟನೆ.. ಪೋಸ್ಟ್ ವೈರಲ್

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News