ಕಿರುತೆರೆ ನಟನಿಗೆ ತೀವ್ರ ಅನಾರೋಗ್ಯ! ಚಿಕಿತ್ಸೆಯ ಸಹಾಯಕ್ಕಾಗಿ ಅಂಗಲಾಚಿದ ಶ್ರೀಧರ್‌

Actor Sridhar: ಕಿರುತೆರೆ ನಟ ಶ್ರೀಧರ್‌ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ಚಿಕಿತ್ಸೆಯ ಸಹಾಯಕ್ಕಾಗಿ ಅಂಗಲಾಚಿದ್ದಾರೆ.  

Written by - Zee Kannada News Desk | Last Updated : Apr 24, 2025, 06:25 PM IST
  • ಈ ಕ್ಷಣ ನಮ್ಮೊಂದಿಗೆ ನಗು ನಗುತ್ತಾ ಇರುವವರು ನಾಳೆ ನಮ್ಮೊಂದಿಗೆ ಇಲ್ಲದೇ ಹೋಗಬಹುದು.
  • ಇದಕ್ಕೆ ಬೆಸ್ಟ್‌ ಉದಾಹರಣೆ ಅಂದ್ರೆ ಅದು ಕಿರುತೆರೆ ನಟ ಶ್ರೀಧರ್‌.
  • ಸದ್ಯ ಚಿಕಿತ್ಸೆ ಪಡೆಯುತ್ತಿರುವ ಶ್ರೀಧರ್‌, ತೀವ್ರವಾದ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದಾರೆ.
ಕಿರುತೆರೆ ನಟನಿಗೆ ತೀವ್ರ ಅನಾರೋಗ್ಯ! ಚಿಕಿತ್ಸೆಯ ಸಹಾಯಕ್ಕಾಗಿ ಅಂಗಲಾಚಿದ ಶ್ರೀಧರ್‌

Actor Sridhar: ಜೀವನ ಯಾವಗ, ಹೇಗೆ? ಯಾರೊಂದಿಗೆ ಆಟವಾಡುತ್ತದೆ ಎಂಬುದು ಗೊತ್ತಿಲ್ಲ. ಈ ಕ್ಷಣ ನಮ್ಮೊಂದಿಗೆ ನಗು ನಗುತ್ತಾ ಇರುವವರು ನಾಳೆ ನಮ್ಮೊಂದಿಗೆ ಇಲ್ಲದೇ ಹೋಗಬಹುದು. ಇಂದು ತಿಂದು ಗಡದ್ದಾಗಿ ಗಟ್ಟು ಮುಟ್ಟಾಗಿ ಇರುವವರು ನಾಳೆ ಹಾಸಿಗೆ ಹಿಡಿಯಬಹುದು. ವಿಧಿಯ ಆಟ ಬಲ್ಲವರಾರು ಎಂಬಂತೆ, ನಮ್ಮ ಹಣೆಯಲ್ಲಿ ಮರು ಕ್ಷಣ ಏನು ಬರಿದಿರುತ್ತದೆ ಎಂಬುದು ಯಾರಿಂದಲೂ ಊಹಿಸೋಕೆ ಸಾಧ್ಯವಾಗುವುದಿಲ್ಲ. 

Add Zee News as a Preferred Source

ಇದಕ್ಕೆ ಬೆಸ್ಟ್‌ ಉದಾಹರಣೆ ಅಂದ್ರೆ ಅದು ಕಿರುತೆರೆ ನಟ ಶ್ರೀಧರ್‌. ಹೌದು, ನಟ ಶ್ರೀಧರ್‌ ನಿನ್ನೆ ಮೊನ್ನೆಯವರೆಗೂ ಚೆನ್ನಾಗಿಯೇ ಇದ್ದರು, ದಿಢೀರನೇ ಅದೇನಾಯ್ತೋ ಏನೋ ಹಾಸಿಗೆ ಹಿಡಿದು ಬಿಟ್ಟಿದ್ದಾರೆ. ʻವಧುʼ ಎಂಬ ಸೀರಿಯಲ್‌ನಲ್ಲಿ ನಟಿ ಶ್ರೀಧರ್‌ ನಾಯಕಿಯ ಚಿಕ್ಕಪ್ಪನ ಪಾತ್ರವನ್ನು ನಿರ್ವಹಿಸಿದ್ದರು. ಹೀಗೆ ಧಾರವಾಯಿಯಂತೂ ಅದ್ಭುತವಾಗಿ ಪ್ರಸಾರವಾಗುತ್ತಿತ್ತು, ನಟ ಶ್ರೀಧರ್‌ ಅವರು ಅಭಿನಯಿಸುತ್ತಿದ್ದ ಪಾತ್ರಕ್ಕಂತೂ ವಿಶೇಷವಾದ ಫ್ಯಾನ್ಸ್‌ ಬೇಸ್‌ ಇತ್ತು. ಆದರೆ ದಿಢೀರನೇ, ಶ್ರೀಧರ್‌ ಮಾತ್ರ ಆ ಪಾತ್ರದಿಂದ ನಾಪತ್ತೆಯಾಗಿದ್ದರು, ಅವರ ಪಾತ್ರಕ್ಕೆ ಬೇರೊಬ್ಬರನ್ನೂ ಕೂಡ ಕರೆತರಲಾಗಿತ್ತು, ಈ ಎಲ್ಲದಕ್ಕೂ ಕಾರಣ ಬೇರೇನು ಅಲ್ಲ, ಅವರನ್ನು ಸದ್ಯ ಕಾಡುತ್ತಿರುವ ಇದೇ ಆರೋಗ್ಯ ಸಮಸ್ಯೆ.

