ಪ್ರೀತಿಗೆ ಕಣ್ಣಿಲ್ಲ ಅಂತಾರೆ..ಆ ಮಾತು ಆಗಾಗ ಸಾಬೀತಾಗುತ್ತಲೇ ಬಂದಿದೆ..ಇದಕ್ಕೆ ಕೆಲವೊಮ್ಮೆ ಯಾವುದೇ ವಯಸ್ಸಿನ ಮಿತಿಯಾಗಲಿ ಹಿನ್ನೆಲೆಯಾಗಲಿ ಯಾವುದು ಸಹ ಲೆಕ್ಕಕ್ಕೆ ಬರಲ್ಲ, ಹಾಗಾಗಿಯೇ ನಾವು ನಮ್ಮ ದಿನ ನಿತ್ಯದ ಬದುಕಿನಲ್ಲಿ ಹಲವು ವಿಭಿನ್ನ ರೀತಿಯ ಪ್ರೇಮಕಥೆಗಳನ್ನು ಕೇಳುತ್ತೇವೆ.ಈಗ ಅಂತದ್ದೇ ಒಂದು ವಿಭಿನ್ನ ಹಾಗೂ ರೋಚಕವಾಗಿರುವ ಲವ್ ಸ್ಟೋರಿ ಬಗ್ಗೆ ಇಂದು ಹೇಳಲಿದ್ದೇವೆ.
ಪ್ರೀತಿಗಾಗಿ ಭಾರತವನ್ನೇ ತೊರೆದಿದ್ದ ಮೋನಿಕಾ..!
ಅದು 1999 ರ ಸಮಯ, ಕನ್ನಡದಲ್ಲಿ ಜಗ್ಗೇಶ ನಾಯಕನಾಗಿ ನಟಿಸಿದ ನನ್ನಾಸೆಯ ಹೂವು ಚಿತ್ರದಲ್ಲಿ ನಟಿಸುವ ಮೂಲಕ ಚಂದನವನದ ಚಿತ್ರರಸಿಕರಿಗೆ ಆ ನಟಿ ಚಿರಪರಿಚಿತರಾಗಿದ್ದರು. ಹೌದು, ಈಗ ನಾವು ಹೇಳುತ್ತಿರುವುದು ಬೇರೆ ಯಾರೂ ಅಲ್ಲ, ಅವರೇ ಮೋನಿಕಾ ಬೇಡಿ..! ಈ ಪಂಜಾಬಿ ಚಲುವೆ ಅಬು ಸಲಿಂ ನನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದಳೆಂದರೆ ಅವರು ಆತನಿಗಾಗಿ ಭಾರತವನ್ನೇ ಬಿಟ್ಟು ತನ್ನ ಜೀವನವನ್ನು ಅವನ ಜೊತೆ ಕಳೆಯಲು ಹೋಗಿದ್ದಳು.
ಈ ಹಿಂದೆ ಶೋಟೈಮ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, ಮೋನಿಕಾ 1988 ರಲ್ಲಿ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುವಂತೆ ಒಬ್ಬ ವ್ಯಕ್ತಿಯಿಂದ ಕರೆ ಬಂದಿತ್ತು ಎಂದು ಬಹಿರಂಗಪಡಿಸಿದ್ದರು.ಕೆಲವು ಫೋನ್ ಕರೆಗಳ ನಂತರ ತಾನು ಅವನೊಂದಿಗೆ ಮಾತನಾಡಲು ಪ್ರಾರಂಭಿಸಿದೆ ಮತ್ತು ತಾನು ಭೂಗತ ಜಗತ್ತಿನ ಡಾನ್ ಅಬು ಸಲೇಂ ಜೊತೆ ಮಾತನಾಡುತ್ತಿದ್ದೇನೆಂದು ತಿಳಿದಿರಲಿಲ್ಲ. ಆಗ ಅವನು ತನ್ನನ್ನು ಅರ್ಸಲಾನ್ ಅಲಿ ಎಂದು ಪರಿಚಯಿಸಿಕೊಂಡಿದ್ದನು ಎಂದು ಆಕೆ ವಿವರಿಸಿದಳು. ಆ ಕಾರ್ಯಕ್ರಮದ ನಂತರ, ಮೋನಿಕಾ ಮತ್ತು ಅಬು ಸಂಪರ್ಕದಲ್ಲಿದ್ದರು ಇದಾದ ನಂತರ ಇಬ್ಬರ ನಡುವಿನ ಸಂಬಂಧ ಭಾವನಾತ್ಮಕವಾಗಿ ಬೆಸೆಯುತ್ತಿದ್ದಂತೆ ಅವರು ಆಗಾಗ ಭೇಟಿಯಾಗಲು ನಿರ್ಧರಿಸಿದರು. ಡಿನ್ನರ್ ನೈಟ್ ಗಳಿಗೆ ಹೋಗುವುದು, ಜೊತೆಯಾಗಿ ಸಿನಿಮಾಗಳನ್ನು ನೋಡುವುದು ಹೀಗೆ ಆ ಪಾತಕಿಯನ್ನು ಮೋನಿಕಾ ತೀವ್ರವಾಗಿ ಪ್ರೀತಿಸುತ್ತಿದ್ದಳು.
