ಬಾಲಿವುಡ್ ನಟ ಅಜಯ್ ದೇವಗನ್ ತಂದೆ ವೀರು ದೇವಗನ್ ಇನ್ನಿಲ್ಲ

ಹಿರಿಯ ಸಾಹಸ ನಿರ್ದೇಶಕ, ಚಿತ್ರ ನಿರ್ಮಾಪಕ ವೀರು ದೇವಗನ್ ಸೋಮವಾರ ನಿಧನರಾಗಿದ್ದಾರೆ. 

Last Updated : May 27, 2019, 03:42 PM IST
ಬಾಲಿವುಡ್ ನಟ ಅಜಯ್ ದೇವಗನ್ ತಂದೆ ವೀರು ದೇವಗನ್ ಇನ್ನಿಲ್ಲ title=

ಮುಂಬೈ: ಹಿರಿಯ ಸಾಹಸ ನಿರ್ದೇಶಕ, ಚಿತ್ರ ನಿರ್ಮಾಪಕ ವೀರು ದೇವಗನ್(77) ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. 

ಮುಂಬೈ ಸಾಂತಾಕ್ರೂಸ್‌ನ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೀರು ಅವರು ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 6 ಗಂಟೆಗೆ ಮುಂಬೈನ ವೈಲ್ ಪಶ್ಚಿಮದಲ್ಲಿರುವ ರುದ್ರಭೂಮಿಯಲ್ಲಿ ನಡೆಯಲಿದೆ.

ವೀರು ದೇವಗನ್ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸಾಹಸಮಯ ದೃಶ್ಯಗಳನ್ನು ಮಾಡಿದ್ದಾರೆ. 1999 ರಲ್ಲಿ ತೆರೆಕಂಡ ಅಜಯ್ ದೇವಗನ್, ಅಮಿತಾಭ್ ಬಚ್ಚನ್, ಮನಿಷಾ ಕೊಯಿರಾಲಾ ಮತ್ತು ಸುಶ್ಮಿತಾ ಸೇನ್ ನಟಿಸಿರುವ ಹಿಂದುಸ್ತಾನ್ ಕಿ ಕಸಮ್ ಚಿತ್ರದ ಮೂಲಕ ನಿರ್ದೇಶಕರಾದ ವೀರು ದೇವಗನ್, ದಿಲ್ ಕ್ಯಾ ಕರೇ ಮತ್ತು ಸಿಂಗಾಸನ್ ಚಿತ್ರಗಳನ್ನೂ ಸಹ ಅವರು ನಿರ್ದೇಶಿಸಿದ್ದರು.

Trending News