ಇದನ್ನೂ ಓದಿ:ಮಗಳೇ ಎಂದಿದ್ದ ಸೈಫ್‌ ಅಲಿ ಖಾನ್‌ ಮೇಲೆ ಕರೀನಾ ಕಪೂರ್‌ಗೆ ಲವ್‌ ಆದಾಗ ಹೇಗೆ ಹೇಳಿದ್ದರು... ಅಕ್ಕ ಕರಿಷ್ಮಾ ಬಿಚ್ಚಿಟ್ಟ ಗುಟ್ಟು!

ಬೆಂಗಳೂರಿನ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್‌  ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಶ್ರೀಧರ್‌, ತೀವ್ರವಾದ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದಾರೆ, ಈ ಇನ್‌ಫೆಕ್ಷನ್‌ ಶ್ರೀಧರ್‌ ಅವರನ್ನು ತೀವ್ರ ಅಸ್ವಸ್ಥರನ್ನಾಗಿ ಮಾಡಿದೆ. ಇದೇ ಕಾರಣದಿಂದ ಸೀರಿಯಲ್‌ ಶೂಟಿಂಗ್‌ಗೂ ಹಾಜರ್‌ ಆಗದ ಶ್ರೀಧರ್‌ ಸದ್ಯ, ಆಸ್ಪತ್ರೆ ಸೇರಿಕೊಂಡಿದ್ದಾರೆ.

ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ನಟ ಶ್ರೀಧರ್‌ ಹಲವು ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರಂತೆ, ಇದೇ ಕಾರಣದಿಂದ, ಅವರು ತಮ್ಮ ಬಳಿ ಇದ್ದ ಹಣವನ್ನೆಲ್ಲಾ ಖರ್ಚು ಮಾಡಿ ಬಿಟ್ಟಿದ್ದಾರೆಂತೆ. ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆಗೆ ಒಂದು ದಿನಕ್ಕೆ ಇಲ್ಲಾ ಅಂದ್ರೂ 10ರಿಂದ 15 ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ನಟ ಶ್ರೀಧರ್‌ ಹಣದ ಸಹಾಯ ಕೇಳಿ ಅಂಗಲಾಚಿದ್ದಾರೆ. 

ಇದನ್ನೂ ಓದಿ:ʻಆ ಹಿರಿಯ ನಟ ಸಿನಿಮಾ ಸೆಟ್‌ನಲ್ಲೇ ನನಗೆ ಬೆದರಿಕೆ ಹಾಕಿದ್ದರು..ʼ : ನಟಿ ಮೀನಾ

ಕಿಚ್ಚ ಸುದೀಪ್‌ ನಟನೆಯ ʻಮ್ಯಾಕ್ಸ್‌ʼ ಸಿನಿಮಾದಲ್ಲಿ ಅಷ್ಟೇ ಅಲ್ಲದ, ʻಪಾರುʼ, ʻವಧುʼನಂತಹ ಹಲವಾರು ಸೀರಿಲ್‌ಗಳಲ್ಲಿಕೂಡ ಬಣ್ಣ ಹಚ್ಚಿರುವ ನಟ ಶ್ರೀಧರ್‌, ತಮ್ಮ ನಟನೆಯ ಮೂಲಕ ಮೋಡಿ ಮಾಡಿದವರು, ಇವರಿಗೆ ತಮ್ಮದೇ ಆದ ಫ್ಯಾನ್‌ ಬೇಸ್‌ ಇದೆ ಅಂದರೆ ತಪ್ಪಾಗಲಾರು. ಆದರೆ, ಇದೀಗ ನಟನಿಗೆ ಈ ರೀತಿಯಾಗಿರುವುದು ಪ್ರೇಕ್ಷಕರ ಕೈಯಲ್ಲ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಸದ್ಯ ನಟ ಹಣದ ಸಹಾಯಕ್ಕಾಗಿ ಅಂಗಲಾಚತ್ತಿರುವುದನ್ನು ನೋಡಿದ ಅಭಿಮಾನಿಳಂತೂ ಸಿಕ್ಕಾಪಟ್ಟೆ ಬೇಸರಗೊಂಡಿದ್ದಾರೆ.

ಇದೀಗ ನಟನ ಚಿಕಿತ್ಸೆಗಾಗಿ ಕಿರುತೆರೆ ನಟಿ ಸಪ್ನಾ ದೀಕ್ಷಿತ್‌ ಹಾಗೂ ಬಿಗ್‌ ಬಾಸ್‌ ಖ್ಯಾತ ರಘು ವ್ನ್‌ ಸ್ಟೋರ್‌ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಫೋಸ್ಟ್‌ ಅನ್ನು ಹಂಚಿಕೊಂಡು, ನಟನಿಗೆ ಸಹಾಯ ಮಾಡುವಂತೆ ಕೇಳಿ ಕೊಂಡಿದ್ದಾರೆ.

ಇದನ್ನೂ ಓದಿ: Film Facts : ಅಣ್ರಾವ್ರನ್ನ ಬಿಟ್ಟು ಭಾರತೀಯ ಯಾವ ನಾಯಕ ನಟರಿಗೂ ಈ ಗೌರವ ಇಂದಿಗೂ ಸಂದಿಲ್ಲ..

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News