'ಅವನು ಅಬು ಸಲೇಂ ಅಂತ ನನಗೆ ಗೊತ್ತಿರಲಿಲ್ಲ. ಒಂದು ವೇಳೆ ಅವನು ಅಬು ಸಲೇಂ ಅಂತ ಹೇಳಿದ್ದರೂ, ನನಗೆ ಯಾವುದೇ ಸುಳಿವು ಸಿಗುತ್ತಿರಲಿಲ್ಲ. ನಾನು ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಬಗ್ಗೆ ಮಾತ್ರ ಕೇಳಿದ್ದೆ. ಆಗ ಅವನು ತನ್ನನ್ನು ಅರ್ಸಲಾನ್ ಅಲಿ ಎಂದು ಪರಿಚಯಿಸಿಕೊಂಡಿದ್ದನು. ಅದು ಅವನು ಆಗಾಗ್ಗೆ ಬಳಸುತ್ತಿದ್ದ ಸುಳ್ಳು ಗುರುತಾಗಿತ್ತು. ಈ ಗುರುತಿನ ಮೇಲೆ ಅವನು ಪೋರ್ಚುಗಲ್‌ನಲ್ಲಿಯೂ ಸಿಕ್ಕಿಬಿದ್ದಿದ್ದನು. ಒಂದು ವೇಳೆ ಆತ ತನ್ನ ನಿಜವಾದ ಹೆಸರನ್ನು ಹೇಳಿದ್ದರೆ ಬಹಳ ಹಿಂದೆಯೇ ಸಿಕ್ಕಿ ಬಿಳುತ್ತಿದ್ದನು ಎನ್ನುತ್ತಾರೆ ಮೋನಿಕಾ ಬೇಡಿ.
ಇನ್ನು ಮುಂದುವರೆದು 'ಕೊನೆಗೂ ನನ್ನ ಮೂರನೇ ದುಬೈ ಪ್ರವಾಸದಲ್ಲಿದ್ದಾಗ ಅವನು ತನ್ನ ನಿಜವಾದ ಗುರುತನ್ನು ನನಗೆ ಹೇಳಿದನು. ಅವನು ತನ್ನ ನಿಜವಾದ ಹೆಸರು ಅಬು ಸಲೇಂ ಮತ್ತು ತನಗೊಂದು ಕರಾಳ ಹಿನ್ನೆಲೆ ಇದೆ ಎಂದು ಹೇಳಿದನು. ಅದನ್ನೆಲ್ಲಾ ಬದಲಾಯಿಸಿ ಹೊಸ ಜೀವನ ಪ್ರಾರಂಭಿಸಬೇಕೆಂದು ಅವನು ಹೇಳುತ್ತಿದ್ದನು. ಆ ವೇಳೆಗೆ ನಾವಿಬ್ಬರು ತೀವ್ರವಾಗಿ ಪ್ರೀತಿಸುತ್ತಿದ್ದೆವು. ಪೋರ್ಚುಗಲ್‌ನಲ್ಲಿ ಅವನ ವಿರುದ್ಧದ ಆರೋಪಪಟ್ಟಿಯನ್ನು ಓದಿದಾಗ ನನಗೆ ಎಲ್ಲವೂ ಆಘಾತಕಾರಿಯಾಗಿತ್ತು. ಅವರನು ಬಂಧನದ ಭೀತಿಯಿಂದ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದ, ಆದರೆ ಯಾವಾಗ ಇದೆಲ್ಲವನ್ನು ನಾನು ಲಿಖಿತವಾಗಿ ದಾಖಲಾಗಿರುವುದನ್ನು ನೋಡಿದೆ ಆಗ ಅದೆಲ್ಲವೂ ನನ್ನ ಕಣ್ಣನ್ನು ತೆರೆಸಿತು.
ಕೆಲವರು ಅಬು ಸಲಿಂ ಜೊತೆಗಿನ ಸಂಬಂಧದಿಂದಾಗಿ ಅವನ ಬಳಿ ಹಣವಿದೆ ಹಾಗಾಗಿ ನಾನು ರಾಜಕುಮಾರಿಯಂತೆ ಬದುಕುತ್ತೇನೆ ಎಂದು ಜನರು ನಂಬಿದ್ದರು.ಆದರೆ ಅವನ ಜೊತೆಗಿನ ಸಂಬಂಧದಿಂದ ನಾನು ಸಾಕಷ್ಟು ಸಂಕಷ್ಟವನ್ನು ಅನುಭವಿಸಿದ್ದೇನೆ, ಅವನಿಗಾಗಿ ಎಲ್ಲವನ್ನು ಮಾಡಿದ್ದೆ, ಮನೆ ಸ್ವಚ್ಛಗೊಳಿಸುವುದರಿಂದ ಹಿಡಿದು ಅಡುಗೆ ಪಾತ್ರೆಗಳನ್ನು ನಾನು ತೊಳೆಯುತ್ತಿದ್ದೆ. ನಿಜ ಹೇಳಬೇಕೆಂದರೆ ಆತನಿಂದ ನಾನು ಅಡುಗೆ ಮಾಡುವುದನ್ನು ಕಲಿತೆ.ನಾನು ಉತ್ತಮ ಜೀವನವನ್ನು ಕಂಡಿದ್ದರೆ, ಅದು ನನ್ನ ಹೆತ್ತವರ ಮನೆಯಲ್ಲಿ ಅಥವಾ ನನ್ನ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಮಾತ್ರ. ಜನರು, 'ಅವಳು ಹಣಕ್ಕಾಗಿ ಅವನೊಂದಿಗಿದ್ದಾಳೆ' ಎಂದು ಹೇಳುತ್ತಿದ್ದರು. ಆದರೆ ಹಣ ಎಲ್ಲಿದೆ? ನನ್ನನ್ನು ಈ ಸಂದಿಗ್ದ ಪರಿಸ್ಥಿತಿಗೆ ತಂದಿದ್ದು ಯಾಕೆ ಎಂದು ನನ್ನಷ್ಟಕ್ಕೆ ನಾನು ಅಳುತ್ತಿದ್ದೆ ಎಂದು ಅವರು ಹೇಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









