Mohammad Asif and Veena Malik Love Story: ವೀಣಾ ಮಲಿಕ್ ಸಿಲ್ಕ್ ಸಖತ್ ಹಾಟ್ ಎನ್ನುವ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಳು.ಈ ಸಿನಿಮಾದಲ್ಲಿ ಆಕೆ ನಟಿ ಸಿಲ್ಕ್ ಸ್ಮಿತಾ ಪಾತ್ರಕ್ಕಾಗಿ 5 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಳು. ಈ ಚಿತ್ರವು 'ಡರ್ಟಿ ಪಿಕ್ಚರ್' ಚಿತ್ರದ ರೀಮೇಕ್ ಅಲ್ಲದಿದ್ದರೂ, ಸಿಲ್ಕ್ ಸ್ಮಿತಾ ಅವರ ಜೀವನದ ಕೆಲವು ಅಪರೂಪದ ಘಟನೆಗಳನ್ನು ಒಳಗೊಂಡ ಸಿನಿಮಾ ಆಗಿತ್ತು..!
ಆದರೆ ಈಗ ನಾವು ಹೇಳಹೊರಟಿರುವುದು ಈ ಸಿನಿಮಾದ ಬಗ್ಗೆ ಅಲ್ಲ,..ಬದಲಾಗಿ ಪಾಕ್ ಕ್ರಿಕೆಟ್ ರ ಮೊಹಮ್ಮದ್ ಆಸಿಫ್ ಜೊತೆಗಿನ ಸಂಬಂಧದ ಕುರಿತಾಗಿ. ಹೌದು, ಆಕೆ ಈ ಹಿಂದೆ ಪಾಕ್ ಕ್ರಿಕೆಟ್ ರ ಮೊಹಮ್ಮದ್ ಆಸಿಫ್ ಜೊತೆಗಿನ ಸಂಬಂಧದ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದಳು.ಇವರಿಬ್ಬರ ನಡುವಿನ ಈ ಲವ್ವಿ ಡವ್ವಿ ಪಾಕಿಸ್ತಾನದ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಮೊಹಮ್ಮದ್ ಆಸಿಫ್ ಮತ್ತು ವೀಣಾ ಮಲಿಕ್ ಲವ್ ಸ್ಟೋರಿ:
2000ರ ದಶಕದಲ್ಲಿ ಆಸಿಫ್ ತಮ್ಮ ವೇಗದ ಬೌಲಿಂಗ್‌ನಿಂದ ಕ್ರಿಕೆಟ್ ಜಗತ್ತಿನಲ್ಲಿ ಗಮನ ಸೆಳೆಯುತ್ತಿದ್ದರು. ಇತ್ತ, ವೀಣಾ ಮಲಿಕ್ ತಮ್ಮ ಸೌಂದರ್ಯ ಮತ್ತು ಬೋಲ್ಡ್ ಆಕ್ಟಿಂಗ್ ನಿಂದಾಗಿ ಪಾಕಿಸ್ತಾನದ ಸಿನಿ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಳು. ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಪರಸ್ಪರ ಪರಿಚಿತರಾದ ನಂತರ ಅವರು ಆಗಾಗ ಖಾಸಗಿಯಾಗಿ ಡೇಟಿಂಗ್ ಮಾಡುತ್ತಿದ್ದರು. ಇದೆಲ್ಲವೂ ಮಾಧ್ಯಮದಲ್ಲಿ ಒಂದು ರೀತಿ ಹಲವು ವದಂತಿಗಳಿಗೆ ಕಾರಣವಾಗಿತ್ತು. ಆರಂಭದಲ್ಲಿ, ಇವರ ಸಂಬಂಧವು ಪರಸ್ಪರ ಆತ್ಮೀಯತೆಯಿಂದ ಕೂಡಿತ್ತು. ಆಸಿಫ್ ಅವರ ಕ್ರಿಕೆಟ್ ಪಂದ್ಯಗಳಲ್ಲಿ ವೀಣಾ ಮಲಿಕ್ ಆಗಾಗ ಕಾಣಿಸಿಕೊಂಡಿದ್ದರಿಂದಾಗಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವಂತೆ ವಂದತಿಗಳು ಹರಡಿದ್ದವು.
