ಕಂಗನಾ ಸಾಫ್ಟ್ ಪೋರ್ನ್ ಸ್ಟಾರ್ ಹೇಳಿಕೆ ನಂತರ ನಟಿ ಊರ್ಮಿಳಾ ಮಾತೊಂಡ್ಕರ್ ಟ್ವೀಟ್

ಟಿವಿ ಸಂದರ್ಶನವೊಂದರಲ್ಲಿ ನಟಿ ಕಂಗನಾ ರನೌತ್ ಅವರು ಉರ್ಮಿಳಾರನ್ನು ಸಾಫ್ಟ್ ಪೋರ್ನ್ ಸ್ಟಾರ್ ಎಂದು ವ್ಯಂಗ್ಯವಾಗಿ ಕರೆದ ನಂತರ ಅವರನ್ನು ಬೆಂಬಲಿಸಿದ ಜನರಿಗೆ ಉರ್ಮಿಳಾ ಶುಕ್ರವಾರ ಕೃತಜ್ಞತೆ ಸಲ್ಲಿಸಿದ್ದಾರೆ.

Updated: Sep 18, 2020 , 06:04 PM IST
ಕಂಗನಾ ಸಾಫ್ಟ್ ಪೋರ್ನ್ ಸ್ಟಾರ್ ಹೇಳಿಕೆ ನಂತರ ನಟಿ ಊರ್ಮಿಳಾ ಮಾತೊಂಡ್ಕರ್ ಟ್ವೀಟ್

ನವದೆಹಲಿ: ಟಿವಿ ಸಂದರ್ಶನವೊಂದರಲ್ಲಿ ನಟಿ ಕಂಗನಾ ರನೌತ್ ಅವರು ಉರ್ಮಿಳಾರನ್ನು ಸಾಫ್ಟ್ ಪೋರ್ನ್ ಸ್ಟಾರ್ ಎಂದು ವ್ಯಂಗ್ಯವಾಗಿ ಕರೆದ ನಂತರ ಅವರನ್ನು ಬೆಂಬಲಿಸಿದ ಜನರಿಗೆ ಉರ್ಮಿಳಾ ಶುಕ್ರವಾರ ಕೃತಜ್ಞತೆ ಸಲ್ಲಿಸಿದ್ದಾರೆ.

ಡ್ರಗ್ಸ್ ನ ಮೂಲವಾದ ಹಿಮಾಚಲದಿಂದಲೇ ಕಂಗನಾ ಹೋರಾಟ ಪ್ರಾರಂಭಿಸಲಿ- ಉರ್ಮಿಳಾ ಮಾತೋಂಡ್ಕರ್

ಇತ್ತೀಚಿಗೆ ನಟಿ ಕಂಗನಾ ರನೌತ್ ಮುಂಬೈ ನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆದಿದ್ದಕ್ಕಾಗಿ ಅವರ ವಿರುದ್ಧ ಪರೋಕ್ಷವಾಗಿ ನಟಿ ಉರ್ಮಿಳಾ ವಾಗ್ದಾಳಿ ನಡೆಸಿದರು.ಉರ್ಮಿಳಾ ವಿರುದ್ಧದ ವಿವಾದಾತ್ಮಕ ಹೇಳಿಕೆಗೆ ಬಾಲಿವುಡ್ ನಿಂದ ತೀವ್ರ ಟೀಕೆಗಳು ವ್ಯಕ್ತವಾದವು.ಅಷ್ಟೇ ಅಲ್ಲದೆ ಉರ್ಮಿಳಾ ಬೆಂಬಲಕ್ಕೆ ರಾಮ್ ಗೋಪಾಲ್ ವರ್ಮಾ, ಚಲನಚಿತ್ರ ನಿರ್ಮಾಪಕ ಅನುಭವ್ ಸಿನ್ಹಾ ಮತ್ತು ನಟ ಸ್ವರಾ ಭಾಸ್ಕರ್ ಸೇರಿದಂತೆ ಹಲವರು ನಿಂತರು.

ಈಗ ಈ ಬೆಂಬಲಕ್ಕೆ ಧನ್ಯವಾದಗಳನ್ನು ವ್ಯಕ್ತಪಡಿಸಿ' ಪಕ್ಷಪಾತವಿಲ್ಲದ, ಘನತೆಯ ಮಾಧ್ಯಮಗಳ ಅಪರೂಪದ ತಳಿ ಹಾಗೂ ಭಾರತದ ನಿಜವಾದ ಜನರ ನನ್ನ ಬೆಂಬಲ ನಿಂತಿರುವುದಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ಇದು ನಕಲಿ ಐಟಿ ಟ್ರೋಲ್‌ಗಳು ಮತ್ತು ಪ್ರಚಾರದ ವಿರುದ್ಧದ ನಿಮ್ಮ ಗೆಲುವು' ಎಂದು ಬರೆದುಕೊಂಡಿದ್ದಾರೆ