ಈ ನಟಿಗೆ ಪಿ.ಟಿ.ಉಷಾ ಕುರಿತ ಜೀವನ ಚರಿತ್ರೆ ಚಿತ್ರದಲ್ಲಿ ನಟಿಸಬೇಕಂತೆ...!

ಕನ್ನಡದಲ್ಲಿ ದರ್ಶನ ಜೊತೆ ಐರಾವತ ಸಿನಿಮಾದಲ್ಲಿ ನಟಿಸಿದ್ದ ಊರ್ವಶಿ ರೌತೇಲಾಗೆ ಈಗ ಜೀವನ ಬಯೋಪಿಕ್ ಸಿನಿಮಾದಲ್ಲಿ ನಟಿಸಬೇಕಂತೆ, ಅದರಲ್ಲೂ ಅವರು ಓಟದ ರಾಣಿ ಎಂದೇ ಖ್ಯಾತಿ ಪಡೆದ ಪಿಟಿ ಉಷಾ ಅವರ ಪಾತ್ರವನ್ನು ಅವರು ನಿಭಾಯಿಸಲು ಆಸಕ್ತಿ ತೋರಿದ್ದಾರೆ.

Updated: Nov 6, 2019 , 06:37 PM IST
 ಈ ನಟಿಗೆ ಪಿ.ಟಿ.ಉಷಾ ಕುರಿತ ಜೀವನ ಚರಿತ್ರೆ ಚಿತ್ರದಲ್ಲಿ ನಟಿಸಬೇಕಂತೆ...!

ನವದೆಹಲಿ: ಕನ್ನಡದಲ್ಲಿ ದರ್ಶನ ಜೊತೆ ಐರಾವತ ಸಿನಿಮಾದಲ್ಲಿ ನಟಿಸಿದ್ದ ಊರ್ವಶಿ ರೌತೇಲಾಗೆ ಈಗ ಜೀವನ ಬಯೋಪಿಕ್ ಸಿನಿಮಾದಲ್ಲಿ ನಟಿಸಬೇಕಂತೆ, ಅದರಲ್ಲೂ ಅವರು ಓಟದ ರಾಣಿ ಎಂದೇ ಖ್ಯಾತಿ ಪಡೆದ ಪಿಟಿ ಉಷಾ ಅವರ ಪಾತ್ರವನ್ನು ಅವರು ನಿಭಾಯಿಸಲು ಆಸಕ್ತಿ ತೋರಿದ್ದಾರೆ.

ಈಗ ಅವರು ಏಕಾಏಕಿ ಕ್ರೀಡಾ ಹಿನ್ನಲೆಯನ್ನು ಹೊಂದಿರುವ ವ್ಯಕ್ತಿಯೊಬ್ಬರ ಚಿತ್ರದಲ್ಲಿ ನಟಿಸಲು ಅವರು ಉತ್ಸಾಹ ತೋರಿರುವುದಕ್ಕೆ ಅವರು ತಮ್ಮ ಕ್ರೀಡಾ ಹಿನ್ನಲೆಯನ್ನು ವಿವರಿಸಿದ್ದಾರೆ. 

'ನಾನು ಕ್ರೀಡಾಪಟು ಎಂದು ಅನೇಕ ಜನರಿಗೆ ತಿಳಿದಿಲ್ಲ. ನಾನು ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್ ತಂಡದ ನಾಯಕಿ. ಆದ್ದರಿಂದ ಪಿಟಿ ಉಷಾ ಪಾತ್ರಕ್ಕಾಗಿ ನನಗಿಂತ ಉತ್ತಮ ಆಯ್ಕೆಯಾಗಲು ಯಾರೂ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ, ನಾನು ರೇಸರ್ ಆಗಿದ್ದೇನೆ. ನಾನು ಸಾಕಷ್ಟು ಅಡೆತಡೆಗಳು ಮತ್ತು ರೇಸ್‌ಗಳಲ್ಲಿ ಭಾಗವಹಿಸಿದ್ದೇನೆ ಮತ್ತು ಹಲವನ್ನು ಗೆದ್ದಿದ್ದೇನೆ. ಆದ್ದರಿಂದ, ನಾನು ಯಾವುದೇ ಕ್ರೀಡಾ ವ್ಯಕ್ತಿ ಕುರಿತ ಜೀವನ ಚರಿತ್ರೆಗೆ ಹೊಂದಿಕೊಳ್ಳುತ್ತೇನೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ಚಲನಚಿತ್ರ ತಯಾರಕರು ನನಗೆ ತರಬೇತಿ ನೀಡುವಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ, ಎಂದು ತಿಳಿಸಿದರು.

ಈಗ ಪಿಟಿ ಉಷಾ ಅವರ ಪಾತ್ರಕ್ಕಾಗಿ ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಅವರಂತಹ ನಾಯಕಿಯರ ಹೆಸರುಗಳು ಕೇಳಿಬರುತ್ತಿವೆ. ಆದಾಗ್ಯೂ ಇದುವರೆಗೆ ಯಾವುದೇ ಅಂತಿಮಗೊಂಡಿಲ್ಲ ಎನ್ನಲಾಗಿದೆ. ಸದ್ಯ ಊರ್ವಶಿ ಅವರು ಪಾಗಲ್ಪಂತಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ, ಇದು ಅನೀಸ್ ಬಾಜ್ಮೀ ನಿರ್ದೇಶನದ ಹಾಸ್ಯ ಚಿತ್ರವಾಗಿದೆ.