ರಾಜಾ.. ರಾಜಾ.. ‘ಕನ್ಯಾಸೆರೆಗೆ ನನ್ನ...’ ಅಪಾರ್ಥ ಮಾಡಿಕೊಂಡಿದ್ದವರಿಗೆ ನಿಜವಾದ ಅರ್ಥ ತಿಳಿಸಿದ ವಿ. ಮನೋಹರ್..!

Raja Raja kanasina raja song : ಸಂಗೀತ ನಿರ್ದೇಶಕ ವಿ. ಮನೋಹರ್‌ ಇತ್ತೀಚಿಗೆ ಸಂದರ್ಶನೊಂದರಲ್ಲಿ "ಪ್ರೀತ್ಸೋದ್‌ ತಪ್ಪಾ" ಸಿನಿಮಾದ ಹಾಡೊಂದರ ಕುರಿತು ಮಾತನಾಡಿದ್ದು, ಇಷ್ಟು ದಿನ ಅಪಾರ್ಥ ಮಾಡಿಕೊಂಡು ಹಾಡುತ್ತಿದ್ದ ಜನರ ಬಾಯಿ ಮುಚ್ಚಿಸುವ ಕೆಲ ಮಾಡಿದ್ದಾರೆ. 

Written by - Krishna N K | Last Updated : Jun 23, 2025, 04:23 PM IST
    • 'ಪ್ರೀತ್ಸೋದ್ ತಪ್ಪಾ' ಸಿನಿಮಾ 1998ರಲ್ಲಿ ತೆರೆಕಂಡಿತು.
    • 'ರಾಜಾ ರಾಜಾ' ಹಾಡು ಇಂದಿಗೂ ಫೇಮಸ್‌ ಆಗಿತ್ತು.
    • 1998ರಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿತ್ತು.
ರಾಜಾ.. ರಾಜಾ.. ‘ಕನ್ಯಾಸೆರೆಗೆ ನನ್ನ...’ ಅಪಾರ್ಥ ಮಾಡಿಕೊಂಡಿದ್ದವರಿಗೆ ನಿಜವಾದ ಅರ್ಥ ತಿಳಿಸಿದ ವಿ. ಮನೋಹರ್..!

V Manohar preetsood thappa : 'ಪ್ರೀತ್ಸೋದ್ ತಪ್ಪಾ' ಸಿನಿಮಾ 1998ರಲ್ಲಿ ತೆರೆಕಂಡಿತು. ಈ ಸಿನಿಮಾದ 'ರಾಜಾ ರಾಜಾ' ಹಾಡು ಇಂದಿಗೂ ಫೇಮಸ್‌. ಆದರೆ ಈ ಹಾಡಿನಲ್ಲಿ ಬರುವ 'ಕನ್ಯಾಸೆರೆಗೆ ನನ್ನ..' ಎಂಬ ಸಾಲನ್ನು ಕೆಲವು ಜನರು ಅಶ್ಲೀಲವೆಂದು ಅಪಾರ್ಥ ಮಾಡಿಕೊಂಡಿದ್ದರು.. ಇದೂಗ 27 ವರ್ಷಗಳ ನಂತರ ಕೊನೆಗೂ ಈ ಸಾಲಿನ ನಿಜ ಅರ್ಥವನ್ನು ಮನೋಹರ್ ಅವರು ತಿಳಿಸಿದ್ದಾರೆ. 

Add Zee News as a Preferred Source

ಹೌದು.. ಕ್ರೇಜಿ ಸ್ಟಾರ್‌ ವಿ ರವಿಚಂದ್ರನ್ ಮತ್ತು ಬಿಟೌನ್‌ ಸುಂದರಿ ಶಿಲ್ಪಾ ಶೆಟ್ಟಿ ನಟನೆಯ 'ಪ್ರೀತ್ಸೋದ್ ತಪ್ಪಾ' ಸಿನಿಮಾ 1998ರಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿತ್ತು. ರವಿಚಂದ್ರನ್ ನಿರ್ದೇಶನದ ಈ ಸಿನಿಮಾಗೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತವಿದೆ. 

