ಬಾಡಿಬಿಲ್ಡ್‌ರ್‌ನ ಪ್ರಾಣವನ್ನೇ ಕಸಿದುಕೊಂಡ ಶಸ್ತ್ರಚಿಕಿತ್ಸೆ, ಸಲ್ಮಾನ್‌ಖಾನ್‌ನೊಂದಿಗೆ ಅಭಿನಯಿಸಿದ್ದ ನಟ ಹೃದಯಾಘಾತದಿಂದ ಸಾವು

Varinder Ghuman: ಪಂಜಾಬ್‌ನ ಉಕ್ಕಿನ ಮನುಷ್ಯ ಎಂದು ಹೆಸರುವಾಸಿಯಾಗಿರುವ ಖ್ಯಾತ ಬಾಡಿಬಿಲ್ಡರ್‌ ಶಸ್ತ್ರಚಿಕಿತ್ಸೆಯಾದ 24 ಗಂಟೆಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  

Written by - Zee Kannada News Desk | Last Updated : Oct 10, 2025, 10:48 AM IST
  • ವರೀಂದರ್ ಅವರ ಜೀವನದ ಹಿನ್ನೆಲೆ ಪ್ರೇರಣಾದಾಯಕ
  • ವರೀಂದರ್ ಘುಮಾನ್ ಅವರು ಕೇವಲ ನಟರಲ್ಲ, ದೇಶದ ಹೆಮ್ಮೆಯ ಬಾಡಿಬಿಲ್ಡರ್ ಆಗಿದ್ದರು
ಬಾಡಿಬಿಲ್ಡ್‌ರ್‌ನ ಪ್ರಾಣವನ್ನೇ ಕಸಿದುಕೊಂಡ ಶಸ್ತ್ರಚಿಕಿತ್ಸೆ, ಸಲ್ಮಾನ್‌ಖಾನ್‌ನೊಂದಿಗೆ ಅಭಿನಯಿಸಿದ್ದ ನಟ ಹೃದಯಾಘಾತದಿಂದ ಸಾವು

Varinder Ghuman: ಪಂಜಾಬ್‌ನ ಖ್ಯಾತ ಬಾಡಿಬಿಲ್ಡರ್ ಮತ್ತು ನಟ ವರೀಂದರ್ ಘುಮಾನ್ ಅವರ ಆಕಸ್ಮಿಕ ಸಾವು ಮನರಂಜನಾ ಕ್ಷೇತ್ರದಲ್ಲಿ ಆಘಾತ ಮೂಡಿಸಿದೆ. ಕೇವಲ 41ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಶಸ್ತ್ರಚಿಕಿತ್ಸೆಯ ಸಮಯದಲ್ಲೇ ಹೃದಯಾಘಾತ ಸಂಭವಿಸಿ ಅವರು ನಿಧನರಾದರು ಎಂದು ವರದಿಯಾಗಿದೆ. ವರೀಂದರ್ ಅವರನ್ನು ಭುಜದ ಶಸ್ತ್ರಚಿಕಿತ್ಸೆಗಾಗಿ ಅಮೃತಸರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಆರಂಭವಾಗುತ್ತಿದ್ದಂತೆಯೇ ಹೃದಯಾಘಾತ ಉಂಟಾಗಿ ಅವರ ಜೀವ ಕಳೆದುಕೊಂಡರು. ಈ ಘಟನೆ ಪಂಜಾಬಿ ಹಾಗೂ ಹಿಂದಿ ಸಿನಿರಂಗದಲ್ಲಿ ಭಾರೀ ದುಃಖದ ಅಲೆ ಹರಡಿಸಿದೆ.

Add Zee News as a Preferred Source

ವರೀಂದರ್ ಘುಮಾನ್ ಅವರು ಕೇವಲ ನಟರಲ್ಲ, ದೇಶದ ಹೆಮ್ಮೆಯ ಬಾಡಿಬಿಲ್ಡರ್ ಆಗಿದ್ದರು. ಸಸ್ಯಾಹಾರಿ ಆಹಾರದಿಂದಲೇ ದೇಹದಾರ್ಢ್ಯವನ್ನು ಕಾಪಾಡಿಕೊಂಡ ಅವರು ವಿಶ್ವದ ಮೊದಲ ಸಸ್ಯಾಹಾರಿ ಬಾಡಿಬಿಲ್ಡರ್ ಎಂದು ಗುರುತಿಸಿಕೊಂಡಿದ್ದರು. IFBB (ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಬಾಡಿಬಿಲ್ಡಿಂಗ್ ಅಂಡ್ ಫಿಟ್ನೆಸ್) ಪ್ರೊ ಕಾರ್ಡ್ ಪಡೆದ ಮೊದಲ ಭಾರತೀಯ ಬಾಡಿಬಿಲ್ಡರ್ ಆಗಿರುವ ಗೌರವ ಅವರದ್ದು. 2005ರಲ್ಲಿ “ಮಿಸ್ಟರ್ ಜಲಂಧರ್”, ನಂತರ “ಮಿಸ್ಟರ್ ಪಂಜಾಬ್”, ಹಾಗೂ 2008ರಲ್ಲಿ “ಮಿಸ್ಟರ್ ಇಂಡಿಯಾ” ಪ್ರಶಸ್ತಿಗಳನ್ನು ಗೆದ್ದು ಅವರು ದೇಶದ ಗಮನ ಸೆಳೆದಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ ವರೀಂದರ್ 2011ರಲ್ಲಿ ಆಸ್ಟ್ರೇಲಿಯನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಯಶಸ್ಸು ಕಂಡಿದ್ದರು. ಪಂಜಾಬಿ ಚಿತ್ರರಂಗದ ಜೊತೆಗೆ ಬಾಲಿವುಡ್‌ನಲ್ಲೂ ಅವರು ತಮ್ಮ ಗುರುತು ಮೂಡಿಸಿದ್ದರು. ಅವರು ಸಲ್ಮಾನ್ ಖಾನ್ ನಟಿಸಿದ ಟೈಗರ್ 3 ಮತ್ತು ಮರ್ಜಾವಾನ್ ಸಿನಿಮಾಗಳಲ್ಲೂ ಪಾತ್ರ ನಿರ್ವಹಿಸಿದ್ದರು.

ವರೀಂದರ್ ಅವರ ಜೀವನದ ಹಿನ್ನೆಲೆ ಸಹ ಪ್ರೇರಣಾದಾಯಕ. ಗುರುದಾಸ್ಪುರ್ ಜಿಲ್ಲೆಯಿಂದ ಬಂದ ಅವರು ಕ್ರೀಡಾ ಪರಂಪರೆಯ ಕುಟುಂಬದವರಾಗಿದ್ದರು. ಅಜ್ಜ ಹಾಕಿ ಆಟಗಾರ, ತಂದೆ ಕಬಡ್ಡಿ ಆಟಗಾರ. ಬಾಲ್ಯದಿಂದಲೇ ಹಾಲು ಮತ್ತು ತುಪ್ಪದಂತಹ ಆರೋಗ್ಯಕರ ಆಹಾರ ಸೇವಿಸುತ್ತಿದ್ದ ಅವರು ಸಸ್ಯಾಹಾರಿ ದೇಹದಾರ್ಢ್ಯ ಪಟುವಾಗುವ ಸ್ಫೂರ್ತಿಯನ್ನು ಪಡೆದಿದ್ದರು.
 

Trending News