ನಟಿ ಊರ್ವಶಿ ರೌಟೇಲಾ ಜೊತೆ ಓರಿ ಮದುವೆ? ವೈರಲ್‌ ಫೋಟೋ ಕಂಡು ಫ್ಯಾನ್ಸ್‌ ಶಾಕ್‌!

Urvashi Rautela to marry Orry: ಬಾಲಿವುಡ್‌ ಖ್ಯಾತ ನಟಿ ಊರ್ವಶಿ ರೌಟೇಲಾ ಮದುವೆ ಸುದ್ದಿ ಸಖತ್‌ ಸದ್ದು ಮಾಡುತ್ತಿದೆ. 

Written by - Chetana Devarmani | Last Updated : Feb 25, 2025, 08:40 AM IST
  • ಬಾಲಿವುಡ್‌ ಖ್ಯಾತ ನಟಿ ಊರ್ವಶಿ ರೌಟೇಲಾ
  • ಊರ್ವಶಿ ರೌಟೇಲಾ ಮದುವೆ ಸುದ್ದಿ
  • ನಟಿ ಊರ್ವಶಿ ರೌಟೇಲಾ ಜೊತೆ ಓರಿ ಮದುವೆ?
ನಟಿ ಊರ್ವಶಿ ರೌಟೇಲಾ ಜೊತೆ ಓರಿ ಮದುವೆ? ವೈರಲ್‌ ಫೋಟೋ ಕಂಡು ಫ್ಯಾನ್ಸ್‌ ಶಾಕ್‌!
Urvashi Rautela

Urvashi Rautela to marry Orry: ಬಾಲಿವುಡ್‌ ಖ್ಯಾತ ನಟಿ ಊರ್ವಶಿ ರೌಟೇಲಾ ಮದುವೆ ಸುದ್ದಿ ಸಖತ್‌ ಸದ್ದು ಮಾಡುತ್ತಿದೆ. ಸದ್ಯ 'ಡಾಕು ಮಹಾರಾಜ್' ಚಿತ್ರದ ಮೂಲಕ ಸುದ್ದಿ ಮಾಡುತ್ತಿದ್ದಾರೆ. 'ಓರಿ' ಎಂದು ಕರೆಯಲ್ಪಡುವ ಓರ್ಹಾನ್ ಅವತ್ರಮಣಿಯ ಒಂದು ಕಾಮೆಂಟ್‌ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ. 

Add Zee News as a Preferred Source

ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಊರ್ವಶಿ ರೌಟೇಲಾ ಮತ್ತು ಓರಿ ನಡುವಿನ ಸಂಭಾಷಣೆ ನೆಟಿಜನ್‌ಗಳಲ್ಲಿ ಅವರು ಮದುವೆಯಾಗಬಹುದಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಭಾನುವಾರ ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ವೀಕ್ಷಿಸಲು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕೂಡ ಆಗಮಿಸಿದ್ದರು. ಊರ್ವಶಿ ಜೊತೆ ಓರಿ ಕೂಡ ಕಾಣಿಸಿಕೊಂಡಿದ್ದರು. ಪಂದ್ಯ ಗೆದ್ದ ಸಂಭ್ರಮದಲ್ಲಿ ಇಬ್ಬರೂ ಕ್ರೀಡಾಂಗಣದಲ್ಲಿ ನೃತ್ಯ ಮಾಡುತ್ತಿದ್ದಾಗ, ಓರಿ ಊರ್ವಶಿಗೆ ಮುತ್ತಿಟ್ಟರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಓರಿ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Orhan Awatramani (@orry)

 

ಇದನ್ನೂ ಓದಿ: ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ; ಕನ್ನಡ & ಇಂಗ್ಲಿಷ್‌ನಲ್ಲಿ ಯಶ್ ʼಟಾಕ್ಸಿಕ್ʼ ಶೂಟಿಂಗ್!!

ಬಾಲಿವುಡ್‌ನ 'BFF' ಎಂದೇ ಕರೆಯಲ್ಪಡುವ ಓರಿ ಜೊತೆಗಿನ ಚಾಟ್‌ನಿಂದಾಗಿ ಊರ್ವಶಿ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಆಧಾರ್ ಜೈನ್ ಮತ್ತು ಅಲೇಖಾ ಅಡ್ವಾಣಿ ಅವರ ವಿವಾಹದ ಫೋಟೋಗಳನ್ನು ಓರಿ ಹಂಚಿಕೊಂಡಿದ್ದರು. ಅದರಲ್ಲಿ ಕೆಂಪು ಕುರ್ತಾ, ನೆಹರೂ ಜಾಕೆಟ್, ಬಿಳಿ ಪ್ಯಾಂಟ್ ಧರಿಸಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Orhan Awatramani (@orry)

 

ಈ ಫೋಟೋಗಳ ಬದಲು ಹೆಚ್ಚು ಗಮನ ಸೆಳೆದದ್ದು ಕಾಮೆಂಟ್‌ ವಿಭಾಗ. 'ನಿಮ್ಮ ಮದುವೆ ನೋಡಲು ನಾನು ಕಾತುರಳಾಗಿದ್ದೇನೆ' (Canʼt wait to attend your marriage) ಎಂದು ಊರ್ವಶಿ ರೌಟೇಲಾ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಓರಿ ತಮಾಷೆಯಾಗಿ 'ನಮ್ಮದು' (*our) ಎಂದು ಬರೆದಿದ್ದಾರೆ. 

Urvashi Rautela to marry Orry

ಊರ್ವಶಿ ರೌಟೇಲಾ ಮತ್ತು ಓರಿ ನಡುವಿನ ತಮಾಷೆಯ ಸಂಭಾಷಣೆಯನ್ನು ನೆಟಿಜನ್‌ಗಳು ತಕ್ಷಣ ಗಮನಿಸಿದರು. ಅವರ ಸಂಭಾಷಣೆಯ ಸ್ಕ್ರೀನ್‌ಶಾಟ್ ರೆಡ್ಡಿಟ್‌ನಲ್ಲಿ ವೈರಲ್‌ ಆಯಿತು. ಇದಕ್ಕೆ ನೆಟ್ಟಿಜನ್‌ಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ: ನಾನು ತುಂಬಾ ದೊಡ್ಡ ಮೋಸ ಹೋಗಿದ್ದೇನೆ.. ನಿಕ್‌ ಜೋನಾಸ್‌ ಜೊತೆ ಸಂಬಂಧವೇ ಬೇಡ ಎಂದಿದ್ದೇಕೆ ಪ್ರಿಯಾಂಕಾ ಚೋಪ್ರಾ!?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News