ಶ್ವೇತ ಉಡುಗೆಯಲ್ಲಿ ಬೀಚ್‌ನಲ್ಲಿ ವಿಹರಿಸಿದ ಸುಷ್ಮಿತಾ ಸೇನ್! ವೈರಲ್ ಆಯ್ತು ವೀಡಿಯೋ

ಸದ್ಯ ಮಾಲ್ಡೀವ್ಸ್ ನಲ್ಲಿರುವ ಸುಷ್ಮಿತಾ ಸೇನ್, ಕಡಲತೀರದಲ್ಲಿ ಶ್ವೇತ ಬಣ್ಣದ ಉಡುಗೆ ತೊಟ್ಟು ವಿಹರಿಸುತ್ತಿರುವ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‌ ಖಾತೆಗೆ ಅಪ್ಲೋಡ್ ಮಾಡಿದ್ದಾರೆ. 

Last Updated : Sep 15, 2019, 07:39 AM IST
ಶ್ವೇತ ಉಡುಗೆಯಲ್ಲಿ ಬೀಚ್‌ನಲ್ಲಿ ವಿಹರಿಸಿದ ಸುಷ್ಮಿತಾ ಸೇನ್! ವೈರಲ್ ಆಯ್ತು ವೀಡಿಯೋ title=

ನವದೆಹಲಿ: ಮಾಜಿ ಮಿಸ್ ಯೂನಿವರ್ಸ್ ಮತ್ತು ಬಾಲಿವುಡ್ ನಟಿ ಸುಷ್ಮಿತಾ ಸೇನ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ತಮ್ಮ ಪ್ರತಿನಿತ್ಯದ ಅಪ್ಡೇಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.

ಸದ್ಯ ಮಾಲ್ಡೀವ್ಸ್ ನಲ್ಲಿರುವ ಸುಷ್ಮಿತಾ ಸೇನ್, ಕಡಲತೀರದಲ್ಲಿ ಶ್ವೇತ ಬಣ್ಣದ ಉಡುಗೆ ತೊಟ್ಟು ವಿಹರಿಸುತ್ತಿರುವ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‌ ಖಾತೆಗೆ ಅಪ್ಲೋಡ್ ಮಾಡಿದ್ದಾರೆ. ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು 77 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದು, 4 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಬಾಯ್‌ಫ್ರೆಂಡ್ ರೋಹ್ಮನ್ ಶಾವ್ಲ್ ಜತೆಗೆ ವರ್ಕ್‌ಔಟ್ ಮಾಡುತ್ತಿರುವ ವಿಡಿಯೋವನ್ನು ಸುಷ್ಮಿತಾ ಸೇನ್ ಇನ್‍ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಇವರ ನಡುವಿನ ಅನುಬಂಧವನ್ನು ತಿಳಿಸುವಂತೆ ಇರುವ ಈ ವರ್ಕ್‍ಔಟ್ ವೀಡಿಯೋಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬಂದಿತ್ತು.

Trending News