)
Priyanka Upendra mobile hack : ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿದ ಸೈಬರ್ ಖದೀಮರು ಲಕ್ಷಾಂತರ ರೂಪಾಯಿ ಹಣ ದೋಚಿದ್ದಾರೆ. ಅದಕ್ಕಾಗಿ ಅವರು ಕೊಟ್ಟ ಆ ವಿಚಿತ್ರ ನಂಬರ್ ಕುರಿತು ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಆ ಡೇಂಜರಸ್ ನಂಬರ್ ಇದೇ ನೋಡಿ..
ಬೆಂಗಳೂರಿನ ಸದಾಶಿವ ನಗರ ಪೊಲೀಸರಿಗೆ ಈ ಬಗ್ಗೆ ಉಪೇಂದ್ರ ಮತ್ತು ಪ್ರಿಯಾಂಕಾ ಅವರು ದೂರು ನೀಡಿದ್ದಾರೆ. ಉಪೇಂದ್ರ ಮತ್ತು ಪ್ರಿಯಾಂಕಾ ಮೊಬೈಲ್ ಫೋನ್ಗಳನ್ನು ಹ್ಯಾಕ್ ಮಾಡಿ ಆರ್ಥಿಕ ಸಹಾಯ ಕೋರಿ ತಮ್ಮ ಸಂಪರ್ಕಗಳಿಗೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ತುಂಬಾ ಬೇಜಾರಾಗ್ತಿದೆ. ಬೆಳಗ್ಗೆಯಿಂದ ಬಹಳ ಜನರು ದುಡ್ಡು ಕಳಿಸಿದ್ದಾರೆ. ಫರ್ನಿಚರ್ ಡೆಲಿವರಿ ನೆಪದಲ್ಲಿ ನಮಗೆ ಫೋನ್ ಮಾಡಿ ಒಂದು ಕೋಡ್ ಕಳಿಸಿದರು. ಅದನ್ನು ಸೇವ್ ಮಾಡಿಕೊಳ್ಳಲು ಹೇಳಿದ್ದರು. ಅದು ಹ್ಯಾಕಿಂಗ್ ಲಿಂಕ್ ಅಂತ ನನಗೆ ಗೊತ್ತಾಗಲಿಲ್ಲ. ಇದು ನನ್ನದೇ ತಪ್ಪು. ಇತ್ತೀಚೆಗೆ ನಾನು ಯುಪಿಐ ಬಳಕೆ ಮಾಡಲು ಶುರು ಮಾಡಿದ್ದೇನೆ. ಟೆಕ್ನಾಲಜಿಯಲ್ಲಿ ನಾನು ಅಷ್ಟೊಂದು ಮುಂದಿಲ್ಲ. ಆ ಕೋಡ್ ಡಯಲ್ ಮಾಡುತ್ತಿದ್ದಂತೆ ನನ್ನ ಫೋನ್ ಹ್ಯಾಕ್ ಆಯಿತು ಎಂದಿದ್ದಾರೆ.
ಅವರು ನಂಬರ್ ಬದಲು ಕೋಡ್ ಕೊಟ್ಟಾಗಲೇ ನನಗೆ ಅನುಮಾನ ಬಂತು. ಆದರೂ ಆ ನಂಬರ್ ಡಯಲ್ ಮಾಡಿದೆ. ಅಲ್ಲೇ ನಾನು ತಪ್ಪು ಮಾಡಿದ್ದು. ನನ್ನ ವಾಟ್ಸಪ್ ಕೂಡ ಹ್ಯಾಕ್ ಆಯಿತು. ಅದರಿಂದ ಬೇರೆಯವರಿಗೆ ಮೆಸೇಜ್ ಕಳಿಸಿದ್ದಾರೆ. ನನ್ನ ತಮ್ಮ ಕೊಲ್ಕತ್ತಾದಿಂದ ಕಾಲ್ ಮಾಡಿ ಈ ವಿಚಾರ ತಿಳಿಸಿದ. ತಕ್ಷಣ ನಾವು ಬಂದು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.
ಹ್ಯಾಕರ್ಗಳು ಹಿಂದಿಯಲ್ಲಿ ಮಾತನಾಡಿದರು. ನಾವು ಆರ್ಡರ್ ಮಾಡಿದ ಫರ್ನೀಚರ್ ಹೊರ ರಾಜ್ಯದಿಂದ ಬರಬೇಕಿತ್ತು. ಹಾಗಾಗಿ ಅನುಮಾನ ಬರಲಿಲ್ಲ. ಗಾಯತ್ರಿ, ಚೇತನಾ ಎಂಬ ನನ್ನ ಇಬ್ಬರು ಸ್ನೇಹಿತೆಯರು ಸಹ ಹಣ ಹಾಕಿದ್ದಾರೆ. ನನ್ನ ಮಗ ಆಯುಷ್ ಹಣ ಕಳೆದುಕೊಂಡಿದ್ದಾನೆ. ಎಲ್ಲರದ್ದೂ ಸೇರಿ 1.60 ಲಕ್ಷ ರೂಪಾಯಿ ದೋಚಿದ್ದಾರೆ ಎಂದು ಪ್ರಿಯಾಂಕಾ ಉಪೇಂದ್ರ ತಿಳಿಸಿದ್ದಾರೆ.
"ನನ್ನ ಪತ್ನಿ ಪ್ರಿಯಾಂಕಾ ಅವರ ಫೋನ್ಗೆ ಸಂದೇಶ ಬಂದಿತು ... ನಾವು ಪ್ರಿಯಾಂಕಾ ಅವರ ಫೋನ್ನಿಂದ ಮತ್ತು ನಂತರ ನನ್ನ ಫೋನ್ನಿಂದಲೂ ಡಯಲ್ ಮಾಡಿದ್ದೇವೆ. ನಮ್ಮ ಎರಡೂ ಫೋನ್ಗಳು ಹ್ಯಾಕ್ ಆಗಿವೆ" ಎಂದು ಉಪೇಂದ್ರ ವಿವರಿಸಿದರು.
*21*927...... ಯಿಂದ ಆರಂಭವಾಗುವ ಈ ನಂಬರ್ನಿಂದ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಫೋನ್ಗಳು ಹ್ಯಾಕ್ ಆಗಿವೆ. ಜೊತೆಗೆ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.