TV Show On Mobile: ಇನ್ಮುಂದೆ Internet ಸಹಾಯವಿಲ್ಲದೆ ಮೊಬೈಲ್ ಮೇಲೆ ನಿಮ್ಮ ನೆಚ್ಚಿನ TV Show ವಿಕ್ಷೀಸಬಹುದು
TV Show On Mobile - IIT ಕಾನ್ಪುರ್ ಹಾಗೂ ಪ್ರಸಾರ ಭಾರತಿ ನಡುವೆ ನೆಕ್ಸ್ಟ್ ಜೆನರೆಶನ್ ಬ್ರಾಡ್ ಕಾಸ್ಟಿಂಗ್ ಮೇಲೆ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಅಡಿ ನೀವು ನೇರವಾಗಿ ಬ್ರಾಡ್ ಕಾಸ್ಟ್ ಸ್ಪೆಕ್ಟ್ರಮ್ (Broadcast Spectrum)ಅಡಿ ನೇರವಾಗಿ ಮೊಬೈಲ್ ಮೇಲೆ ಟಿವಿ ಚಾನೆಲ್ ವಿಕ್ಷೀಸಬಹುದಾಗಿದೆ.
ಕಾನ್ಪುರ್: TV Show On Mobile - ಶೀಘ್ರದಲ್ಲೇ ಟಿವಿ ಚಾನೆಲ್‌ಗಳನ್ನು ಇಂಟರ್ನೆಟ್ ಸಹಾಯವಿಲ್ಲದೆ ಮೊಬೈಲ್‌ನಲ್ಲಿ ವಿಕ್ಷೀಸಲು ಸಾಧ್ಯವಾಗಲಿದೆ. ಐಐಟಿ ಕಾನ್ಪುರ್ ಮತ್ತು ಪ್ರಸಾರ್ ಭಾರತಿ ನೆಕ್ಸ್ಟ್ ಜನರೇಷನ್ ಬ್ರಾಡ್ಕಾಸ್ಟಿಂಗ್ ಟೆಕ್ನಾಲಜಿಯಲ್ಲಿ ಒಟ್ಟಾಗಿ ಕೆಲಸ ಮಾಡಲಿವೆ. ಇದು ಪೂರ್ಣಗೊಂಡ ಬಳಿಕ 4 ಜಿ ಮತ್ತು 5 ಜಿ ಸ್ಪೆಕ್ಟ್ರಮ್ ಅಗತ್ಯ (4G-5G Spectrums) ಬೀಳುವುದಿಲ್ಲ. ಪ್ರಸಾರ ಸ್ಪೆಕ್ಟ್ರಮ್ ಮೂಲಕ ನೀವು ನೇರವಾಗಿ ಮೊಬೈಲ್‌ನಲ್ಲಿ ಟಿವಿ ಚಾನೆಲ್‌ಗಳನ್ನು (TV Show) ವೀಕ್ಷಿಸಬಹುದಾಗಿದೆ.
ಸೆಂಟರ್ ಆಫ್ ಎಕ್ಸಲೆನ್ಸ್ ನಿರ್ಮಾಣ
ಇದಕ್ಕಾಗಿ ಐಐಟಿ ಕಾನ್ಪುರ್(IIT Kanpur), ಪ್ರಸಾರ್ ಭಾರತಿಯೊಂದಿಗೆ (Prasar Bharati)ಒಡಂಬಡಿಕೆಯೊಂದಕ್ಕೆ (MoU) ಸಹಿ ಹಾಕಿದೆ. ಇದಕ್ಕಾಗಿ ಐಐಟಿಯಲ್ಲಿ ಸೆಂಟರ್ ಆಫ್ ಎಕ್ಸಿಲೆನ್ಸ್ (Center of Excellence) ಸ್ಥಾಪಿಸಲಾಗುವುದು. ಈ ಕುರಿತು ಮಾತನಾಡಿರುವ ನಿರ್ದೇಶಕ ಪ್ರೊ. ಅಭಯ್ ಕರಂಡಿಕರ್, "ಇತ್ತೀಚಿನ ದಿನಗಳಲ್ಲಿ ಜನರು ಮೊಬೈಲ್, ಟ್ಯಾಬ್ಲೆಟ್ ಅನ್ನು ಸಾಕಷ್ಟು ಬಳಸುತ್ತಿದ್ದಾರೆ, ಚಲನಚಿತ್ರಗಳು, ಧಾರಾವಾಹಿಗಳು, ಸುದ್ದಿ ವಾಹಿನಿಗಳನ್ನು ವೀಕ್ಷಿಸಲು ಪ್ರತಿದಿನ ಸಾಕಷ್ಟು ಡೇಟಾವನ್ನು ಖರ್ಚು ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ವೀಕ್ಷಕರ ಡೇಟಾವನ್ನು ಖರ್ಚು ಮಾಡದೆ ಅವರಿಗೆ ಟಿವಿ ಚಾನೆಲ್‌ಗಳನ್ನು ನೋಡಲು ಅನುವು ಮಾಡಿಕೊಡಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ಪ್ರಸಾರ ಭಾರತಿ ಆರ್ಥಿಕ ನೆರವು ಒದಲಿಸಲಿದೆ" ಎಂದು ಹೇಳಿದ್ದಾರೆ.