ಆದರೆ ಈ ಸಂಬಂಧ ಮುರಿದು ಬಿದ್ದ ನಂತರ ವೀಣಾ ಸಂದರ್ಶನವೊಂದರಲ್ಲಿ ಮೊಹಮ್ಮದ್ ಆಸಿಫ್ ಅವರೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತಾ, ಮೊಹಮ್ಮದ್ ಆಸಿಫ್ ಕ್ರಿಕೆಟ್ ಆಡುವುದಕ್ಕಿಂತ ಮಸಾಜ್ ನೀಡುವುದರಲ್ಲಿ ಉತ್ತಮ ಎಂದು ಹೇಳಿದ್ದರು. 'ಆಸಿಫ್ ಜೊತೆ ಕಳೆದ ಸಮಯ ತುಂಬಾ ಚೆನ್ನಾಗಿತ್ತು. ಆತ ಕ್ರಿಕೆಟ್‌ಗಿಂತ ಕಾಲಿನ ಮಸಾಜ್ ಮಾಡುವ ಕಲೆಯಲ್ಲಿ ಪ್ರವೀಣನಾಗಿದ್ದ. ಆಸಿಫ್ ನನಗೆ ನಿಜ ಅರ್ಥದಲ್ಲಿ ಮ್ಯಾನ್ ಆಗಿದ್ದ.' ಆಸಿಫ್ ನನ್ನ ಪಾದಗಳಿಗೆ ಮಸಾಜ್ ಮಾಡುತ್ತಿದ್ದ, ಆ ಕ್ಷಣಗಳು ನನಗಿನ್ನೂ ನೆನಪಿವೆ. ಅವನು ಕ್ರಿಕೆಟಿಗನಿಗಿಂತ ಉತ್ತಮ ಕಾಲು ಮಸಾಜ್ ಮಾಡುವವನು ಎಂದು ನಾನು ಆಗಾಗ್ಗೆ ಭಾವಿಸುತ್ತಿದ್ದೆ' ಎಂದು ಅವರು ಅವನ ಜೊತೆಗೆ ಕಳೆದ ದಿನಗಳನ್ನು ಸ್ಮರಿಸಿದ್ದರು. ಈ ಹೇಳಿಕೆ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿತ್ತು. ಆದರೆ, ಈ ಸುಂದರ ಕ್ಷಣಗಳು ದೀರ್ಘಕಾಲ ಉಳಿಯಲಿಲ್ಲ. ಕೆಲವೇ ತಿಂಗಳಲ್ಲಿ ಆಸಿಫ್‌ನ ಡೋಪಿಂಗ್ ವಿವಾದ ಮತ್ತು ಇತರ ಆರೋಪಗಳು ಇವರ ಸಂಬಂಧವನ್ನು ಹದಗೆಡಿಸಿತು. ವೀಣಾ ಆಸಿಫ್‌ಗೆ ಆರ್ಥಿಕ ಸಹಾಯ ಮಾಡಿದ್ದರು. ಆದರೆ ಆಕೆ ಸಾಲದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅವರಿಬ್ಬರೂ ಬೇರೆಯಾದರು.ಇದಾದ ನಂತರ, 2010ರಲ್ಲಿ ಭಾರತದ ಬಿಗ್ ಬಾಸ್ 4 ರಿಯಾಲಿಟಿ ಶೋನಲ್ಲಿ ವೀಣಾ ಮಲಿಕ್ ಭಾಗವಹಿಸಿದ್ದರು. ಅಲ್ಲಿ ನಟಿ ಅಮೀಷಾ ಪಟೇಲ್ ಸಹೋದರ ಅಶ್ಮಿತ್ ಪಟೇಲ್ ಜೊತೆಗಿನ ಆಕೆಯ ಸಂಬಂಧ ಸಾಕಷ್ಟು ಸುದ್ದಿಯಾಗಿತ್ತು.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









