)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜೈಲಿನಲ್ಲಿ ಇದ್ದರೂ ಅವರ ದೀ ಡೆವಿಲ್ ಮೂವಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 11 ರಂದು ತೆರೆಗೆ ಅಪ್ಪಳಿಸಿದ್ದ ಡೆವಿಲ್ ಮೂವಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದರಿಂದ ಸಿನಿಮಾ ನಿರ್ಮಾಪಕರು ಫುಲ್ ಹ್ಯಾಪಿಯಾಗಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಡಿ ಬಾಸ್ ಫ್ಯಾನ್ಸ್ ಕುರಿತು ಮನ ತುಂಬಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ ದರ್ಶನ್ ಅವರು, ದೀ ಡೆವಿಲ್ ಸಿನಿಮಾದ ಯಶಸ್ವಿ ನನಗೆ ತುಂಬಾ ಅಂದರೆ ತುಂಬಾ ಖುಷಿ ಕೊಡುತ್ತಿದೆ. ದರ್ಶನ್ ಇಲ್ಲದಿದ್ದರೂ ಅವರ ಅಭಿಮಾನಿಗಳು, ದರ್ಶನ್ ಸಿನಿಮಾವನ್ನು, ದರ್ಶನ್ರನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಾರೆ ಎನ್ನುವುದಕ್ಕೆ ಇದೊಂದು ಬೆಸ್ಟ್ ಉದಾಹರಣೆ ಎಂದು ಫ್ಯಾನ್ಸ್ಗಳನ್ನು ಹೊಗಳಿದ್ದಾರೆ.
ಅಭಿಮಾನಿಗಳ ಋಣ ತಿರೀಸೋಕೆ ಪದೇ ಪದೇ ಹುಟ್ಟಿ ಬರಬೇಕು ಎಂದು ಅನಿಸುತ್ತಿದೆ. ಸಿನಿಮಾ ಬಿಡುಗಡೆ ದಿನ ಮೊದಲ ಬಾರಿಗೆ 12 ಗಂಟೆಗೆ ಫೋನ್ ಮಾಡಿ ವಿಜಿ ಸಿನಿಮಾ ಹೇಗಿದೆ?, ಡೆವಿಲ್ ನೋಡಿ ಅಭಿಮಾನಿಗಳು ಚೆನ್ನಾಗಿ ಮಜಾ ಮಾಡುತ್ತಿದ್ದಾರಾ?, ಮೂವಿ ಚೆನ್ನಾಗಿ ಬಂದಿದೆಯಾ?, ನಿರ್ಮಾಪಕರು ಹ್ಯಾಪಿಯಾಗಿ ಇದ್ದಾರಾ ಎಂದು ದರ್ಶನ್ ಅವರು ಕೇಳಿದರು ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.
ಯಾರೇ ಆಗಲಿ ನನ್ನ ಬಗ್ಗೆ, ನನ್ನ ಮಗನ ಬಗ್ಗೆ ಮಾತನಾಡಿದರೆ ಯಾವುದೇ ಎಫೆಕ್ಟ್ ಆಗಲ್ಲ. ಈಗ ಶೇಕಡಾ 90 ರಷ್ಟು ಜನ ಅವರ ಮೇಲೆ ಪ್ರೀತಿ, ಅಭಿಮಾನ ತೋರಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಬಗ್ಗೆ ಬರುವ ಯಾವುದೇ ನೆಗೆಟಿವ್ ಅನ್ನು ನಾನು ನೋಡದೇ ಇಲ್ಲ. ಹೇಟ್ ಕಾಮೆಂಟ್ಸ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಐ ಡೋಂಟ್ ಕೇರ್ ಎಂದು ವಿರೋಧಿಗಳಿಗೆ ವಿಜಯಲಕ್ಷ್ಮಿ ದರ್ಶನ್ ಟಾಂಗ್ ಕೊಟ್ಟಿದ್ದಾರೆ.
ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು, ಮಹಿಳೆಯರ ಬಳಿ ಹೇಗೆ ವರ್ತನೆ ಮಾಡಬೇಕು ಅಂತ ದರ್ಶನ್ ಅಭಿಮಾನಿಗಳಿಗೆ ಎಲ್ಲ ಗೊತ್ತಿದೆ. ದರ್ಶನ್ ಫ್ಯಾನ್ಸ್ ಅವಿದ್ಯಾವಂತರು ಎಂದು ಹೇಳುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ವಿಜಯಲಕ್ಷ್ಮಿ ಅವರು, ದರ್ಶನ್ ಸೆಲೆಬ್ರಿಟಿಗಳಿಂದ ಫಂಡ್ ಕಲೆಕ್ಟ್ ಬಾಡಿ ಸಂಸ್ಥೆ ಓಪನ್ ಮಾಡೋಣ. ಯಾರು ಯಾರು ದರ್ಶನ್ ಫ್ಯಾನ್ಸ್ ಅನ್ಎಜುಕೇಟೆಡ್ ಅಂತ ಹೇಳುತ್ತಿದ್ದಾರಲ್ಲ ಅವರನ್ನು ಕರೆದುಕೊಂಡು ಬಂದು ಶಿಕ್ಷಣ ಕೊಡಿ ಎಂದು ಕೇಳೋಣ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.