ಕಂಚಿನ ಕಂಠದ ವಶಿಷ್ಟ ಸಿಂಹ ಕೆಲವೇ ನಿಮಿಷದ ಡಬ್ಬಿಂಗ್‌ಗೆ ಪಡೆಯುವ ಸಂಭಾವನೆ ಎಷ್ಟು ಕೋಟಿ ಗೊತ್ತೇ?

ಕೆಜಿಎಫ್‌ ಚಿತ್ರದ ಬಳಿಕ ವಸಿಷ್ಠರಿಗೆ ಕನ್ನಡ, ತೆಲುಗು ಸೇರಿ ಇತರ ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚಾಗಿವೆ. ತೆಲುಗಿನ ‘ಓದೆಲ-2’ ಚಿತ್ರ ಯಶಸ್ವಿಯಾಗಿದ್ದು, ಅವರ ಜನಪ್ರಿಯತೆಗೆ ಮತ್ತಷ್ಟು ಮೆರಗು ತಂದಿದೆ

Written by - Manjunath N | Last Updated : Jun 16, 2025, 04:45 PM IST
  • “ನನ್ನ ಧ್ವನಿ, ನನ್ನ ಸಮಯ, ಅವರ ಹಣ. ಇದು ಸಾಮಾನ್ಯ ವ್ಯಾಪಾರ. ತೆರಿಗೆ, ಜಿಎಸ್‌ಟಿಯನ್ನೂ ಕಟ್ಟುತ್ತೇವೆ,” ಎಂದು ಸಮರ್ಥಿಸಿಕೊಂಡಿದ್ದಾರೆ
  • “ನಕಾರಾತ್ಮಕ ಕಾಮೆಂಟ್‌ಗೆ ಗಮನ ಕೊಡುವುದಿಲ್ಲ. ಡಬ್ಬಿಂಗ್‌ ಒಂದು ದೊಡ್ಡ ಉದ್ಯಮ.
  • ಸ್ಕ್ರಿಪ್ಟ್‌ಗೆ ಸಮಯ, ಶ್ರಮ ಕೊಡುತ್ತೇನೆ. ಅದಕ್ಕೆ ಸಂಭಾವನೆ ತಗೊಳ್ಳುತ್ತೇನೆ,” ಎಂದು ಹೇಳಿದ್ದಾರೆ.
ಕಂಚಿನ ಕಂಠದ ವಶಿಷ್ಟ ಸಿಂಹ ಕೆಲವೇ ನಿಮಿಷದ ಡಬ್ಬಿಂಗ್‌ಗೆ ಪಡೆಯುವ ಸಂಭಾವನೆ ಎಷ್ಟು ಕೋಟಿ ಗೊತ್ತೇ?

ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮ ಖಡಕ್‌ ನಟನೆಯಿಂದ ಮಿಂಚುತ್ತಿರುವ ನಟ ವಸಿಷ್ಠ ಸಿಂಹ, ಇತ್ತೀಚೆಗೆ ಒಂದು ಸಣ್ಣ ಜಾಹೀರಾತಿಗೆ ತಮ್ಮ ಧ್ವನಿ ನೀಡಿದ್ದಕ್ಕೆ ಪಡೆದ 6 ಲಕ್ಷ ರೂಪಾಯಿ ಸಂಭಾವನೆಯ ಬಗ್ಗೆ ತೆಲುಗು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಈ ಮಾಹಿತಿ ಬಹಿರಂಗವಾದ ಬಳಿಕ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ನಕಾರಾತ್ಮಕ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. ಆದರೆ, ಈ ಟೀಕೆಗಳಿಗೆ ತಿರುಗೇಟು ನೀಡಿರುವ ವಸಿಷ್ಠ, ತಮ್ಮ ಸಂಭಾವನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ ವಸಿಷ್ಠ ಸಿಂಹ, ಕೆಲವೇ ನಿಮಿಷಗಳ ಜಾಹೀರಾತಿಗೆ ತಮ್ಮ ಕಂಚಿನ ಕಂಠದ ಧ್ವನಿಯನ್ನು ಒದಗಿಸಿದ್ದಕ್ಕೆ 6 ಲಕ್ಷ ರೂಪಾಯಿ ಸಂಭಾವನೆ ಪಡೆದಿರುವುದಾಗಿ ತಿಳಿಸಿದ್ದಾರೆ. “ನನ್ನ ಧ್ವನಿ, ನನ್ನ ಸಮಯ, ಮತ್ತು ಅವರ ಹಣ. ಇದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಇದು ಚಿತ್ರರಂಗದಲ್ಲಿ ಸಾಮಾನ್ಯವಾದ ವಿಚಾರ. ಈ ಹಣಕ್ಕೆ ತೆರಿಗೆ, ಜಿಎಸ್‌ಟಿಯನ್ನೂ ಪಾವತಿಸುತ್ತೇವೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಜುಲೈನಿಂದ ಸರ್ಕಾರಿ ನೌಕರರಿಗೆ ಡಬಲ್ ಜಾಕ್‌ಪಾಟ್ !ವೇತನ ಹೆಚ್ಚಳದೊಂದಿಗೆ ಖಾತೆ ಸೇರುವುದು ಈ ಮೊತ್ತ ಕೂಡಾ !

