ಡಾಕ್ಟರ್ ಬಳಿ ಹೋದ ಈ ಬಾಲಿವುಡ್ ನಟಿ! ವೀಡಿಯೋ ಆಯ್ತು ವೈರಲ್!

ಬಾಲಿವುಡ್ ನಟಿ ಜಾಕ್ವಿಲಿನ್ ಫಾರ್ನಾಂಡಿಸ್'ನ ಒಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

Updated: Feb 21, 2019 , 03:54 PM IST
ಡಾಕ್ಟರ್ ಬಳಿ ಹೋದ ಈ ಬಾಲಿವುಡ್ ನಟಿ! ವೀಡಿಯೋ ಆಯ್ತು ವೈರಲ್!

ನವದೆಹಲಿ: ಬಾಲಿವುಡ್ ನಟಿ ಜಾಕ್ವಿಲಿನ್ ಫಾರ್ನಾಂಡಿಸ್'ನ ಒಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಂಥದ್ದೇನಿದೆ ಆ ವೀಡಿಯೋದಲ್ಲಿ ಅಂತ ಯೋಚಿಸುತ್ತಿದ್ದೀರಾ? ಖಂಡಿತಾ ಇದೆ!

ಈ ವೀಡಿಯೋದಲ್ಲಿ ಜಾಕ್ವಿಲಿನ್ ಒಂದು ಡೆಂಟಲ್ ಕ್ಲಿನಿಕ್ ಕಾಣಿಸಿಕೊಂಡಿದ್ದಾರೆ. ಸದಾ ಮೋಜು ಮಸ್ತಿ ಮಾಡಿಕೊಂಡಿರುವ ಜಾಕ್ವಿಲಿನ್ ಇಲ್ಲಿಯೂ ಹಾಗೇ ಮಾಡಿದ್ದಾರೆ. ಹಲ್ಲಿಗೆ ಚಿಕಿತ್ಸೆ ನೀಡುವಾಗ ಬಾಯಿಕೆ ಹಾಕುವ ಕ್ಲಿಪ್ ಧರಿಸಿ ಟ್ರೈ ಮಾಡ್ತಿರೋ ದೃಶ್ಯ ಇದೆ. ಆ ಕ್ಲಿಪ್ ಹಾಕಿಕೊಳ್ಳುತ್ತಿದ್ದಂತೆ ಜಾಕ್ವಿಲಿನ್ ಸುಂದರವಾದ ಮುಖ ಬಹಳ ವಿಚಿತ್ರವಾಗಿ ಕಂಡಿದೆ. ಇದನ್ನು ಕಂಡು ಜನ ಬಿದ್ದು ಬಿದ್ದು ನಕ್ಕಿದ್ದಾರೆ. ಈ ವೀಡಿಯೋನ ಸ್ವತಃ ಜಾಕ್ವಿಲಿನ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದನ್ನು ನೋಡಿದ್ರೆ ನೀವೂ ಕೂಡ ನಗ್ತೀರ...!