vincy aloshious about casting couch: ಮಲಯಾಳಂ ಚಲನಚಿತ್ರೋದ್ಯಮ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ. ಉದ್ಯಮದ ಅನೇಕ ನಟಿಯರು ಸೆಟ್‌ಗಳಲ್ಲಿ ನಡೆದ ಶೋಷಣೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಮತ್ತೊಬ್ಬ ನಟಿ ವಿನ್ಸಿ ಅಲೋಶಿಯಸ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ. 29 ವರ್ಷದ ನಟಿ ತನ್ನ ಸಹ ನಟನೊಬ್ಬ ಸೆಟ್‌ನಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದನೆಂದು ಬಹಿರಂಗಪಡಿಸಿದ್ದಾರೆ. ನಟ ಮಾದಕ ದ್ರವ್ಯಗಳ ನಶೆಯಲ್ಲಿದ್ದ ಎಂದು ವಿನ್ಸಿ ಹೇಳಿದ್ದಾರೆ. ಇತ್ತೀಚೆಗೆ ವಿನ್ಸಿ ಡ್ರಗ್ಸ್ ತೆಗೆದುಕೊಳ್ಳುವ ಯಾವುದೇ ನಟನೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದರು.
ನಟ ವಿನ್ಸಿ ಅಲೋಶಿಯಸ್ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು. "ಒಬ್ಬ ವ್ಯಕ್ತಿ ಮಾದಕ ದ್ರವ್ಯ ಸೇವಿಸುತ್ತಿದ್ದಾನೆಂದು ನನಗೆ ತಿಳಿದರೆ ನಾನು ಅವನೊಂದಿಗೆ ಯಾವುದೇ ಚಿತ್ರದಲ್ಲಿ ಕೆಲಸ ಮಾಡುವುದಿಲ್ಲ" ಎಂದು ಹೇಳಿದ್ದರು. ಈ ಹೇಳಿಕೆಗಾಗಿ ವಿನ್ಸಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಯಿತು. ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ, ವಿನ್ಸಿಯ ಹೊಸ ವೀಡಿಯೊ ಈಗ ಹೊರಬಂದಿದೆ.
ವಿನ್ಸಿ ಅಲೋಸಿಯಸ್ ಈ ವಿಡಿಯೋದಲ್ಲಿ ತನಗಾದ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಸಿನಿಮಾ ಸೆಟ್‌ನಲ್ಲಿನ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಅವರು ಮಾಡಿದ ಘೋಷಣೆಯು ಸಿನಿಮಾ ಸೆಟ್‌ನಲ್ಲಿನ ವೈಯಕ್ತಿಕ ಅನುಭವದಿಂದಾಗಿ ಎಂದು ನಟಿ ಹೇಳಿದರು.
ಇದನ್ನೂ ಓದಿ: ಖ್ಯಾತ ಸಿರೀಯಲ್ ನಟ-ನಟಿಯ ದಾಂಪತ್ಯ ಅಂತ್ಯ! ಮದುವೆಯಾದ 2 ತಿಂಗಳಿಗೆ ವಿಚ್ಛೇದನ ಘೋಷಿಸಿದ ಫೇಮಸ್ ಜೋಡಿ..
"ನಾನು ಒಂದು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ಆ ಚಿತ್ರದ ನಾಯಜಕ ನಟ ಡ್ರಗ್ಸ್ ಸೇವಿಸುತ್ತಿದ್ದ. ನಶೆಯಲ್ಲಿ ಅವನು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದನು. ಅವನ ಜೊತೆ ಕೆಲಸ ಮಾಡುವುದು ಸುಲಭವಾಗಿರಲಿಲ್ಲ" ಎಂದು ಹೇಳಿದ್ದಾರೆ.
"ನನ್ನ ಉಡುಪಿನಲ್ಲಿ ಏನೋ ಸಮಸ್ಯೆ ಇದೆ ಎಂದು ಹೇಳಿದ. ನಾನು ಅದನ್ನು ಸರಿಪಡಿಸುತ್ತೇನೆ ಎಂದ. ನಂತರ ಇದ್ದಕ್ಕಿದ್ದಂತೆ, ಅವನು ನನ್ನ ಉಡುಪನ್ನು ಸರಿ ಮಾಡಲು ಪ್ರಾರಂಭಿಸಿದ. ಅವನು ಎಲ್ಲರ ಮುಂದೆ ಈ ರೀತಿ ಮಾಡಿದನು. ಅವನ ಬಾಯಿಂದ ಏನೋ ಬಿಳಿ ವಸ್ತು ಮೇಜಿನ ಮೇಲೆ ಬಿದ್ದಿತು. ಅವನು ಸೆಟ್‌ನಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗಿತ್ತು" ಎಂದಿದ್ದಾರೆ.
"ವೈಯಕ್ತಿಕ ಜೀವನ ಬೇರೆ.. ಆದರೆ ನೀವು ಕೆಲಸ ಮಾಡುವ ಸ್ಥಳದಲ್ಲಿ ಡ್ರಗ್ಸ್ ಬಳಸುವುದು ಮತ್ತು ನಿಮ್ಮ ಸುತ್ತಲಿನ ಎಲ್ಲರಿಗೂ ಅನಾನುಕೂಲವ ಉಂಟು ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ" ಎಂದು ವಿನ್ಸಿ ಹೇಳಿದ್ದಾರೆ.
ಇದನ್ನೂ ಓದಿ: ಒಂದು ಕಾಲದಲ್ಲಿ ಸ್ಟಾರ್ ಹಿರೋಯಿನ್ ಪಟ್ಟ.. ಇಂದು ವೇಶ್ಯೆ ಪಾತ್ರ! ಯಾರು ಗೊತ್ತಾ?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