ಇದನ್ನೂ ಓದಿ:"ಕಾಳಿ ದೇವತೆ ಅವತಾರ"ದಲ್ಲಿ "ಶಿಲುಬೆ" ನೆಕ್ಕಿ, ಸಿಕ್ಕ ಸಿಕ್ಕ ಸ್ಥಳದಲ್ಲಿ ಇಟ್ಟುಕೊಂಡ ಗಾಯಕಿ..! ಹೊಸ ವಿವಾದ ಸೃಷ್ಟಿಸಿದ ರ‍್ಯಾಪರ್ ವಿಡಿಯೋ

ಈ ಸಿನಿಮಾದ ಎಲ್ಲಾ ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು. ಈ ಪೈಕಿ ರಾಜಾ ರಾಜಾ ಹಾಡು ಹೆಚ್ಚು ಗಮನ ಸೆಳೆದಿತ್ತು. ಅಲ್ಲದೆ, ಈ ಹಾಡಿನ ಸಾಲೊಂದು ಅಪಾರ್ಥಕ್ಕೆ ಕಾರಣವಾಗಿತ್ತು. ಇದೀಗ ಈ ಕುರಿತು ಸಂಗೀತ ನಿರ್ದೇಶಕ ವಿ. ಮನೋಹರ್‌ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.

'ಪ್ರೀತ್ಸೋದ್ ತಪ್ಪಾ' ನಾಯಕಿ ತನ್ನ ಕನಸಿನ ಹುಡುಗ ಹೇಗೆ ಇರಬೇಕು ಎನ್ನುವ ಕುರಿತು ವರ್ಣಿಸುವ ಹಾಡೊಂದು ಇದೆ. 'ರಾಜಾ.. ರಾಜಾ.. ಹೆಂಗಿರಬೇಕು ಗೊತ್ತಾ ನನ್ನ ರಾಜಾ..' ಅಂತ ಈ ಹಾಡು ಪ್ರಾರಂಭವಾಗುತ್ತದೆ.. ಈ ಸಾಂಗ್‌ಗೆ ಅನುರಾಧಾ ಶ್ರೀರಾಮ್ ಧ್ವನಿ ನೀಡಿದ್ದಾರೆ. ಆದರೆ ಈ ಹಾಡಿನ ಮಧ್ಯದಲ್ಲಿ ಬರುವ ಒಂದು ಸಾಲು ಬಹಳಷ್ಟು ಅಪಾರ್ಥಕ್ಕೆ ಗುರಿಯಾಗಿತ್ತು.

ಇದನ್ನೂ ಓದಿ:"ಒಂದು ವರ್ಷದಲ್ಲಿ ಬಾಲಿವುಡ್‌ನ ಆ ಸ್ಟಾರ್‌ ಜೋಡಿ ವಿಚ್ಛೇದನ ಪಡೆದು ದೂರವಾಗುತ್ತಾರೆ" ಬಿಟೌನ್‌ನಲ್ಲಿ ಸಂಚಲನ ಸೃಷ್ಟಿಸಿದ ಖ್ಯಾತ ಜ್ಯೋತಿಷಿಯ ಶಾಕಿಂಗ್‌ ಭವಿಷ್ಯ

ಹೌದು... ರಾಜಾ ರಾಜಾ ಹಾಡಿನ ಮಧ್ಯ.. "ಕನ್ಯಾ ಸೆರೆಗೆ ನನ್ನ ಟಾಟಾ ಚೇರಿಯೋ" ಎಂಬ ಸಾಲಿದೆ.. ಟಾಟಾ ಚೇರಿಯೋ ಎಂಬ ಪದವನ್ನು ಕೆಲ ಪೋಲಿಗಳು ಅಶ್ಲೀಲವಾಗಿ ಪರಿವರ್ತನೆ ಮಾಡಿ ಹಾಡುತ್ತಿದ್ದರು. ಇದು ಸೋಷಿಯಲ್‌ ಮೀಡಿಯಾದಲ್ಲಿಯೂ ಸಹ ವೈರಲ್‌ ಆಗಿತ್ತು.. 

ಈ ಕುರಿತು ಸ್ಪಷ್ಟತೆ ನೀಡಿದ ವಿ. ಮನೋಹರ್‌, "ಟಾಟಾ ಚೀರಿಯೋ" ಎಂದರೆ, ವಿದಾಯ ಅಂತ ಅರ್ಥ.. ಟಾಟಾ ಎನ್ನುವುದು ನಾವು ಸಾಮಾನ್ಯವಾಗಿ ಹೇಳುವ ಟಾಟಾ ಬೈ ಬೈ ಎಂಬ ಪದ.. ಒಟ್ಟಾರೆಯಾಗಿದೆ ಟಾಟಾ ಚೇರಿಯೋ ಅಂದ್ರೆ ಕನ್ಯತ್ವಕ್ಕೆ ವಿದಾಯ ಎಂಬ ಅರ್ಥವನ್ನು ಸೂಚಿಸುತ್ತೆ ಅಂತ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News