ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದ ವರುಣ್ ಧವನ್ ! ವೀಡಿಯೋ ವೈರಲ್

ಬಾಲಿವುಡ್ ನಟ ವರುಣ್ ಧವನ್ ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದು ಹೇಳಿದ್ದಾರೆ. ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

Updated: Apr 16, 2019 , 03:30 PM IST
ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದ ವರುಣ್ ಧವನ್ !  ವೀಡಿಯೋ ವೈರಲ್
Photo courtesy: Instagram

ಮುಂಬಯಿ: ಬಾಲಿವುಡ್ ನಟ ವರುಣ್ ಧವನ್ ಅಂಡರ್ ವೇರ್ ತಮ್ಮ ಪಕ್ಷದ ಚಿಹ್ನೆಯಾಗಲಿ ಎಂದು ಹೇಳಿದ್ದಾರೆ. ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

ಕಪಿಲ್ ಶರ್ಮಾ ಶೋ ನಲ್ಲಿ ಕಳಂಕ ಚಿತ್ರದ ಪ್ರೊಮೋಷನ್ ಗಾಗಿ ಬಂದಿದ್ದ ವರುಣ್ ಧವನ್, ಅಲಿಯಾ ಭಟ್,ಆದಿತ್ಯರಾಯ್ ಕಪೂರ್ ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ವಿಚಾರವಾಗಿ ಜೋಕ್ಸ್ ಮಾಡುತ್ತಾ ತಮ್ಮ ಪಕ್ಷದ ಚಿಹ್ನೆ ಅಂಡರ್ ವೇರ್ ಆಗಿರಲಿ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಅಲ್ಲಿ ನೆರೆದಿದ್ದ ಇತರ ನಟ ನಟಿಯರೆಲ್ಲರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಇನ್ನೊಂದೆಡೆಗೆ ಅಲಿಯಾ ಭಟ್ ತಮ್ಮ ಚಿಹ್ನೆ ಪ್ಲೇಟ್ ಎಂದು ಹೇಳಿದರೆ, ಸೋನಾಕ್ಷಿ ಸಿನ್ಹಾ ತಮ್ಮ ತಂದೆಯವರ ಫೇಮಸ್ ಕಾಮೊಶ್ ಡೈಲಾಗ್ ಹೇಳಿದರು.

ಈ ಚಿತ್ರದಲ್ಲಿ ಕಲಾಂಕ್ ಮಾಧುರಿ ದೀಕ್ಷಿತ್-ನೆನೆ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಅಭಿಷೇಕ್ ವರ್ಮನ್ ನಿರ್ದೇಶಸಿದ್ದರೆ ಕರಣ್ ಜೋಹರ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಕಲಾಂಕ್ ಏಪ್ರಿಲ್ 17, 2019 ರಂದು ಬಿಡುಗಡೆಯಾಗಲಿದೆ.