ಸ್ಪೆಕ್ಟ್ರಮ್ ಹಾಗೂ ಬ್ರಾಡ್ ಕಾಸ್ಟ್ ಟೆಕ್ನಾಲಜಿಯಲ್ಲಿ ಅಂತರವೇನು?
ಈ ಕುರಿತು ಹೇಳಿಕೆ ನೀಡಿರುವ IIT ನಿರ್ದೇಶಕ ಪ್ರೊ.ಅಭಯ್ ಕರಂದಿಕರ್ (Prof. Abhay Karandikar), "ಸ್ಪೆಕ್ಟ್ರಮ್ ವಿವಿಧ ಪ್ರಕಾರದ ಫ್ರೆಕ್ವೆನ್ಸಿ ಸೆಟ್ ಗಳಾಗಿದ್ದು, ಅವುಗಳ ಮೇಲೆ ಡೇಟಾ ಸಂವಹನ ನಡೆಯುತ್ತದೆ. ಫ್ರೆಕ್ವೆನ್ಸಿ ಎಷ್ಟಿದೆ, ಅದರ ವೇವ್ ಲೆಂಥ್ ಎಷ್ಟಿದೆ ಹಾಗೂ ಅದು ಎಷ್ಟು ದೂರದವರೆಗೆ ಶಕ್ತಿಯನ್ನು ಕೊಂಡೊಯ್ಯಬಲ್ಲದು ಎಂಬುದರ ಮೇಲೆ ಅದರ ಬಳಕೆಯ ನಿರ್ಧಾರವಾಗುತ್ತದೆ. ಮೊಬೈಲ್ ಗಳಂತಹ ಡಿವೈಸ್ ಗಳು ಸ್ಪೆಕ್ಟ್ರಮ್ ಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ. ಫ್ರೀಕ್ವೆನ್ಸಿ ಹೆಚ್ಚಾಗುತ್ತಿದ್ದಂತೆ ಡೇಟಾ ವರ್ಗಾವಣೆಯ ವೇಗ ಕೂಡ ಹೆಚ್ಚಾಗುತ್ತದೆ. ಆದರೆ, ಬ್ರಾಡ್ ಕಾಸ್ಟ್ನಲ್ಲಿ ಡೇಟಾವನ್ನು ಮೊದಲು ಒಂದು ಸಿಗ್ನಲ್ ವರೆಗೆ ಕಳುಹಿಸಲಾಗುತ್ತದೆ. ಬಳಿಕ ಅಲ್ಲಿಂದ ಸಂಪೂರ್ಣ ಕ್ಷೇತ್ರದಲ್ಲಿ ಏಕಕಾಲಕ್ಕೆ ವರ್ಗಾಗಿಸಲಾಗುತ್ತದೆ' ಎನ್ನುತ್ತಾರೆ.
ಇದನ್ನೂ ಓದಿ-ನಟಿ ಶಿಲ್ಪಾ ಶೆಟ್ಟಿ ಪತಿಗೆ ಮತ್ತಷ್ಟು ಸಂಕಷ್ಟ: ಪೊಲೀಸ್ ಕಸ್ಟಡಿ ಅವಧಿ ಮತ್ತಷ್ಟು ವಿಸ್ತರಣೆ..!
'ಬ್ರಾಡ್ ಕಾಸ್ಟ್ ನಲ್ಲಿ, ಒಂದೇ ಡೇಟಾ ಅನೇಕ ಸ್ಥಳಗಳಲ್ಲಿ ಒಂದೇ ತರಂಗಾಂತರದೊಂದಿಗೆ ಚಲಿಸುತ್ತದೆ. ಆದರೆ ಮೊಬೈಲ್‌ನಲ್ಲಿ ಕಾರ್ಯನಿರ್ವಹಿಸುವ ಆವರ್ತನಗಳು ವಿಭಿನ್ನವಾಗಿವೆ. ನಾವು ಕೆಲವು ತಾಂತ್ರಿಕ ತೊಂದರೆಗಳನ್ನು ಎದುರಿಸಿದಾಗಲೆಲ್ಲಾ, ಮೊಬೈಲ್ ಎಲ್ಲೋ ಸಂಪರ್ಕಗೊಳ್ಳುವ ಬದಲು ಬೇರೆಡೆ ಸಂಪರ್ಕಗೊಳ್ಳುತ್ತದೆ ಎಂದು ನಾವು ನೋಡುತ್ತೇವೆ. ಆವರ್ತನ ಹದಗೆಟ್ಟಾಗ ಮಾತ್ರ ಇದು ಸಂಭವಿಸುತ್ತದೆ. ಆದರೆ ಬ್ರಾಡ್ ಕಾಸ್ಟ್ ನಲ್ಲಿ ಒಂದೇ ವಿಷಯವನ್ನು ಅನೇಕ ಮೂಲಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಅದಕ್ಕಾಗಿಯೇ ಇದು ಉತ್ತಮವಾಗಿದೆ.' ಎಂದು ಪ್ರೊ. ಕರಂದಿಕರ್ ಹೇಳುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