ಟೀಕೆಗೆ ತಿರುಗೇಟು:

ಈ ಸಂಭಾವನೆಯ ಬಗ್ಗೆ ಕೆಲವರು ನಕಾರಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದಕ್ಕೆ ಪ್ರತಿಕ್ರಿಯಿಸಿರುವ ವಸಿಷ್ಠ, “ಕೆಲವು ಹತಾಶ ಜೀವಿಗಳಿಗೆ ಸಾಂತ್ವನ ಹೇಳಬೇಕಷ್ಟೇ. ಇಂತಹ ಕಾಮೆಂಟ್‌ಗಳಿಗೆ ರಿಯಾಕ್ಟ್‌ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರ ಮನಸ್ಥಿತಿಯೂ ಬದಲಾಗುವುದಿಲ್ಲ, ನಮ್ಮ ಪರಿಸ್ಥಿತಿಯೂ ಬದಲಾಗುವುದಿಲ್ಲ,” ಎಂದು ತಿರುಗೇಟು ನೀಡಿದ್ದಾರೆ. “ಕಂಪನಿಗೆ ನನ್ನ ಧ್ವನಿ ಬೇಕಿತ್ತು, ಅದಕ್ಕೆ ಹಣ ಕೊಟ್ಟು ತೆಗೆದುಕೊಂಡಿತು. ಇದು ವ್ಯಾಪಾರವಷ್ಟೇ,” ಎಂದು ಅವರು ಸಮರ್ಥನೆ ನೀಡಿದ್ದಾರೆ.

ಡಬ್ಬಿಂಗ್‌ ಕ್ಷೇತ್ರವನ್ನು ಒಂದು ದೊಡ್ಡ ಉದ್ಯಮವೆಂದು ವಿವರಿಸಿರುವ ವಸಿಷ್ಠ, “ಜಾಹೀರಾತು ಡಬ್ಬಿಂಗ್‌ ಎಂದರೆ ಕೇವಲ ಮಾತನಾಡಿ ಬರೆಯುವುದು ಅಲ್ಲ. ಸ್ಕ್ರಿಪಂಟ್‌ಗಾಗಿ ಸಮಯ, ಶ್ರಮ ವ್ಯಯಿಸಬೇಕು. ಅದಕ್ಕೆ ತಕ್ಕಂತೆ ಸಂಭಾವನೆ ನಿಗದಿಯಾಗುತ್ತದೆ. ಇದರಲ್ಲಿ ಹಣವಿದೆ ಎಂಬುದು ಸಹಜ. ನಾನು ಪ್ರತಿ ವರ್ಷ ಒಂದೇ ಕಂಪನಿಗೆ ಇಂತಹ ಕೆಲಸ ಮಾಡುತ್ತೇನೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂತಾರ-1 ಶೂಟಿಂಗ್ ಸೆಟ್ ನಲ್ಲಿ ಮತ್ತೊಂದು ಮಹಾ ದುರಂತ, 30 ಮಂದಿ ಪ್ರಾಣಾಪಾಯದಿಂದ ಪಾರು

ಕೆಜಿಎಫ್ ಸಿನಿಮಾದಲ್ಲಿ ನಟಿಸಿದ ಬಳಿಕ ವಸಿಷ್ಠ ಸಿಂಹರಿಗೆ ಕನ್ನಡ, ತೆಲುಗು ಸೇರಿದಂತೆ ಇತರೆ ಚಿತ್ರರಂಗಗಳಿಂದಲೂ ಅವಕಾಶಗಳು ಹೆಚ್ಚಾಗಿವೆ. ತೆಲುಗಿನ ‘ಓದೆಲ-2’ ಚಿತ್ರ ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿದ್ದು, ಅವರ ಜನಪ್ರಿಯತೆಗೆ ಮತ್ತಷ್ಟು ಮೆರಗು ತಂದಿದೆ. ಖಳನಾಯಕ ಮತ್ತು ಪಾತಕಾಯಕಾಗಿ ಚಿತ್ರರಂಗಕ್ಕೆ ಕಾಲಿಟ್ಟ ವಸಿಷ್ಠ, ಇದೀಗ ನಾಯಕನಾಗಿ, ಗಾಯಕನಾಗಿ, ಡಬ್ಬಿಂಗ್ ಕಲಾವಿದನಾಗಿ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.

ತಮ್ಮ ಸಂಭಾವನೆಯ ಬಗ್ಗೆ ಗುಟ್ಟು ಬಿಚ್ಚಿಟ್ಟಿರುವ ವಸಿಷ್ಠ ಸಿಂಹ, ನಕಾರಾತ್ಮಕ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸದಲ್ಲಿ ಗಮನಹರಿಸುವುದಾಗಿ ಹೇಳಿದ್ದಾರೆ. “ನನ್ನ ಕೆಲಸಕ್ಕೆ ಬೆಲೆಯಿದೆ, ಅದನ್ನು ನಾನು ತೆಗೆದುಕೊಳ್ಳುತ್ತೇನೆ. ಎಲ್ಲವೂ ಕಾನೂನುಬದ್ಧವಾಗಿದೆ,” ಎಂದು ತಿಳಿಸಿರುವ ಅವರು, ತಮ್ಮ ಕಂಚಿನ ಕಂಠದಿಂದ ಮತ್ತಷ್ಟು ಮಿಂಚಲು ಸಿದ್ಧರಾಗಿದ್ದಾರೆ.

ಪ್ರಸ್ತುತ ವಸಿಷ್ಠ ಸಿಂಹ ಕನ್ನಡ, ತೆಲುಗು ಮಾತ್ರವಲ್ಲದೆ ಇತರ ಭಾಷೆಗಳ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News